ಗೋಣಿಕೊಪ್ಪ ವರದಿ, ಅ. ೩೧: ವಿಶ್ವ ಪಾರ್ಶ್ವವಾಯು ದಿನಾಚರಣೆ ಅಂಗವಾಗಿ ಗೋಣಿಕೊಪ್ಪ ಲಯನ್ಸ್ ಕ್ಲಬ್, ಮೈಸೂರು ಅಪೋಲೊ ಬಿಜಿಎಸ್ ಆಸ್ಪತ್ರೆ, ಲೋಪಮುದ್ರ ಮೆಡಿಕಲ್ ಸೆಂಟರ್ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ೫ ಕಿ.ಮೀ.ಮ್ಯಾರಥಾನ್ನಲ್ಲಿ ಯುವ ಸಮೂಹ ಪಾಲ್ಗೊಂಡು ಪಾರ್ಶುವಾಯು ಬಗ್ಗೆ ಜಾಗೃತಿ ಮೂಡಿಸಿದರು.
ಲೋಪಮುದ್ರ ಆಸ್ಪತ್ರೆಯಿಂದ ಅತ್ತೂರು ಸರ್ಕಾರಿ ಶಾಲೆವರೆಗೆ ಓಟ ನಡೆಯಿತು. ಹಿರಿಯರು ಕೂಡ ಪಾಲ್ಗೊಂಡು ಕಿರಿಯರನ್ನು ಪ್ರೋತ್ಸಾಹಿಸಿದರು. ಸ್ಥಳೀಯ ಶಾಲಾ ಕಾಲೇಜು ವಿದ್ಯಾರ್ಥಿಗಳು ಹೆಚ್ಚಾಗಿ ಪಾಲ್ಗೊಂಡರು. ನೀಲಿ ಬಣ್ಣ ಉಡುಪು ತೊಟ್ಟು ಜಾಗೃತಿ ಮೂಡಿಸಲಾಯಿತು.
ಮೈಸೂರು ಅಪೋ ಲೊ ಬಿಜಿಎಸ್ ಆಸ್ಪತ್ರೆಯ ನರತಜ್ಞ ಡಾ. ಅಮೀರ್ ಮೋಹಿನ್ ಮಾತನಾಡಿ, ಪಾರ್ಶ್ವವಾಯು ಬಂದಾಗ ತಕ್ಷಣದ ೪ ರಿಂದ ೬ ಗಂಟೆ ಒಳಗೆ ಚಿಕಿತ್ಸೆ ನೀಡುವ ಮೂಲಕ ಗುಣಮುಖವಾಗಿಸಬಹುದು. ಪಾರ್ಶ್ವವಾಯು ರೋಗ ಹೆಚ್ಚಾಗುತ್ತಿದ್ದು, ಈ ಬಗ್ಗೆ ಹೆಚ್ಚು ಜಾಗೃತಿ ಅವಶ್ಯವಾಗಿದೆ. ಅಲೋಪತಿ ಚಿಕಿತ್ಸೆಯಿಂದ ಕೂಡ ರೋಗ ಗುಣಪಡಿಸಲು ಸಾಧ್ಯವಿದೆ. ಈ ಬಗ್ಗೆ ಅಪೋ ಲೊ ಬಿಜಿಎಸ್ ವೈದ್ಯರ ತಂಡ ವಿಶೇಷ ಚಿಕಿತ್ಸಾ ಘಟಕವನ್ನು ಹೊಂದಿದ್ದು, ರೋಗಿಗಳ ರಕ್ಷಣೆಗೆ ತೊಡಗಿಕೊಂಡಿದೆ. ತಕ್ಷಣ ಚಿಕಿತ್ಸೆಗೆ ಒಳಗಾಗುವ ಮೂಲಕ ದೈಹಿಕ ವಿಕಲಾಂಗತೆಯನ್ನು ಕೂಡ ನಿಯಂತ್ರಿಸಬಹುದು ಎಂದರು.
ಗೋಣಿಕೊಪ್ಪ ಲಯನ್ಸ್ ಕ್ಲಬ್ ಅಧ್ಯಕ್ಷ ಡಾ. ಅಮ್ಮಂಡ ಲಿರಿಶ್ ಚಿಣ್ಣಪ್ಪ ಮಾತನಾಡಿ, ಮ್ಯಾರಥಾನ್ ಮೂಲಕ ಜನರಲ್ಲಿ ಪಾರ್ಶ್ವವಾಯು ರೋಗದ ಜಾಗೃತಿ ಮೂಡಿಸುತ್ತಿರುವುದರಿಂದ ರೋಗ ನಿಯಂತ್ರಣಕ್ಕೆ ಸಹಕಾರಿ. ರೋಗದ ಗುಣಲಕ್ಷಣ, ಕಾರಣಗಳನ್ನು ಜನರು ಅರಿತುಕೊಳ್ಳಬೇಕು ಎಂದರು.
ಲೋಪಮುದ್ರ ಮೆಡಿಕಲ್ ಸೆಂಟರ್ ಮುಖ್ಯ ವೈದ್ಯ ಡಾ. ಮುಕ್ಕಾಟೀರ ಅಮೃತ್ ನಾಣಯ್ಯ ಮಾತನಾಡಿ, ರೋಗಕ್ಕೆ ಒಳಗಾದವರು ಭಯಪಡದೆ ಸೂಕ್ತ ಚಿಕಿತ್ಸೆಗೆ ಮುಂದಾಗಬೇಕು ಎಂದು ಸಲಹೆ ನೀಡಿದರು.
ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿ, ಜಿಲ್ಲೆಯಲ್ಲಿ ಪಾರ್ಶ್ವವಾಯು ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಗ್ರಾಮ ಮಟ್ಟದಲ್ಲಿ ರೋಗದ ಮೂಲದ ಬಗ್ಗೆ ಜಾಗೃತಿ ಹೆಚ್ಚಾಗಬೇಕಿದೆ ಎಂದರು.
ನೇತ್ರ ತಜ್ಞರಾದ ಡಾ. ಮುಕ್ಕಾಟೀರ ಸೌಮ್ಯ ಗಣೇಶ್, ಡಾ. ರುತು, ಮೈಸೂರು ಅಪೋಲೊ ಬಿಜಿಎಸ್ ಆಸ್ಪತ್ರೆಯ ಮ್ಯಾರಥಾನ್ ಸಂಯೋಜಕ ರಾಕೇಶ್ ಉತ್ತಪ್ಪ ಇದ್ದರು.
ಮ್ಯಾರಥಾನ್ನಲ್ಲಿ ಕಾಲೇಜು ಬಾಲಕಿಯರ ವಿಭಾಗದಲ್ಲಿ ಎಂ.ಯು. ದಿಶಾ ಪೊನ್ನಮ್ಮ (ಪ್ರ), ಟಿ.ಪಿ ಮುತ್ತಮ್ಮ (ದ್ವಿ), ಮದುಶ್ರೀ (ತೃ). ಬಾಲಕರಲ್ಲಿ : ಯು.ಆರ್ ಮಂದಣ್ಣ (ಪ್ರ), ಪಿ.ಸಿ ಗೌತಮ್ (ದ್ವಿ), ಪಿ.ಜಿ. ಭವಿಶ್ (ತೃ). ಪ್ರೌಢÀಬಾಲಕರ ವಿಭಾಗದಲ್ಲಿ ಎಂ. ನಿಶಾಂತ್ (ಪ್ರ), ಎ.ಎಂ, ಪೂವಣ್ಣ (ದ್ವಿ), ಬಿ.ಜೆ ಗಣಪತಿ (ತೃ), ಬಾಲಕಿಯರಲ್ಲಿ ಬಿ.ಯು. ಮನಸ್ವಿ (ಪ್ರ), ಎಂ.ಬಿ ಮುತ್ತಮ್ಮ (ದ್ವಿ), ಎಂ.ವಿ. ಗಂಗಮ್ಮ (ತೃ). ಮುಕ್ತ ಪುರುಷರ ವಿಭಾಗದಲ್ಲಿ ಕೆ.ಎಂ. ಶಾಜಿ (ಪ್ರ), ಹೆಚ್.ಕೆ. ವಿನೋದ್ (ದ್ವಿ), ಸಿ.ಬಿ ಅಯ್ಯಪ್ಪ (ತೃ), ಮಹಿಳೆಯರಲ್ಲಿ ಕೆ.ಟಿ. ಚೋಂದಮ್ಮ (ಪ್ರ), ಶ್ರೇಯನ ಗಣಪತಿ (ದ್ವಿ), ಎಂ.ಯು. ದೇಚಮ್ಮ (ತೃ), ೭ ವರ್ಷದ ಬಾಲಕ ಆದಿತ್ಯ ಭಾಗವಹಿಸಿ ವಿಶೇಷ ಬಹುಮಾನ ಗಿಟ್ಟಿಸಿಕೊಂಡರು.