ಮಡಿಕೇರಿ, ಅ. ೩೧: ಕೊಡಗು ಪತ್ರಿಕಾಭವನ ಟ್ರಸ್ಟ್ನ ೨೧ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿತ ಮಾಧ್ಯಮ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್‌ಕುಮಾರ್ ಅವರ ಸ್ಮರಣಾರ್ಥ ಏರ್ಪಡಿಸಲಾಗಿದ್ದ ಪುನೀತ ನಮನ ಗಾಯನ ಕಾರ್ಯಕ್ರಮ ಗಮನ ಸೆಳೆಯಿತು.

ನಗರದ ಪತ್ರಿಕಾಭವನದಲ್ಲಿ ಶನಿವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಕೊಡಗು ಪತ್ರಕರ್ತರ ಸಂಘದ ವತಿಯಿಂದ ಸಂಘದ ಪ್ರಧಾನ ಕಾರ್ಯದರ್ಶಿ ಉಜ್ವಲ್ ರಂಜಿತ್ ನೇತೃತ್ವದಲ್ಲಿ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್, ಸದಸ್ಯರಾದ ಪ್ರವೀಣ್ ಕುಮಾರ್, ರಜತ್‌ರಾಜ್, ಶ್ರೀರಕ್ಷಾ ಪ್ರಭಾಕರ್, ಮಧುರ ದಿನೇಶ್, ರೇಖಾ ಶ್ರೀಧರ್, ಚಂದನ್ ನೆಲ್ಲಿತ್ತಾಯ, ಹೃತಿಕ್ಷಾ ಅವರುಗಳು ಪುನೀತ್ ರಾಜ್‌ಕುಮಾರ್ ಅವರ ಅನೇಕ ಹಾಡುಗಳನ್ನು ಹಾಡಿದರು. ಮೊಬೈಲ್ ಬೆಳಕಿನ ಚಿತ್ತಾರದೊಂದಿಗೆ ಎಲ್ಲರೂ ಕೆಲಕಾಲ ಪುನೀತ್ ಅವರಿಗೆ ಗೌರವ ನಮನ ಸಲ್ಲಿಸಿದರು.

ಮೂರ್ನಾಡಿನ ಅನುಪದ ನಾಗರಾಜ್ ಅವರಿಂದ ಶಾಸ್ತಿçÃಯ ನೃತ್ಯ, ಮೌಲ್ಯ, ಕುಡೆಕಲ್ ನಿಹಾಲ್, ಸುರಕ್ಷಾ, ಚರಿತ, ನಿಧಿ, ನಿತ್ಯ ಅವರಿಂದ ನೃತ್ಯಗಳೂ ಮನರಂಜಿಸಿದವು. ಶ್ಲೋಕದ ಮೂಲಕ ಪುಟಾಣಿ ಆಹನ್ ಪೂಜಾರಿ ಗಮನ ಸೆಳೆದರೆ, ಕೊಡಗು ಪತ್ರಕರ್ತರ ಸಂಘದ ಸಲಹೆಗಾರ ಬಿ.ಜಿ. ಅನಂತಶಯನ ಮತ್ತು ಕುಶಾಲನಗರ ತಾಲೂಕು ಅಧ್ಯಕ್ಷ ವಿಘ್ನೇಶ್ ಭೂತನಕಾಡು, ತಾನ್ಯ ಮುರಳೀಧರ್ ಹಾಡಿನ ಮೂಲಕ ಗಮನ ಸೆಳೆದರು.

ಇದೇ ಸಂದರ್ಭ ಪತ್ರಕರ್ತರು ಮತ್ತು ಕುಟುಂಬ ವರ್ಗದವರಿಗಾಗಿ ವಿವಿಧ ಮನರಂಜನಾತ್ಮಕ ಸ್ಪರ್ಧೆಗಳು, ಪುನೀತ್ ಕುರಿತ ರಸಪ್ರಶ್ನೆ ಕಾರ್ಯಕ್ರಮವೂ ಆಯೋಜಿತವಾಗಿತ್ತು. ಜಿ.ವಿ. ರವಿಕುಮಾರ್, ಮೂಡಗದ್ದೆ ವಿನೋದ್, ಕುಡೆಕಲ್ ಸಂತೋಷ್, ಲತೀಶ್ ಪೂಜಾರಿ ಸ್ಪರ್ಧೆಗಳನ್ನು ನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಎಂ.ಪಿ. ಕೇಶವಕಾಮತ್, ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್, ಖಜಾಂಜಿ ತಿಮ್ಮಪ್ಪ, ಟ್ರಸ್ಟಿಗಳಾದ ಟಿ.ಪಿ. ರಮೇಶ್, ಅನಿಲ್ ಎಚ್.ಟಿ., ಸಂಘದ ಗೌರವ ಸಲಹೆಗಾರ ಶ್ರೀಧರ್ ನೆಲ್ಲಿತ್ತಾಯ, ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಹರೀಶ್ ಕುಮಾರ್, ಹಿರಿಯ ಪತ್ರಕರ್ತರಾದ ಜಿ. ರಾಜೇಂದ್ರ, ಉಳ್ಳಿಯಡ ಪೂವಯ್ಯ ಸೇರಿದಂತೆ ಕೊಡಗು ಜಿಲ್ಲೆಯ ವಿವಿಧ ಕಡೆಗಳಿಂದ ಪತ್ರಕರ್ತರ ಸಂಘದ ಸದಸ್ಯರು ಕುಟುಂಬದೊAದಿಗೆ ಪಾಲ್ಗೊಂಡಿದ್ದರು. ಪತ್ರಿಕಾಭವನ ಟ್ರಸ್ಟ್ನ ಟ್ರಸ್ಟಿ ಅನಿಲ್ ಎಚ್.ಟಿ. ಕಾರ್ಯಕ್ರಮ ನಿರೂಪಿಸಿದರು.