ಗುಡ್ಡೆಹೊಸೂರು, ಅ. ೩೧: ಇಲ್ಲಿನ ಗೌಡ ಸಮಾಜದ ವಾರ್ಷಿಕ ಮಹಾಸಭೆಯು ಇಲ್ಲಿನ ಶಾಲಾ ಆವರಣದಲ್ಲಿ ಸಮಾಜದ ಅಧ್ಯಕ್ಷ ನಡುಗಲ್ಲು ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಅರೆಭಾಷೆ ಸಂಸ್ಕçತಿ ಮತ್ತು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಲಕ್ಷಿö್ಮÃನಾರಾಯಣ ಕಜೆಗದ್ದೆ ಆಗಮಿಸಿ, ಅರೆಭಾಷೆ ಗೌಡ ಜನಾಂಗದ ಆಚಾರ, ಪದ್ಧತಿ, ಸಂಸ್ಕೃತಿಯ ಬಗ್ಗೆ ಮತ್ತು ಗೌಡ ಅಕಾಡೆಮಿ ಉದ್ದೇಶದ ಬಗ್ಗೆ ಮಾತನಾಡಿದರು.

ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ಗುಡ್ಡೆಮನೆ ವಿಶುಕುಮಾರ್, ಕಾರ್ಯದರ್ಶಿ ಅಚ್ಚಾಂಡಿರ ತಾರ ಹೇಮರಾಜ್, ಸಹಕಾರ್ಯದರ್ಶಿ ಗುಡ್ಡೆಮನೆ ರವಿ, ಖಜಾಂಜಿ ಕುಡೆಕಲ್ ರೂಪ, ನಿರ್ದೇಶಕರಾದ ಕುಡೆಕಲ್ ಗಣೇಶ್, ಕುಡೆಕಲ್ ಗುರುಪ್ರಸಾದ್, ಬೊಮ್ಮಡಿರ ಬಾಲಕೃಷ್ಣ, ಚಂಡಿರಾ ಮಂಜುನಾಥ್, ಪುದಿಯನೆರವನ ಪದ್ಮಾವತಿ, ಬೈಲೆಮನೆ ಮಾಚಮ್ಮ, ಬೊಮ್ಮೆಗೌಡನ ಭುವನೇಶ್ವರಿ ಹಾಜರಿದ್ದರು. ಸಲಹಾ ಸಮಿತಿಯ ಸದಸ್ಯರಾದ ಕನ್ನಯ್ಯನ ಬಾಲಕೃಷ್ಣ, ಕೋಡಿ ಪೂವಯ್ಯ, ಅಚ್ಚಾಂಡಿರ ಹೇಮರಾಜ್, ಮಂದೋಡಿ ಜಗನ್ನಾಥ್, ಗುಡ್ಡೆಮನೆ ಜಯ, ವಿಶುಕುಮಾರ್ ಮತ್ತು ಮಡಿಕೇರಿ ತಹಶೀಲ್ದಾರ್ ಪುದಿಯನೆರವನ ಮಹೇಶ್ ಪಾಲ್ಗೊಂಡಿದ್ದರು.

ಈ ಸಂದರ್ಭ ಸಮಾಜದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹತ್ತನೆ ತರಗತಿಯಲ್ಲಿ ಉನ್ನತ ಸ್ಥಾನ ಪಡೆದ ಮೇರ್ಕಜೆ ಮೇದಪ್ಪ ಭಾಗೀರಥಿ ಪುತ್ರಿ ದೇವಿಕಾ, ದ್ವಿತೀಯ ಪಿ.ಯು.ಸಿಯಲ್ಲಿ ವಿಜ್ಞಾನ ವಿಭಾಗದಲ್ಲಿ ಹೆಚ್ಚು ಅಂಕ ಪಡೆದ ಕುಯ್ಯಮುಡಿ ಡಾ|| ಚಿದಾನಂದ ಕಸ್ತೂರಿ ದಂಪತಿಯ ಪುತ್ರಿ ಹುಣ್ಯ, ಗ್ರಾಮಪಂಚಾಯಿತಿ ಚುನಾವಣೆಯಲ್ಲಿ ವಿಜೇತರಾದ ಸಮಾಜದ ಸದಸ್ಯರನ್ನು, ಕುಡೆಕಲ್ ಚಿದಾನಂದ, ನಿತ್ಯಾನಂದ, ಸುಶೀಲ ಗುರುಪ್ರಸಾದ್, ಪಂಜಿಪಳ್ಳ ಉಷಾಯತೀಶ್, ಮಂದೋಡಿ ಜಗನ್ನಾಥ್ ಮತ್ತು ಸಹಕಾರ ಸಂಘದ ನಿರ್ದೆಶಕರಾದ ಕಳಂಜನ ದಾದಪ್ಪ ಮತ್ತು ಪಂಜಿಪಳ್ಳ ಯತೀಶ್ ಅವರನ್ನು ಸನ್ಮಾನಿಸಲಾಯಿತು. ಸಂಘದ ಏಳಿಗೆ ಮತ್ತು ಮುಂದಿನ ಕಾರ್ಯಚಟುವಟಿಕೆಯ ಬಗ್ಗೆ ಸದಸ್ಯರಾದ ಕುದುಪಜೆ ಆನಂದ ಸಲಹೆ ಸೂಚನೆ ನೀಡಿದರು. ಯೋಗಶಿಕ್ಷಕಿ ಅಮೆಮನೆ ಪಾರ್ವತಿ ಯೋಗದ ಬಗ್ಗೆ ಮಾತನಾಡಿದರು.

ಈ ಸಂದರ್ಭ ರಾಷ್ಟಿçÃಯ ಮಟ್ಟದಲ್ಲಿ ಹಾಕಿ ಕ್ರೀಡೆಯಲ್ಲಿ ಭಾಗವಹಿಸಿದ ಸಮಾಜದ ಕಾರ್ಯದರ್ಶಿ ತಾರಹೇಮರಾಜ್ ಅವರ ಪುತ್ರ ಅಚ್ಚಾಂಡಿರ ದೀಕ್ಷಿತ್ ಮತ್ತು ರಾಜ್ಯಮಟ್ಟದಲ್ಲಿ ನೃತ್ಯದಲ್ಲಿ ಸಾಧನೆ ಮಾಡಿದ ಸಮಾಜದ ಸದಸ್ಯರಾದ ಕೇಡನ ಸೋಮಣ್ಣ ವಿಶಾಲಾಕ್ಷಿ ಪುತ್ರಿ ಪ್ರಗತಿ ಅವರನ್ನು ಗೌರವಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಭುವನೇಶ್ವರಿ ಪ್ರಾರ್ಥಿಸಿದರು, ಗುಡ್ಡೆಮನೆ ರವಿ ಸರ್ವರನ್ನು ಸ್ವಾಗತಿಸಿದರು. ಕುಡೆಕಲ್ ಗಣೇಶ್ ಕಾರ್ಯಕ್ರಮ ನಿರೂಪಿಸಿದರು, ಮಾಚಮ್ಮ ವಂದಿಸಿದರು.

-ಗಣೇಶ್ ಕುಡೆಕಲ್