ಗೋಣಿಕೊಪ್ಪಲು, ಅ. ೩೧: ಕಾವೇರಿ ಕಾಲೇಜಿನ ತೃತೀಯ ಬಿ.ಕಾಂ. ವಿದ್ಯಾರ್ಥಿಯಾದ ಜೂನಿಯರ್ ಅಂಡರ್ ಆಫೀಸರ್ ಎ.ಕೆ. ಪ್ರಜ್ವಲ್ ಅಯ್ಯಪ್ಪ ಕರ್ನಾಟಕ ಮತ್ತು ಗೋವಾ ಡೈರೆಕ್ಟರೇಟ್ ಘಟಕದಿಂದ ಆಯ್ಕೆಯಾಗಿ ದೆಹಲಿಯಲ್ಲಿ ನಡೆದ ಅಖಿಲ ಭಾರತ ಸೈನಿಕ ಶಿಬಿರದಲ್ಲಿ ಭಾಗವಹಿಸಿ ಅಬ್ಸಾ÷್ಟö್ಯಕಲ್ (ಔbsಣಚಿಛಿಟe) ವಿಭಾಗದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ರಾಷ್ಟçಮಟ್ಟದಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಪಡೆದಿದ್ದಾನೆ. ಕಾವೇರಿ ಕಾಲೇಜಿನ ಎನ್.ಸಿ.ಸಿ. ಅಧಿಕಾರಿ ಲೆಫ್ಟಿನೆಂಟ್ ಅಕ್ರಂ ಮಾರ್ಗದರ್ಶನದಲ್ಲಿ ತರಬೇತಿಗೊಂಡಿರುವ ಈತ ಕೈಕೇರಿ ಗ್ರಾಮದ ಅಪ್ಪಚಂಡ ಕುಶಾಲಪ್ಪ, ಶಶಿ ದಂಪತಿಯ ಪುತ್ರನಾಗಿದ್ದಾನೆ ಎಂದು ಪ್ರಾಂಶುಪಾಲ ಪ್ರೊ. ಎಂ.ಬಿ. ಕಾವೇರಪ್ಪ ತಿಳಿಸಿದ್ದಾರೆ.