ಮಡಿಕೇರಿ, ಅ. ೩೧: ಮಲೇಷಿಯಾದಲ್ಲಿ ನಡೆದ ಸುಲ್ತಾನ್ ಆಫ್ ಜೋಹಾರ್ ಕಪ್ ಹಾಕಿ ಪಂದ್ಯಾವಳಿಯಲ್ಲಿ ಕಳೆದ ಆರು ವರ್ಷಗಳ ಅಂತರದ ಬಳಿಕ ಭಾರತ ಜೂನಿಯರ್ ಹಾಕಿ ತಂಡ ಜಯಗಳಿಸಿದೆ. ಪ್ರಬಲ ಆಸ್ಟೆçÃಲಿಯಾ ವಿರುದ್ಧ ರೋಮಾಂಚನಕಾರಿಯಾಗಿ ನಡೆದ ಫೈನಲ್ ಹಣಾಹಣಿಯಲ್ಲಿ ಭಾರತ ಗೆಲುವು ಸಾಧಿಸಿದ್ದು ಗಮನಾರ್ಹವಾಗಿದೆ.

ಭಾರತ ತಂಡದ ಆಟಗಾರರಲ್ಲಿ ಒಬ್ಬರಾಗಿದ್ದ ಕೊಡಗಿನ ಯುವ ಆಟಗಾರ ಚಂದುರ ಬಿ. ಪೂವಣ್ಣ ಈ ಪಂದ್ಯಾವಳಿಯ ಬಗ್ಗೆ ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದು, ಚೊಚ್ಚಲ ಅಂತರರಾಷ್ಟಿçÃಯ ಪಂದ್ಯಾವಳಿ ಹಾಗೂ ತಂಡದ ಗೆಲುವು ಸಾಕಷ್ಟು ಅನುಭವ ನೀಡಿದೆ. ಇಲ್ಲಿನ ಅನುಭವ ಮುಂದಿನ ಸಾಧನೆಗೆ ಸ್ಫೂರ್ತಿದಾಯಕವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ. ವಿಜೇತ ತಂಡದ ಆಟಗಾರರಿಗೆ ಹಾಕಿ ಇಂಡಿಯಾ ತಲಾ ಎರಡು ಲಕ್ಷ ಹಣವನ್ನು ಬಹುಮಾನವಾಗಿ ಪ್ರಕಟಿಸಿದೆ.

ಮಲೇಷಿಯಾ, ಸೌತ್ ಆಫ್ರಿಕಾ, ಜಪಾನ್, ಆಸ್ಟೆçÃಲಿಯಾ ಹಾಗೂ ಗ್ರೇಟ್ ಬ್ರಿಟನ್ ತಂಡದೊAದಿಗೆ ಭಾರತ ಆಡಿದ್ದು, ಎಲ್ಲಾ ಪಂದ್ಯಗಳಲ್ಲೂ ಆಟವಾಡಿದ್ದ

(ಮೊದಲ ಪುಟದಿಂದ) ಪೂವಣ್ಣ ಬ್ರಿಟನ್ ಎದುರು ಗೋಲು ಬಾರಿಸಿ ಸಾಧನೆ ತೋರಿದ್ದರು. ತಂಡದಲ್ಲಿ ಕೊಡಗಿನ ಆಟಗಾರ ಪೂವಣ್ಣ ಅವರೊಂದಿಗೆ ಹಾಸನದ ಮೋಹಿತ್ ಕರ್ನಾಟಕವನ್ನು ಪ್ರತಿನಿಧಿಸಿದ್ದರು.

ಪೂವಣ್ಣ ಕಂಡAಗಾಲ ಗ್ರಾಮದವರಾದ ಚಂದುರ ಎಸ್. ಬಾಬಿ (ಪ್ರಭು) ಹಾಗೂ ಅನಿಲ (ತಾಮನೆ: ಮಲ್ಲೇಂಗಡ) ದಂಪತಿಯ ಪುತ್ರ.

ಫೈನಲ್ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಆಸ್ಟೆçÃಲಿಯಾದೊಂದಿಗೆ ೧-೧ ಗೋಲಿನಿಂದ ಡ್ರಾ ಆಗಿತ್ತು. ನಂತರ ಶೂಟೌಟ್‌ನಲ್ಲೂ ೩-೩ ಸಮಬಲವಾಗಿತ್ತು. ನಂತರ ಸಡನ್ ಡೆತ್‌ನಲ್ಲಿಯೂ ಮೂರು ಬಾರಿ ಇತ್ತಂಡಗಳು ಸಮಬಲ ಸಾಧಿಸಿತ್ತು. ನಾಲ್ಕನೇ ಪ್ರಯತ್ನದಲ್ಲಿ ಭಾರತ ಜಯಗಳಿಸಿದೆ. ಹಲವು ಅಚ್ಚರಿಗಳನ್ನು ತಂದಿತ್ತ ಈ ಪಂದ್ಯಾವಳಿಯಿAದ ಸಾಕಷ್ಟು ಅನುಭವ ಎಲ್ಲಾ ಆಟಗಾರರಿಗೂ ದೊರೆತಿರುವುದಾಗಿ ಪೂವಣ್ಣ ಹೇಳಿದ್ದಾರೆ.