ಮಡಿಕೇರಿ,ಅ. ೩೧ : ಸುಂಟಿಕೊಪ್ಪದ ಸಯ್ಯದ್ ಮುಹಮ್ಮದ್ ಅಲಿ ಶಿಹಾಬ್ ತಂಙಳ್ ಜೂನಿಯರ್ ಶರೀ ಅತ್ ಕಾಲೇಜಿನ ಫೆಸ್ಟ್, ಸುಸಜ್ಜಿತ ಗ್ರಂಥಾಲಯ ಉದ್ಘಾಟನೆ ಹಾಗೂ ಕೊಡಗಿನ ಖಾಝಿಯಾಗಿದ್ದ ಮರ್ಹೂಮ್ ಪೂಕಳಂ ಅಬ್ದುಲ್ಲ ಉಸ್ತಾದ್ ಅವರ ಸಂಸ್ಮರಣೆ ಕಾರ್ಯಕ್ರಮ ತಾ.೨ರಂದು ಕಾಲೇಜು ಆವರಣದಲ್ಲಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಕಾಲೇಜಿನ ಕಾರ್ಯದರ್ಶಿ ಸಿ.ಎಂ.ಹಮೀದ್ ಮೌಲವಿ; ಜಿಲ್ಲೆಯಲ್ಲಿ ಆರ್ಥಿಕ ತೊಂದರೆಯಿAದಾಗಿ ಶಿಕ್ಷಣದಿಂದ ವಂಚಿತರಾಗುತ್ತಿರುವ ಬಡ, ನಿರ್ಗತಿಕ ಮಕ್ಕಳನ್ನು ಗುರುತಿಸಿ ಅಂತವರಿಗೆ ಉಚಿತ ಊಟ ಹಾಗೂ ವಸತಿ ಸೌಕರ್ಯದೊಂದಿಗೆ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ನೀಡುತ್ತಾ ಬರಲಾಗುತ್ತಿದೆ. ೨೦೧೬ರಲ್ಲಿ ಪ್ರಾರಂಭಗೊAಡ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಪೂರ್ವ ಮತ್ತು ಬಿಎ, ಬಿಕಾಂನಲ್ಲಿ ಪದವಿ ಶಿಕ್ಷಣ ನೀಡಲಾಗುತ್ತಿದೆ. ಅಲ್ಲದೆ ವ್ಯಕ್ತಿಗತ ಪ್ರತಿಭೆಗೆ ಉಪಯುಕ್ತವಾದ ಕಂಪ್ಯೂಟರ್
(ಮೊದಲ ಪುಟದಿಂದ) ತರಬೇತಿ, ಕನ್ನಡ, ಅರೆಬಿಕ್, ಉರ್ದು, ಇಂಗ್ಲಿಷ್ ಮಲಯಾಳಂ ಸೇರಿದಂತೆ ವಿವಿಧ ಭಾಷೆಗಳಲ್ಲಿ ಭಾಷನ, ಪ್ರಬಂಧ ತರಬೇತಿ, ಮಾಧ್ಯಮಗಳಲ್ಲಿನ ಸಂವಾದ ಕಾರ್ಯಕ್ರಮಗಳಲ್ಲಿ ಪ್ರಶ್ನೆಗಳಿಗೆ ನಿರರ್ಗಳವಾಗಿ ಉತ್ತರಿಸುವ ಸಲುವಾಗಿಯೂ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ತಾ.೩೦ರಿಂದ ಕಾಲೇಜು ಫೆಸ್ಟ್ ಅಂಗವಾಗಿ ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ತಾ.೨ರಂದು ಸಂಜೆ ೬ಗಂಟೆಗೆ ಸಮಾರೋಪ ಸಮಾರಂಭ, ಗ್ರಂಥಾಲಯ ಉದ್ಘಾಟನೆ ಹಾಗೂ ಕೊಡಗಿನ ಖಾಝಿಯಾಗಿದ್ದ ಮಹ್ರೂಂ ಪೂಕಳಂ ಅಬದುಲ್ಲ ಉಸ್ತಾದ್ ಅವರ ಅನುಸ್ಮರಣೆ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಸಯ್ಯದ್ ಪಾಣಕ್ಕಾಡ್ ಹಮೀದ್ ಅಲಿ ಶಿಹಾಬ್ ತಂಙಳ್, ವಾಗ್ಮಿ ಅಶ್ರಫ್ ರೆಹ್ಮಾನಿ ಕಾಸರಗೋಡು, ಸಮಸ್ತ ಮುರವರ ಸದಸ್ಯ ಅಬ್ದುಲ್ ಉಸ್ತಾದ್, ಕಾಲೇಜಿನ ಅಧ್ಯಕ್ಷ ಕೆ.ಎಂ.ಇಬ್ರಾಹಿA ಹಾಜಿ, ಧಾರ್ಮಿಕ, ರಾಜಕೀಯ, ಸಾಮಾಜಿಕ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಆವರು ತಿಳಿಸಿದರು.
ಗೋಷ್ಠಿಯಲ್ಲಿ ಕಾಲೇಜು ಪ್ರಾಂಶುಪಾಲ ಝೈನುದ್ದಿನ್ ಫೈಝಿ, ಆಡಳಿತ ಮಂಡಳಿ ಸದಸ್ಯರಾದ ಪ್ರೊ.ಎಸ್.ಎಂ.ಮುಹಮ್ಮದ್, ರಫೀಕ್ ಹಾಜಿ ಉಪಸ್ಥಿತರಿದ್ದರು.