ಮಡಿಕೇರಿ, ಅ. ೩೧: ಭಾಗಮಂಡಲ ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದಲ್ಲಿ ಯಾವದೇ ಅವ್ಯವಹಾರ, ದುರುಪ ಯೋಗವಾಗಿಲ್ಲ; ಈ ಸಂಬAಧ ತನಿಖೆಗೆ ದಾಖಲಾತಿಗಳನ್ನು ಒದಗಿ ಸಲು ಸಿದ್ಧರಿರುವದಾಗಿ ಸಂಘದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಸಂಘದ ಅಧ್ಯಕ್ಷ ಹೊಸೂರು ಸತೀಶ್ ಜೋಯಪ್ಪ, ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪತ್ರಗಳ ಆಧಾರದಲ್ಲಿ ಸಂಘದಲ್ಲಿ ಅವ್ಯವಹಾರವಾಗಿದೆ ಎಂದು ಆರೋಪ ಮಾಡಲಾಗಿದೆ. ಈ ಬಗ್ಗೆ ಕಳೆದ ತಿಂಗಳಲ್ಲಿ ನಡೆದ ಸಂಘದ ಸಭೆಯಲ್ಲಿ ಚರ್ಚೆ ಮಾಡಲಾಗಿದ್ದು, ಯಾವದೇ ತನಿಖೆ ನಡೆದರೂ ಸಂಘದಿAದ ಪೂರಕ ದಾಖಲಾತಿ ನೀಡಲು ನಿರ್ಧರಿಸ ಲಾಗಿದೆ. ಸಂಘದ ಮೂಲಕ ಕಳೆದ ಎಂಟು ವರ್ಷಗಳಿಂದ ನಡೆಸಲಾದ ಪ್ರತಿಯೊಂದು ವ್ಯವಹಾರದ ಬಗ್ಗೆ ದಾಖಲೆ ಹಾಗೂ ಆಡಿಟ್ ವರದಿ ಸಿದ್ಧವಿರುವದಾಗಿ ತಿಳಿಸಿದರು.

ಪತ್ರದಲ್ಲಿ ಸಂಶಯ-ನೋಟೀಸ್

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿರುವ ದುರ್ಗಾಶಕ್ತಿ ಸಂಸ್ಥೆಗೆ ಸೇರಿದ ಪತ್ರದ ಬಗ್ಗೆ ಸಂಶಯವಿದೆ. ದೇವರಾಜು ಎಂದು ಸಹಿ ಮಾಡಲಾಗಿರುವ ಮೂರು ಪುಟಗಳಿರುವ ಪತ್ರದಲ್ಲಿ ಒಂದು ಕಡೆಯಲ್ಲಿ ದಿನಾಂಕ ೧೭-೧೧-೨೦೨೨ರಂದು ಓರ್ವ ವ್ಯಕ್ತಿಯ ಖಾತೆಗೆ ರೂ.೩ಲಕ್ಷ ಹಣ ಸಂದಾಯ ಮಾಡಿರುವದಾಗಿ ಬರೆಯಲಾಗಿದೆ. ಆದರೆ, ೧೧ನೇ ತಿಂಗಳು ಇನ್ನೂ ಕೂಡ ಬಂದಿರುವದಿಲ್ಲ. ಮತ್ತೊಂದೆಡೆ ದೇವರಾಜು ಅವರ ಹಸ್ತ ಹಣ ನೀಡಲಾಗಿದೆ ಎಂದು ದೇವರಾಜು ಹೆಸರಿನಲ್ಲಿಯೇ ಇರುವ ಪತ್ರದಲ್ಲಿದೆ. ಈ ಪತ್ರದ ಬಗ್ಗೆಯೇ ಸಂಶಯವಿರುವದಾಗಿ ಹೇಳಿದರು. ಹಾಗಾಗಿ ದುರ್ಗಾಶಕ್ತಿ ಸಂಸ್ಥೆಗೆ ವಕೀಲರ ಮೂಲಕ ನೋಟೀಸ್ ನೀಡಲಾಗಿದ್ದು, ಅವರಿಂದ ಇನ್ನೂ ಕೂಡ ಉತ್ತರ ಬಂದಿರುವದಿಲ್ಲ, ಉತ್ತರ ಬಂದ ಬಳಿಕ ಮುಂದಿನ ನಡೆಯ ಬಗ್ಗೆ ತೀರ್ಮಾನಿಸಲಾಗುವ ದೆಂದು ಹೇಳಿದರು.

ಅಧಿಕ ಲಾಭ: ಕಳೆದ ಎಂಟು ವರ್ಷಗಳಿಂದ ತಾನು ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದು, ಸಂಘವು ಲಾಭದಲ್ಲಿದೆ. ಇದುವರೆಗೆ ೧೫ರಿಂದ ೨೦ಲಕ್ಷ ಲಾಭ ಗಳಿಸುತ್ತಿದ್ದ ಸಂಘವು ಈ ಸಾಲಿನಲ್ಲಿ ರೂ. ೬೩ ಲಕ್ಷ ಲಾಭಗಳಿಸಿದ್ದು, ಇದು ಈ ವರೆಗಿನ ಅತ್ಯಧಿಕ ಲಾಭಾಂಶವಾಗಿದೆ. ರಾಷ್ಟಿçÃಯ ಪ್ರಶಸ್ತಿ ಪಡೆದಿರುವ ಸಂಘಕ್ಕೆ ಕೆಟ್ಟ ಹೆಸರು ತರುವ ನಿಟ್ಟಿನಲ್ಲಿ ಕೆಲವರು ಆರೋಪ ಮಾಡುತ್ತಿದ್ದಾರೆ. ಈ ವರ್ಷ ಸಂಘಕ್ಕೆ ಚುನಾವಣೆ ನಡೆಯಲಿದ್ದು, ಅಧಿಕಾರ ಪಡೆಯುವ ಸಲುವಾಗಿ ಕಾಂಗ್ರೆಸ್ ಪಕ್ಷವು ಈ ರೀತಿಯ ಆರೋಪ ಗಳನ್ನು ಮಾಡುತ್ತಿದೆ ಎಂದು ಹೇಳಿದರು.

ರಾಜಕೀಯ ಪ್ರೇರಿತ

ಜಿಲ್ಲಾ ಕಾಂಗ್ರೆಸ್ ಮಾಡಿರುವ ಆರೋಪದಲ್ಲಿ ಶಾಸಕ ಬೋಪಯ್ಯ ಅವರನ್ನು ಉಲ್ಲೇಖ ಮಾಡಲಾಗಿದೆ. ಶಾಸಕರಿಗೂ ಸಂಘಕ್ಕೂ ಸಂಬAಧವೇ ಇಲ್ಲ, ನೇರವಾಗಿ ತನಿಖೆ ಮಾಡಲಿ. ದಾಖಲಾತಿ ಒದಗಿಸಲು ಸಿದ್ಧರಿದ್ದೇವೆ. ಅನವಶ್ಯಕವಾಗಿ ಶಾಸಕರು, ಬಿಜೆಪಿ ಸರಕಾರದ ಹೆಸರನ್ನು ತರುವದು ಬೇಡ. ಇದು ಕಾಂಗ್ರೆಸ್‌ನವರ ರಾಜಕೀಯ ಪ್ರೇರಿತ ಆರೋಪ ವಾಗಿದೆ, ಇದನ್ನು ಖಂಡಿಸುವದಾಗಿ ಸತೀಶ್ ಹೇಳಿದರು.

ಸಂಸ್ಥೆ ಉಳಿವಿಗಾಗಿ ಖರೀದಿ

೯೨-೯೩ನೇ ಸಾಲಿನಲ್ಲಿ ಥಾಯಿಸಾಕ್ ಬ್ರೂಡ್ ಕಾಯಿಲೆ ಬಂದು ಜೇನು ನಶಿಸಿ ಹೋದ ಸಂದರ್ಭದಲ್ಲಿ ಸಂಘ ಉಳಿಸಿ ಕೊಳ್ಳಲು ಹಾಗೂ ಸಂಘದಲ್ಲಿರುವ ಸಿಬ್ಬಂದಿಗಳ ವೇತನ ನೀಡುವ ಸಲುವಾಗಿ ಅಂದು ಅಧ್ಯಕ್ಷರಾಗಿದ್ದ ನಾರಾಯಣಾಚಾರ್ ಹಾಗೂ ಆಡಳಿತ ಮಂಡಳಿಯವರು ಹೊರ ಜಿಲ್ಲೆ, ರಾಜ್ಯಗಳಿಂದ ಜೇನು ಖರೀದಿಸಲು ನಿರ್ಣಯ ಮಾಡಿದ್ದು, ನಂತರದಲ್ಲಿ ಅದು ಮುಂದುವರಿದು ಕೊಂಡು ಬಂದಿದೆಯೇ ಹೊರತು ನಮ್ಮ ಆಡಳಿತ ಮಂಡಳಿಯ ತೀರ್ಮಾನವಲ್ಲ. ಹೊರಗಡೆಯ ಜೇನಿನೊಂದಿಗೆ ಸ್ಥಳೀಯವಾಗಿ ಖರೀದಿ ಮಾಡುವ ಜೇನನ್ನು ಒಟ್ಟುಗೂಡಿಸಿ, ಸಂಸ್ಕರಿಸಿ, ಪ್ರಯೋಗಾಲಯದಲ್ಲಿ ಪರಿಶೀಲಿಸಿ ಗುಣಮಟ್ಟದ ಅಗ್‌ಮರ‍್ಕ್ ಮೊಹರಿನೊಂದಿಗೆ ಮಾರಾಟ ಮಾಡಲಾಗುತ್ತಿದೆ. ಯಾವದೇ ರೀತಿಯ ಕಳಪೆ ಗುಣಮಟ್ಟದ ಜೇನನ್ನು ಮಾರಾಟ ಮಾಡುತ್ತಿಲ್ಲ. ರಾಜ್ಯದ ಎಲ್ಲ ಜೇನು ಮಾರಾಟ ಕೇಂದ್ರಗಳ ಪೈಕಿ ನಮ್ಮ ಸಂಘ ಪ್ರಥಮ ಸ್ಥಾನದಲ್ಲಿರುವದಾಗಿ ಹೇಳಿದರು.

ಬದ್ಧತೆಯಿಲ್ಲದವರಿಂದ ದೂರು

ಲೋಕಾಯುಕ್ತಕ್ಕೆ ದೂರು ಸಲ್ಲಿಸಿರುವ ಬಾರಿಕೆ ವೆಂಕಟರಮಣ ಕಾಂಗ್ರೆಸ್‌ನ ಸಕ್ರಿಯ ಕಾರ್ಯಕರ್ತ ರಾಗಿದ್ದಾರೆ. ಅಲ್ಲದೆ, ೧೯೯೪ರಿಂದ ೨೦೦೧ರ ವರೆಗೆ ಸಂಘದ ನಿರ್ದೇಶಕ ರಾಗಿದ್ದವರು. ಅವರ ಅವಧಿಯ ಲ್ಲಿಯೇ ಹೊರಗಿನಿಂದ ಜೇನು ಖರೀದಿಗೆ ತೀರ್ಮಾನ ಮಾಡ ಲಾಗಿದೆ. ಅವಾಗ ಇವರ ಜವಾಬ್ದಾರಿ ಏನಾಗಿತ್ತೆಂದು ಸತೀಶ್ ಪ್ರಶ್ನಿಸಿದರು. ಸ್ಪೆöÊಸಸ್ ಹಾಗೂ ಜೇನು ಮಾರಾಟ ಮಳಿಗೆ ಹೊಂದಿರುವ ವೆಂಕಟರಮಣ ಕಳೆದ ಜನವರಿಯಲ್ಲಿ ಸಂಘದಿAದ ೧೦ ಕೆ.ಜಿ. ಜೇನು ಖರೀದಿ ಮಾಡಿದ್ದಾರೆ. ಬದ್ಧತೆ ಇಲ್ಲದೆ ಇದೀಗ ದೂರು ನೀಡಿದ್ದಾರೆ, ಕಿಂಚಿತ್ತಾದರೂ ನೈತಿಕತೆ ಬೇಡವೇ ಎಂದು ಸತೀಶ್ ಪ್ರಶ್ನಿಸಿದರು. ಸಂಸ್ಥೆ ಉಳಿಯ ಬೇಕೆಂಬ ಉದ್ದೇಶದೊಂದಿಗೆ ಗುಣಮಟ್ಟವನ್ನು ಕಾಯ್ದುಕೊಂಡು ಬರಲಾಗಿದೆ. ಯಾವದೇ ಅವ್ಯವಹಾರವಾಗಿಲ್ಲ, ಯಾವದೇ ದಾಖಲೆಗಳನ್ನು ಪರಿಶೀಲಿಸಲು ಮುಕ್ತ ಅವಕಾಶವಿದೆ ಎಂದು ಪುನರುಚ್ಚರಿಸಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಪೊಡನೊಳನ ವಿಠಲ, ನಿರ್ದೇಶಕರುಗಳಾದ ಹರಗ ದಿನೇಶ್, ಪಾಣತ್ತಲೆ ಲೋಕನಾತ, ಅಯ್ಯಣಿರ ದಿನೇಶ್, ಉದಯ, ಕಾರ್ಯನಿರ್ವಾಹಕ ಅಧಿಕಾರಿ ಸುಧಾ ಇದ್ದರು.