*ಗೋಣಿಕೊಪ್ಪ, ಅ. ೩೧: ಟಿ.ಶೆಟ್ಟಿಗೇರಿ ತಾವಳಗೇರಿ ಮೂಂದ್`ನಾಡ್ ಕೊಡವ ಸಮಾಜ ವತಿಯಿಂದ ಚಂಗ್ರಾAದಿ ಪತ್ತಲೋದಿ ಆಚರಣೆಯ ಅಂಗವಾಗಿ ನಡೆದ ದ್ವಿಚಕ್ರ ವಾಹನ ಚಾಲನಾ ಸ್ಪರ್ಧೆಗೆ ಕ್ರೀಡಾ ಮತ್ತು ಸಾಂಸ್ಕೃತಿಕ ಅಧ್ಯಕ್ಷ ಕಟ್ಟೇರ ಈಶ್ವರ್ ತಿಮ್ಮಯ್ಯ ಚಾಲನೆ ನೀಡಿದರು.
ಟಿ.ಶೆಟ್ಟಿಗೇರಿ ಸರ್ಕಾರಿ ಶಾಲೆ ಮೈದಾನದಲ್ಲಿ ೫೦ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು.
ಪ್ರಥಮ ಬಹುಮಾನವನ್ನು ಕಟ್ಟೇರ ಗಿಲನ್ ಕರುಂಬಯ್ಯ, ಎರಡನೆಯ ಸ್ಥಾನವನ್ನು ಮಾಣೀರ ದರ್ಶನ್, ಮೂರನೇ ಸ್ಥಾನವನ್ನು ತಾವಳಗೇರಿ ಗ್ರಾಮದ ಮಚ್ಚಮಾಡ ಸೂರಜ್, ಸಮಾಧಾನಕರ ಬಹುಮಾನವನ್ನು ತೆರಾಲು ಗ್ರಾಮದ ಬೊಟ್ಟಂಗಡ ಗಗನ್ ಪಡೆದುಕೊಂಡರು.
ತಾವಳಗೇರಿ ಮೂಂದ್`ನಾಡ್ ಕೊಡವ ಸಮಾಜ ಅಧ್ಯಕ್ಷ ಚೊಟ್ಟೆಯಂಡಮಾಡ ಬೋಸು ವಿಶ್ವನಾಥ್, ಕಾರ್ಯದರ್ಶಿ ಮನ್ನೇರ ರಮೇಶ್, ಕೊಟ್ರಮಾಡ ಸುಮಂತ್, ಮಾಣೀರ ವಿಜಯ್ ನಂಜಪ್ಪ ಇದ್ದರು.