ಮಡಿಕೇರಿ, ಅ. ೩೧: ಕೊಡಗು ಕೊಯವ ಸಮಾಜದ ೨೦೨೧-೨೨ನೇ ಸಾಲಿನ ೧೭ನೇ ವಾರ್ಷಿಕ ಮಹಾಸಭೆಯು ಮೂರ್ನಾಡುವಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಸಮಾಜದ ಅಧ್ಯಕ್ಷ ಜಿಲ್ಲಂಡ ಮಾದಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಾಜದ ದತ್ತಿನಿಧಿಯಡಿಯಲ್ಲಿ ನೀಡಲಾಗುವ ಪ್ರೋತ್ಸಾಹ ಧನವನ್ನು ೨೦೨೧-೨೨ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕ ಪಡೆದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಾದ ಕಳ್ಳಿರ ಲೀಷ್ಮಾ, ಪುದಿಯೊಕ್ಕಡ ರೇಷ್ಮಾ, ದ್ವಿತೀಯ ಪಿಯುಸಿಯಲ್ಲಿ ಮೇಚಿರ ದೀಪ್ತಿ, ಅಚ್ಚಪಂಡ ವರ್ಷ, ಪದವಿಯಲ್ಲಿ ತೋರೆರ ಯಾಶಿಕಾ, ಸುಳ್ಳೇರ ನೀಮಾ ಪಡೆದುಕೊಂಡರು.
ಸ್ನಾತಕೋತ್ತರ ಪದವಿ ಮುಗಿಸಿದ ಜಿಲ್ಲಂಡ ಅರ್ಪಿತ (ಮಾಸ್ಟರ್ ಆಫ್ ಫಾರ್ಮಸಿ), ಕಳ್ಳಿರ ಪವನ್ (ಎಂ.ಬಿ.ಎ), ಮುಕ್ಕಾಟಿರ ಅಮೃತ ಬೋಪಯ್ಯ (ಎಂ.ಸಿ.ಎ) ಅವರಿಗೆ ಮೇಚುರ ಲೋಕೇಶ್, ಮಮತ ದಂಪತಿಗಳ ಪ್ರಾಯೋಜಕತ್ವದಲ್ಲಿ ಪ್ರೋತ್ಸಾಹ ಧನ ನೀಡಲಾಯಿತು. ಇದೇ ಸಂದರ್ಭ ವಿವಿಧ ಕ್ಷೇತ್ರಗಳ ಮೂವರು ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೈದ್ಯಕೀಯ ಕ್ಷೇತ್ರದಲ್ಲಿ ಮೈಸೂರಿನ ಕಾಮಾಕ್ಷಿ ಆಸ್ಪತ್ರೆಯ ಶಸ್ತçಚಿಕಿತ್ಸಾ ವಿಭಾಗದ ಮುಖ್ಯಸ್ಥರಾದ ಮೇಚಿರ ಡಾ. ಜ್ಞಾನ ಮಣಿ ನಾಣಯ್ಯ, ದೇಶದ ರಕ್ಷಣಾ ಕ್ಷೇತ್ರದಲ್ಲಿ ಸುಮಾರು ೩೧ ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಕಾಂಞAಗಡ ದೇವಯ್ಯ, ಲೇಖಕಿ, ನಟಿ, ನಿರ್ಮಾಪಕಿ ಈರಮಂಡ ಹರಿಣಿ ವಿಜಯ್ ಸನ್ಮಾನ ಸ್ವೀಕರಿಸಿದರು.
ಮಡಿಕೇರಿ ಫೀಲ್ಡ್ ಮಾರ್ಷಲ್ ಕಾಲೇಜಿನ ಕಂಪ್ಯೂಟರ್ ವಿಭಾಗದ ಮುಖ್ಯಸ್ಥರು ಹಾಗೂ ಕೊಡವ ಭಾಷೆ ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ರವಿಶಂಕರ್ ನಾಣಯ್ಯ ಮಾತನಾಡಿ, ಕೊಡವ ಭಾಷೆ ಮತ್ತು ಶಿಕ್ಷಣದ ಮಹತ್ವವನ್ನು ತಿಳಿಸಿದರು. ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆಯಲು ತಂದೆ ತಾಯಂದಿರು ಸಹಕರಿಸಬೇಕೆಂದು ಕೋರಿದರು.
ಕಾರ್ಯಕ್ರಮವನ್ನು ಸಮಾಜದ ಹಿರಿಯ ನಿರ್ದೇಶಕ ಮುಕ್ಕಾಟಿರ ಹ್ಯಾರಿ ಪೂಣಚ್ಚ ಉದ್ಘಾಟಿಸಿದರು. ಸಮಾಜದ ಗೌರವ ಕಾರ್ಯದರ್ಶಿ ತೋರೆರ ಕಾಶಿ ಕಾರ್ಯಪ್ಪ ಕಳೆದ ಮಹಾಸಭೆಯ ವರದಿಯನ್ನು ವಾಚಿಸಿ, ಲೆಕ್ಕಪತ್ರವನ್ನು ಮಂಡಿಸಿದರು. ನಿರ್ದೇಶಕ ಮಲ್ಲಂಡ ಮಹೇಶ್ ಆಡಳಿತ ಮಂಡಳಿಯ ವರದಿಯನ್ನು ವಾಚಿಸಿದರು. ಮೇಚುರ ಮಮತಾ ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು, ಕಾಂಞAಗಡ ಡಿಂಪಲ್ ದೇಚಮ್ಮ ಪ್ರಾರ್ಥಿಸಿ, ಕಳ್ಳಿರ ನಾಣಯ್ಯ ವಂದಿಸಿದರು.
ಕೈಲು ಮುಹೂರ್ತ: ಕೈಲು ಮುಹೂರ್ತ ಸಂತೋಷ ಕೂಟದಲ್ಲಿ ವೈವಿಧ್ಯಮಯ ಆಟೋಟ, ಕೊಡವ ಹಾಡುಗಳ ಸ್ಪರ್ಧೆಗಳು ನಡೆದವು, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಚೋಕಿರ ಡಾಲ, ಶರ್ಮಿಳ ದಂಪತಿ ಬಹುಮಾನವನ್ನು ಪ್ರಾಯೋಜಿಸಿದ್ದರು.
ಸಮಾಜದ ಉಪಾಧ್ಯಕ್ಷ ಮೇಚಿರ ಡಾ. ಸುಭಾಷ್ ನಾಣಯ್ಯ, ನಿರ್ದೇಶಕರುಗಳಾದ ಈರಮಂಡ ವಿಜಯ್ ಉತ್ತಯ್ಯ, ಎಸ್. ಸೋಮಯ್ಯ, ಮೇಚಿರ ಹರೀಶ್, ಅಚ್ಚಪಂಡ ಧರ್ಮಾವತಿ ಕುಶಾಲಪ್ಪ, ನೆಂದುಮAಡ ಗೀತಾ ನಾಣಯ್ಯ, ಈರಮಂಡ ದಮಯಂತಿ, ಚೋಕಿರ ವನಿತಾ ವಿಜಯ, ಸಲಹಾ ಸಮಿತಿ ಸದಸ್ಯರಾದ ಅಚ್ಚಪಂಡ ಚಂಗಪ್ಪ ಹಾಗೂ ನಾಯಮಂಡ ದೇವಕ್ಕಿ ಉಪಸ್ಥಿತರಿದ್ದರು. ಮೃತಪಟ್ಟ ಸಂಘದ ಸದಸ್ಯರಿಗೆ ಸಭೆಯಲ್ಲಿ ಸಂತಾಪ ಸೂಚಿಸಲಾಯಿತು.