ಮಡಿಕೇರಿ, ಅ. ೩೦: ಗೋಣಿಕೊಪ್ಪ ಪಿ.ಸಿ. ಕ್ಲಬ್ ಸಂಸ್ಥೆಯ ವತಿಯಿಂದ ಜಿಲ್ಲಾಮಟ್ಟದ ಚದುರಂಗ ಸ್ಪರ್ಧೆ ನ. ೧೩ ರಂದು ಬೆಳಿಗ್ಗೆ ೯ ಗಂಟೆಗೆ ಗೋಣಿಕೊಪ್ಪಲು ಪ್ರೌಢಶಾಲೆ ಆವರಣದಲ್ಲಿ ನಡೆಯಲಿದೆ. ಸ್ಪರ್ಧೆಯು ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢ ಹಾಗೂ ಮುಕ್ತ (ಕಾಲೇಜು) ವಿಭಾಗಗಳಲ್ಲಿ ನಡೆಯಲಿದೆ.

ಸ್ಪರ್ಧೆಗೆ ಚೆಸ್ ಬೋಡ್, ಆಧಾರ್ ಕಾರ್ಡ್ ಅಥವಾ ಐಡಿ ಕಾರ್ಡನ್ನು ವಿದ್ಯಾರ್ಥಿಗಳು ತರತಕ್ಕದ್ದು. ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲೆ ವಿಭಾಗಕ್ಕೆ ರೂ. ೨೦೦, ಪ್ರೌಢಶಾಲೆ ವಿಭಾಗಕ್ಕೆ ರೂ. ೨೫೦ ಮತ್ತು ಮುಕ್ತ ವಿಭಾಗಕ್ಕೆ ರೂ. ೩೦೦ ನೋಂದಾಣಿ ಶುಲ್ಕ ಪಾವತಿಸಬೇಕು.

ವಿಜೇತರಿಗೆ ನಗದು ಬಹುಮಾನ, ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಗುವುದು. ಸ್ಪರ್ಧಿಗಳು ನ. ೧೨ರೊಳಗೆ ಹೆಸರು ನೋಂದಾಯಿಸತಕ್ಕದ್ದು ಎಂದು ಪ್ರಕಟಣೆ ತಿಳಿಸಿದೆ.