ಕುಶಾಲನಗರ, ಅ. ೩೦: ಕುಶಾಲನಗರದ ಏಂಜಲ್ ವಿಂಗ್ಸ್ ಡಾನ್ಸ್ ಸಂಸ್ಥೆಯ ಡಿ. ಚೈತನ್ಯ ಅವರಿಗೆ ರಾರಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಯಿAದ ಲೋಕ ಕಲಾ ನಿಧಿ ಪ್ರಶಸ್ತಿ ಲಭಿಸಿದೆ. ಇತ್ತೀಚೆಗೆ ತಮಿಳುನಾಡಿನ ಚೆನ್ನೆöÊನಲ್ಲಿ ನಡೆದ ನೃತ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ದೊರೆತಿದ್ದು, ಚೈತನ್ಯ ಕುಶಾಲನಗರದ ಫಾತಿಮ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಉತ್ತಮ ನೃತ್ಯ ಸಾಧನೆಗೆ ಚೈತನ್ಯ ಅವರಿಗೆ ಹಲವು ಪ್ರಶಸ್ತಿಗಳು ಲಭಿಸಿದ್ದು, ಜಾಕಿ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆ ತಮಿಳುನಾಡಿನ ಮೈಲಾಡುದೊರೈನಲ್ಲಿ ನಡೆದ ಅಂತರರಾಷ್ಟಿçÃಯ ನೃತ್ಯ ಸ್ಪರ್ಧೆಯಲ್ಲಿ ಪ್ರಶಸ್ತಿಗೆ ಭಾಜನರಾಗಿದ್ದಾಳೆ. ರಾಷ್ಟಿçÃಯ ಮಟ್ಟದಲ್ಲಿ ಮತ್ತು ರಾಜ್ಯಮಟ್ಟದ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಚೈತನ್ಯ ಸ್ಥಳೀಯ ಉದ್ಯಮಿ ದಯಾನಂದ ಮತ್ತು ಕಾವ್ಯ ದಂಪತಿ ಪುತ್ರಿಯಾಗಿದ್ದು, ನೃತ್ಯ ಶಿಕ್ಷಕರಾದ ಅನೂಪ್ ಡಿಸೋಜಾ ಮತ್ತು ಏಂಜಲ್ ಡಿಸೋಜಾ ಅವರ ಶಿಷ್ಯೆಯಾಗಿದ್ದಾಳೆ.