ಗೋಣಿಕೊಪ್ಪ ವರದಿ, ಅ. ೩೦ : ಕೃಷಿ ಸಾಧನೆಗಾಗಿ ನಲ್ಲೂರು ಗ್ರಾಮದ ಕೃಷಿ ಪಂಡಿತ, ಬಾಬು ಜಗಜೀವನ್ ರಾಮ್ ಕೃಷಿ ಸಮ್ಮಾನ್ ರಾಷ್ಟç ಪ್ರಶಸ್ತಿ ಪುರಸ್ಕೃತ, ಸೋಮೇಂಗಡ ಗಣೇಶ್ ತಿಮ್ಮಯ್ಯ ಅವರಿಗೆ ರಾಜ್ಯ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿದೆ.

ಪ್ರಶಸ್ತಿ ಲಭಿಸಿರುವ ಬಗ್ಗೆ ‘ಶಕ್ತಿ’ಗೆ ಪ್ರತಿಕ್ರಿಯಿಸಿರುವ ಗಣೇಶ್ ತಿಮ್ಮಯ್ಯ, ಕೃಷಿ ಸಾಧನೆಯೊಂದಿಗೆ ಕೃಷಿ ಪೂರಕ ಯಶಸ್ವಿ ಮಾಹಿತಿ, ಯಶಸ್ಸಿನ ಮೂಲವನ್ನು ಕೃಷಿಕರೊಂದಿಗೆ ಹಂಚಿಕೊAಡು ಅವರನ್ನು ಕೂಡ ಕೃಷಿಯಲ್ಲಿ ತೊಡಗಿಕೊಳ್ಳುವಂತೆ ಮಾಡಿರುವ ಆತ್ಮತೃಪ್ತಿ ತನಗಿದ್ದು, ಈ ಪ್ರಶಸ್ತಿ ಯುವ ಕೃಷಿಕರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.