ಪೊನ್ನAಪೇಟೆ, ಅ.೩೦: ಬಾಳೆಲೆ ಹೋಬಳಿಯ ಬೆಸಗೂರು ಗ್ರಾಮದ ಪಾರುವಂಗಡ ಡಾಲು ಎಂಬವರ ಕಾಫಿ ತೋಟದಲ್ಲಿ ಅಕ್ರಮವಾಗಿ ಒಂದು ಬೀಟೆ ಮರವನ್ನು ಕಡಿದು ನಾಟಾಗಳಾಗಿ ಪರಿವರ್ತಿಸಿ, ನಾಟಾಗಳ ಬಿಳಿ ತೊಗಟೆಯನ್ನು ತೆಗೆಯುತ್ತಿದ್ದ ಸಂದರ್ಭ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಗೋಣಿಕೊಪ್ಪಲು ಕಾಳಪ್ಪ ಕಾಲೋನಿಯ ಸಾಜನ್, ತಿತಿಮತಿ ನೆಹರು ಕಾಲೋನಿಯ ಚಾತ, ಮಡಿಕೇರಿಯ ಬಿ.ಎಸ್. ಕೃಷ್ಣಪ್ಪ ಬಂಧಿತ ಆರೋಪಿಗಳಾಗಿದ್ದು, ಆರೋಪಿಗಳನ್ನು ಪೊನ್ನಂಪೇಟೆ ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹಾಗೂ ಸ್ಥಳದಲ್ಲಿದ್ದ ೫ ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ವೀರಾಜಪೇಟೆ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಚಕ್ರಪಾಣಿ ಮಾರ್ಗ ದರ್ಶನದಲ್ಲಿ, ತಿತಿಮತಿ ಉಪವಿಭಾಗ ಸಹಾಯಕ ಅರಣ್ಯ

(ಮೊದಲ ಪುಟದಿಂದ) ಸಂರಕ್ಷಣಾಧಿಕಾರಿ ಕೆ.ಎ. ನೆಹರು ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಬಿ.ಎಂ. ಶಂಕರ್, ಉಪ ವಲಯ ಅರಣ್ಯ ಅಧಿಕಾರಿಗಳಾದ ಕೆ.ಜಿ. ದಿವಾಕರ್ ಗಣೇಶ್ ಶೇಟ್, ರಕ್ಷಿತ್, ಅರಣ್ಯ ರಕ್ಷಕರಾದ ಆಂಥೋನಿ ಪ್ರಕಾಶ್, ಚೇತನ್ ಪೊನ್ನಪ್ಪ, ಮತ್ತು ಆರ್ ಆರ್ ಟಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.