ಚೆಟ್ಟಳ್ಳಿ, ಅ. ೩೦: ಚೆಟ್ಟಳ್ಳಿ ಹಿಂದೂ ಮಲಯಾಳಿ ಸಮಾಜದ ವತಿಯಿಂದ ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ೧೪ನೇ ವರ್ಷದ ಓಣಂ ಆಚರಣೆ ಸಂಭ್ರಮ ಸಡಗರದಿಂದ ನಡೆಯಿತು.
ಚೆಟ್ಟಳ್ಳಿ ಮಂಗಳ ಸಭಾಂಗಣ ದಿಂದ ಚೆಟ್ಟಳ್ಳಿ ಪಟ್ಟಣದವರೆಗೆ ನಡೆದ ಮೆರವಣಿಗೆಯಲ್ಲಿ ಚೆಟ್ಟಳ್ಳಿ ಹಾಗೂ ವಿವಿಧೆಡೆಗಳಿಂದ ಪುರುಷರು ಹಾಗೂ ಸ್ತಿçÃಯರು ಸಾಂಪ್ರದಾಯಿಕ ಉಡುಪು ಗಳನ್ನು ತೊಟ್ಟು ಪಾಲ್ಗೊಂಡಿದ್ದರು.
ಶ್ರೀ ಪೊನ್ನುಮುತ್ತಪ್ಪನ್ ಚೆಂಡೆಮೇಳ ತಂಡದ ಚೆಂಡೆ ಮೆರವಣಿಗೆ ಮೆರಗು ನೀಡಿತು. ಬಳಿಕ ಓಣಂ ಹಬ್ಬದ ಆಚರಣೆಯ ಪ್ರಯುಕ್ತ ಸಮಾಜದ ಸದಸ್ಯರಿಗೆ ಚೆಟ್ಟಳ್ಳಿ ಪ್ರೌಢಶಾಲಾ ಮೈದಾನದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು ನಡೆದವು.
ಮಕ್ಕಳಿಗೆ ಚಾಕಲೇಟ್ ಹೆಕ್ಕುವುದು, ಮಹಿಳೆಯರಿಗೆ ಪಾಸಿಂಗ್ದ ಬಾಲ್, ಪುರುಷರಿಗೆ ಭಾರದ ಗುಂಡು ಎಸೆತ, ಹಗ್ಗಜಗ್ಗಾಟ ಸ್ಪರ್ಧೆಗಳು ನಡೆಯಿತು. ಓಣಂ ಪೂಕಳಂ ಎಲ್ಲರನ್ನು ಆಕರ್ಷಿಸಿತು.
ಪೂಕಳಂ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ನಾಲ್ಕು ತಂಡಗಳು ವಿವಿಧ ಶೈಲಿಯಲ್ಲಿ ಪೂಕಳಂ ರಚಿಸಿದ್ದರು. ತ್ಯಾಗತ್ತೂರು ನಿವಾಸಿ, ಮನೋಜ್ ಮಾವೇಲಿ ವೇಷ ಧರಿಸಿ ಗಮನ ಸೆಳೆದರು.
ಸಾಧಕರಿಗೆ ಸನ್ಮಾನ
ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೂಡ್ಲೂರು ಚೆಟ್ಟಳ್ಳಿ ನಿವಾಸಿ ಸುನಿಲ್, ಮರದ ಹಾಗೂ ಕಲ್ಲಿನ ಕೆತ್ತನೆಯಲ್ಲಿ ಸಾಧನೆ ಮಾಡಿರುವ ಕಂಡಕರೆ ನಿವಾಸಿಗಳಾದ ಮನೋಜ್ ಹಾಗೂ ಅನೀಶ್, ಕೋವಿಡ್ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸಿದ ಆಶಾಕಾರ್ಯ ಕರ್ತೆಯರಾದ ಸುಮಿತ್ರ ವಾಸು, ಉಷಾ ವಿಜಯನ್, ಆರೋಗ್ಯ ಕಾರ್ಯಕರ್ತೆಯರಾಗಿ ಕಾರ್ಯನಿರ್ವ ಹಿಸುತ್ತಿರುವ ಅನಿತಾ ಕುಮಾರಿ ಹಾಗೂ ಸೌಮ್ಯ ವಿನು, ಹಿಂದೂ ಮಲಯಾಳಿ ಸಮಾಜದ ಸದಸ್ಯರಾದ, ಗ್ರಾಮ ಪಂಚಾಯಿತಿ ಸದಸ್ಯ ಪಿ.ಆರ್. ಮಂಜುನಾಥ್, ಪಿ. ಸುರೇಶ್ ಹಾಗೂ ಪಿ.ಎಂ ಸರಸ್ವತಿ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
(ಮೊದಲ ಪುಟದಿಂದ)
ಚೆಟ್ಟಳ್ಳಿ ಹಿಂದೂ ಮಲಯಾಳಿ ಸಮಾಜದ ಸದಸ್ಯರ, ಎಸ್.ಎಸ್. ಎಲ್.ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ವತಿಯಿಂದ ಪ್ರೋತ್ಸಾಹ ಬಹುಮಾನ ನೀಡಲಾಯಿತು.
ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಸಮಾರೋಪ ಸಮಾರಂಭದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್, ಕೊಡಗು ಜಿಲ್ಲೆಯಲ್ಲಿ ರುವ ಹಿಂದೂ ಮಲಯಾಳಿ ಬಾಂಧವರು ಒಗ್ಗಟ್ಟಾಗಿ ಮುಂದೆ ಸಾಗಬೇಕು. ಸಂಘಟನೆಯನ್ನು ಗಟ್ಟಿಯಾಗಿ ಬೆಳೆಸಿ ತಮ್ಮ ಹಕ್ಕನ್ನು ಪಡೆದುಕೊಳ್ಳಬೇಕೆಂದು ಸಲಹೆಯಿತ್ತರು.
ಕಾಂಗ್ರೆಸ್ ಯುವ ಮುಖಂಡ ಡಾ. ಮಂಥರ್ ಗೌಡ ಮಾತನಾಡಿ, ಎಲ್ಲಾ ಸಮುದಾಯಗಳು ಪ್ರಗತಿ ಸಾಧಿಸಬೇಕೆಂದರೆ,ಶೈಕ್ಷಣಿಕವಾಗಿ ಬೆಳೆಯಬೇಕು. ಹಾಗಾದಾಗ ಮಾತ್ರ ಸಮುದಾಯಗಳು ಪ್ರಗತಿ ಸಾಧಿಸಲು ಸಾಧ್ಯ ಎಂದರು.
ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಗೌರವಾಧ್ಯಕ್ಷ ಕೆ.ಎಂ. ರಮೇಶ್ ಮಾತನಾಡಿ, ನಮ್ಮ ಯುವ ಜನಾಂಗಕ್ಕೆ ಓಣಂ ಹಬ್ಬದ ಮಹತ್ವವನ್ನು ಮನದಟ್ಟು ಮಾಡಿಸುವ ಕೆಲಸ ಹಿರಿಯರಿಂದ ಆಗಬೇಕಾಗಿದೆ ಎಂದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು, ಚೆಟ್ಟಳ್ಳಿ ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ಎನ್. ಚಂದ್ರನ್ ವಹಿಸಿದ್ದರು.
ವೇದಿಕೆಯಲ್ಲಿ ಚೆಟ್ಟಳ್ಳಿ ಹಿಂದೂ ಮಲಯಾಳಿ ಸಮಾಜದ ಗೌರವಾಧ್ಯಕ್ಷ ಟಿ.ಆರ್. ವಾಸುದೇವನ್, ಎಸ್.ಎಲ್.ಎನ್. ಪ್ಲಾಂಟೇಷನ್ ವ್ಯವಸ್ಥಾಪಕ ಪಿ. ಕಣ್ಣನ್, ಚೆಟ್ಟಳ್ಳಿ ಓಣಂ ಆಚರಣಾ ಸಮಿತಿ ಅಧ್ಯಕ್ಷ ಓ.ಕೆ. ಶ್ರೀನಿವಾಸ್, ಮೂರ್ನಾಡು ಸಮಾಜದ ಅಧ್ಯಕ್ಷ ಕೆ.ಬಾಬು, ಗೋಣಿಕೊಪ್ಪ ಹಿಂದೂ ಮಲಯಾಳಿ ಸಮಾಜದ ಶರತ್ ಕಾಂತ್, ಮಡಿಕೇರಿ ನಗರಸಭಾ ನಾಮನಿರ್ದೇಶಿತ ಸದಸ್ಯ ಕೆ.ವಿ ಸುಬ್ರಮಣಿ, ಸುಂಟಿಕೊಪ್ಪ ಸಮಾಜದ ಅಧ್ಯಕ್ಷ ಸಂತೋಷ್ ಕುಮಾರ್, ಚೆಟ್ಟಳ್ಳಿ ಓಣಂ ಆಚರಣಾ ಸಮಿತಿ ಗೌರವಾಧ್ಯಕ್ಷೆ ಸರೋಜಿನಿ ಬಾಲನ್, ಬಾಬು, ವಿಜಯನ್, ಕೊಡಗು ಜಿಲ್ಲಾ ಹಿಂದೂ ಮಲಯಾಳಿ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ. ಶಶಿಕುಮಾರ್ ಹಾಗೂ ಜಿ.ಪಂ. ಮಾಜಿ ಸದಸ್ಯೆ ಸುನಿತಾ ಮಂಜುನಾಥ್ ಹಾಗೂ ಇನ್ನಿತರರು ಇದ್ದರು. ಪಿ.ಕೆ. ಶಶಿಕುಮಾರ್ ಕಾರ್ಯಕ್ರಮ ನಿರೂಪಿಸಿದರು.
-ಇಸ್ಮಾಯಿಲ್ ಕಂಡಕರೆ