ಮಡಿಕೇರಿ, ಅ.೩೦ : ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ವಿಸ್ತಾರ ನ್ಯೂಸ್ ಚಾನಲ್ ನೀಡುವ ವಿಸ್ತಾರ ಕಾಯಕ ಯೋಗಿ ಪುರಸ್ಕಾರಕ್ಕೆ ಕೊಡಗಿನ ಜಿಲ್ಲಾ ಅಗ್ರಣಿ ಬ್ಯಾಂಕ್ ನಿವೃತ್ತ ಮುಖ್ಯಸ್ಥ ಆರ್.ಕೆ. ಬಾಲಚಂದ್ರ ಭಾಜನರಾಗಿದ್ದಾರೆ.
ಮೂಲತಃ ಉತ್ತರ ಕನ್ನಡದ ಶಿರಸಿಯವರಾದ ಬಾಲಚಂದ್ರ, ೪.೫ ಲಕ್ಷಕ್ಕೂ ಅಧಿಕ ಯುವ ಕನ್ನಡಿಗರಿಗೆ ಉಚಿತ ಬ್ಯಾಂಕಿAಗ್ ಪರೀಕ್ಷಾ ತರಬೇತಿ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ನವೆಂಬರ್ ೬ ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ವಿಸ್ತಾರ ನ್ಯೂಸ್ ಚಾನೆಲ್ ಅನಾವರಣ ಕಾರ್ಯಕ್ರಮದಲ್ಲಿ ಆರ್.ಕೆ. ಬಾಲಚಂದ್ರ ಸೇರಿದಂತೆ ಕರ್ನಾಟಕದ .ವಿವಿಧ ಕ್ಷೇತ್ರದ ೩೨ ಗಣ್ಯರಿಗೆ ಕಾಯಕ ಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.