ಗೋಣಿಕೊಪ್ಪಲು, ಅ.೩೦: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆ ಟರ್ಫ್ ಮೈದಾನದಲ್ಲಿ ನಡೆಯುತ್ತಿರುವ ದಿ.ಪಾಂಡAಡ ಕುಟ್ಟಪ್ಪ ಸ್ಮರಣಾರ್ಥ ಕೊಡವ ಕೌಟುಂಬಿಕ ರಿಂಕ್ ಹಾಕಿ ನಮ್ಮೆಯ ೪ ನೇ ದಿನದ ರೋಚಕ ಪಂದ್ಯಾವಳಿಯು ಕುಲ್ಲೇಟಿರ ಹಾಗೂ ಕಳ್ಳಿಚಂಡ ತಂಡಗಳ ನಡುವೆ ನಡೆಯಿತು.

ಪಂದ್ಯದ ಆರಂಭದಿAದಲೂ ಎರಡು ತಂಡಗಳು ಸಮಬಲದ ಹೋರಾಟ ನಡೆಸಿದವು. ಅಂತಿಮವಾಗಿ ೯-೭ ಗೋಲುಗಳಿಂದ ಕುಲ್ಲೇಟಿರ ತಂಡ ಜಯಗಳಿಸಿ ಪ್ರಿ ಕ್ವಾಟರ್‌ಗೆ ಪ್ರವೇಶ ಪಡೆಯಿತು.

ಕುಲ್ಲೇಟಿರ ನಾಚಪ್ಪ ೩, ಶುಭಂ, ಉತ್ತಯ್ಯ, ಮಂದಪ್ಪ ತಲಾ ೨ ಗೋಲು ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರೆ, ಕಳ್ಳಿಚಂಡ ಗೌತಮ್ ಸಾವನ್ ತಲಾ ೩, ಬೋಪಣ್ಣ ೧ ಗೋಲು ಗಳಿಸಿ ಸೋಲಿನ ಅಂತರ ತಗ್ಗಿಸಿದರು.

ದಿನದ ಮೊದಲನೇ ಪಂದ್ಯದಲ್ಲಿ ಕುಲ್ಲೇಟಿರÀ ತಂಡ, ನೂರೇರ ತಂಡದ ವಿರುದ್ಧ ೧೧-೨ ಗೋಲಿನ ಅಂತರದಿAದ ಜಯಗಳಿಸಿತು.

ಕುಲ್ಲೇಟಿರ ಶುಭಂ, ಮಂದಪ್ಪ ತಲಾ ೩, ನಾಚಪ್ಪ ೨, ಯಶಿಕ್, ಸೋಮಣ್ಣ, ಉತ್ತಯ್ಯ ತಲಾ ೧ ಗೋಲು, ನೂರೇರ ಶರಣ್, ನಮನ್ ಒಂದೊAದು ಗೋಲು ಬಾರಿಸಿದರು.

ಮತ್ತೊಂದು ಪಂದ್ಯದಲ್ಲಿ ಕೊಂಗAಡ ವಿರುದ್ಧ ಕಳ್ಳಿಚಂಡ ೭-೩ ಅಂತರದಿAದ ಜಯಭೇರಿ ಬಾರಿಸಿತು. ಕಳ್ಳಿಚಂಡ ಬೋಪಣ್ಣ ೫ ಗೋಲು ಗಳಿಸಿ ಸಂಚಲನ ಮೂಡಿಸಿದರು. ಸ್ವಾನ್ ೨, ಕೊಂಗAಡ ಯಶಸ್ ೩ ಗೋಲು ಬಾರಿಸಿದರು.

ಮೇಚಿಯಂಡ ವಿರುದ್ಧ ಕೋಡಿಮಣಿಯಂಡ ೪-೩ ಗೋಲುಗಳ ರೋಚಕ ಜಯ ಸಾಧಿಸಿತು. ಕೋಡಿಮಣಿಯಂಡ ಗಗನ್ ಮತ್ತು ಉತ್ತಪ್ಪ ತಲಾ ೨ ಗೋಲು ಬಾರಿಸಿದರು.

ಚಂದುರ ವಿರುದ್ಧ ಬಿದ್ದಾಟಂಡ ೪-೩ ಗೋಲಿನಿಂದ ಜಯ ಸಾಧಿಸಿತು. ಬಿದ್ದಾಟಂಡ ಚೆಲೆಸ ೪, ಚೆಂದುರ ಶ್ಯಾಮ್ ೨, ದೇವಯ್ಯ ೧ ಗೋಲು ಬಾರಿಸಿದರು.

ಮತ್ತೊಂದು ರೋಚಕ ಪಂದ್ಯದಲ್ಲಿ ಚೌರಿರ ತಂಡ ಮಾದಂಡ ತಂಡವನ್ನು ೫-೪ ಗೋಲುಗಳಿಂದ ಸೋಲಿಸಿತು.

ಚೌರಿರ ಪ್ರತಾಪ್ ೩, ಪೊನ್ನಣ್ಣ, ಡಾನ್ ತಲಾ ೧ ಗೋಲು, ಮಾದಂಡ ಅಪ್ಪಯ್ಯ ೨, ಜಗದೀಶ್ ೧, ಮಿಲನ್ ೧ ಗೋಲು ಬಾರಿಸಿದರು. ಇಟ್ಟೀರ ತಂಡ ಬೊಳಿಯಾಡಿರ ತಂಡವನ್ನು ೬-೨ ಗೋಲುಗಳಿಂದ ಸೋಲಿಸಿತು. ಇಟ್ಟೀರ ಅಚ್ಚಯ್ಯ ೩, ಜಗನ್ ೨, ಅಚ್ಚಪ್ಪ ೧, ಬೊಳಿಯಾಡಿರ ಚೇತನ್ ೨ ಗೋಲು ಬಾರಿಸಿದರು.ಪಂದ್ಯಾವಳಿ ವೀಕ್ಷಿಸಲು ಕ್ರೀಡಾ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮೈದಾನಕ್ಕೆ ಆಗಮಿಸಿದ್ದರು.

ಸರ್ವಿಸಸ್‌ನ ಮಾಜಿ ಆಟಗಾರ ಮುಂಡುಮಾಡ ರಾಮು, ಕಾಫಿ ಬೆಳೆಗಾರ ಮಾಚಿಮಾಡ ಸತೀಶ್, ಮಾಂಗೇರ ವೃಂದಾ, ಬೇರೆರ ಸೂರಜ್ ಮುತ್ತಣ್ಣ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಆಗಮಿಸಿದ್ದರು.

- ಹೆಚ್.ಕೆ.ಜಗದೀಶ್