ಮಡಿಕೇರಿ, ಅ. ೨೯: ಅಮ್ಮತ್ತಿ-ಒಂಟಿಯAಗಡಿಯಲ್ಲಿನ ಕೊಡವ ಅಸೋಸಿಯೇಷನ್‌ನಿಂದ ಏರ್ಪಡಿಸಲಾಗಿದ್ದ .೨೨ ರೈಫಲ್ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧಾ ವಿಜೇತರ ವಿವರ ಇಂತಿದೆ. ಪ್ರಥಮ ಸ್ಥಾನ ನೆಲ್ಲಮಕ್ಕಡ ವಿವೇಕ್, ದ್ವಿತೀಯ ಸೂದನ ಭೀಷ್ಮ, ತೃತೀಯ ಪುದಿಯೊಕ್ಕಡ ಪೂಣಚ್ಚ ಹಾಗೂ ನಾಲ್ಕನೇ ಸ್ಥಾನ ನೆಲ್ಲೀರ ಧನು. ಪ್ರಥಮ ಸ್ಥಾನಕ್ಕೆ ರೂ. ೩೦ ಸಾವಿರ ನಗದು ಹಾಗೂ ಒಡಿಕತ್ತಿ, ದ್ವಿತೀಯ, ತೃತೀಯ ಹಾಗೂ ನಾಲ್ಕನೇ ಸ್ಥಾನಕ್ಕೆ ತಲಾ ರೂ. ೧೫ ಸಾವಿರ ನಗದು ಹಾಗೂ ಒಡಿಕತ್ತಿ ನೀಡಲಾಯಿತು.