ವೀರಾಜಪೇಟೆ, ಅ. ೨೮: ವೀರಾಜಪೇಟೆ ಕೊಡವ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ನಲ್ಲಿ ಕ್ಯಾಶ್‌ಲೆಸ್ ಬ್ಯಾಂಕಿAಗ್ ಸೌಲಭ್ಯವನ್ನು ಆರಂಭಿಸಲಾಗಿದೆ ಎಂದು ವೀರಾಜಪೇಟೆ ಕೊಡವ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್‌ನ ಅಧ್ಯಕ್ಷ ನೆಲ್ಲಮಕ್ಕಡ ಉಮೇಶ್ ಮುತ್ತಣ್ಣ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಣಿಜ್ಯ ಬ್ಯಾಂಕಿನ ಸಂಯೋಗದೊAದಿಗೆ ಆರ್.ಟಿ.ಜಿ.ಎಸ್, ನೆಫ್ಟ್ ಹಾಗೂ ನೆಟ್ ಬ್ಯಾಂಕಿAಗ್ ಸೌಲಭ್ಯಗಳನ್ನು ನೀಡುತ್ತಿದ್ದು ಸದಸ್ಯರು ಹಾಗೂ ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.

ಸಂಸ್ಥೆ ೨೦೧೯ ರಲ್ಲಿ ಪ್ರಾರಂಭಗೊAಡಿದ್ದು, ಒಟ್ಟು ೧೨೦೦ ಸದಸ್ಯರಿದ್ದಾರೆ. ಪಾಲು ಬಂಡವಾಳ ೬೦ ಲಕ್ಷ, ಒಟ್ಟು ಠೇವಣಾತಿ ೪.೮೦ ಕೋಟಿ, ವಿತರಿಸಿರುವ ಎಲ್ಲಾ ವಿಧದ ಸಾಲಗಳು- ೪.೦೦ ಕೋಟಿ ಆಗಿರುತ್ತದೆ.

ಈ ಸಹಕಾರಿಯಲ್ಲಿ ಎಲ್ಲಾ ವಿಧದ ಠೇವಣಾತಿಗಳಿಗೆ ಹೆಚ್ಚಿನ ಬಡ್ಡಿ ನೀಡಲಾಗುತ್ತಿದೆ ಎಲ್ಲಾ ವಿದಧ ಆಧಾರ ಸಹಿತ ಸಾಲಗಳು ತ್ವರಿತವಾಗಿ ಹಾಗೂ ಸುಲಭ ಕಂತು ಹಾಗೂ ಕಡಿಮೆ ಬಡ್ಡಿಯಲ್ಲಿ ದೊರೆಯುತ್ತದೆ. ಗ್ರಾಹಕರ ಅನುಕೂಲಕ್ಕಾಗಿ ಸೇಫ್ ಡೆಪಾಸಿಟ್ ಲಾಕರ್ ಹಾಗೂ ಇ ಸ್ಟಾಂಪಿAಗ್ ಸೌಲಭ್ಯವನ್ನು ಈಗಾಗಲೇ ಕಾರ್ಯಗತ ಗೊಳಿಸಲಾಗಿದೆ.

ಸದಸ್ಯರಿಗೆ ಮರಣ ನಿಧಿ ಸೌಲಭ್ಯ ಇರುತ್ತದೆ. ಹೆಚ್ಚಿನÀ ಮಾಹಿತಿಗೆ ಕಚೇರಿ ಮೊ ನಂ. ೯೧೪೧೦೫೦೯೬೨ ಅನ್ನು ಸಂಪರ್ಕಿಸಬಹುದು ಎಂದು ಹೇಳಿದರು.

ಉಪಾಧ್ಯಕ್ಷ ಚೆಂದAಡ ವಸಂತ್ ಕುಮಾರ್, ನಿರ್ದೇಶಕರುಗಳಾದ ಕಾಂಡAಡ ಚರ್ಮಣ, ಕೊಂಗAಡ ಟಾಟ ನಾಣಯ್ಯ, ಮೇಕೇರಿರ ಪಾಲಿ ಸುಬ್ರಮಣಿ, ಕಾರ್ಯ ನಿರ್ವಹಣಾಧಿಕಾರಿ ಮುಕ್ಕಾಟಿರ ಅಕ್ಕಮ್ಮ ಉಪಸ್ಥಿತರಿದ್ದರು.