ಗೋಣಿಕೊಪ್ಪಲು. ಅ. ೨೮: ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನದಲ್ಲಿ ಕೊಡವ ಹಾಕಿ ಅಕಾಡೆÀಮಿ ವತಿಯಿಂದ ನಡೆಯುತ್ತಿರುವ ಕೊಡವ ಕೌಟಂಬಿಕ ರಿಂಕ್ ಹಾಕಿ ಉತ್ಸವದ ೨ನೇ ದಿನ ೮ ತಂಡಗಳು ಮುನ್ನಡೆ ಸಾಧಿಸಿದವು.

ಬೊಳ್ಳೇರ ವಿರುದ್ಧ ನಾಪಂಡ ೧೧-೧ ಗೋಲುಗಳ ಅಂತರದ ಸುಲಭ ಜಯ ಸಾಧಿಸಿತು.

ನಾಪಂಡ ನಾಚಪ್ಪ ೮ ಗೋಲು ಬಾರಿಸಿ ಮಿಂಚಿದರೆ, ಚಂಗಪ್ಪ ೨, ಕಿರಣ್ ೧, ಬೊಳ್ಳೇರ ಬೋಪಣ್ಣ ಏಕೈಕ ಗೋಲು ಹೊಡೆದರು.

ಮಲ್ಲಂಡ ವಿರುದ್ಧ ಮಾಳೇಟಿರ ೭-೩ ಗೋಲುಗಳಿಂದ ಜಯ ಸಾಧಿಸಿತು. ಮಾಳೇಟಿರ ಪರ ದಿಶ, ವಿಕಾಸ್, ಜೀವನ್ ತಲಾ ೨ ಗೋಲು, ವಿಶಾಲ್ ೧ ಗೋಲು ಗಳಿಸಿದರು. ಮಲ್ಲಂಡ ಪರ ಬಿಪಿನ್, ಉತ್ತಪ್ಪ, ಮದನ್ ತಲಾ ೧ ಗೋಲು ಹೊಡೆದರು.

ನಾಪಂಡ ವಿರುದ್ಧ ಪರದಂಡ ೭-೩ ಗೋಲಿನಿಂದ ಜಯಭೇರಿ ಬಾರಿಸಿತು. ಪರದಂಡ ಪರ ಕೀರ್ತನ್, ಪ್ರಸಾದ್ ತಲಾ ೩, ಚಸ್ವಿನ್ ೧ ಗೋಲು ಬಾರಿಸಿದರು. ನಾಪಂಡ ಪರ ನಾಚಪ್ಪ ೨, ಚಂಗಪ್ಪ ೧ ಗೋಲು ಹೊಡೆದರು

ಕರ್ತಮಾಡ, ಅಲ್ಲಪಂಡ ವಿರುದ್ಧ ೭-೫ ಗೋಲಿನ ಜಯ ದಾಖಲಿಸಿತು. ಕರ್ತಮಾಡ ಚಂಗಪ್ಪ ೩, ಬೆಳ್ಳಿಯಪ್ಪ ೨, ಲವ, ರೋಷನ್ ತಲಾ ೧ ಗೋಲು ಬಾರಿಸಿದರೆ, ಅಲ್ಲಪಂಡ ಬನ್ಸಿ ೪, ಲಿಖಿತ್ ೧ ಗೋಲು ಹೊಡೆದರು.

ಆಲೆಮಾಡ ವಿರುದ್ಧ ಮಾತಂಡ ೮-೦ ಗೋಲುಗಳಿಂದ ಭರ್ಜರಿ ಜಯ ಸಾಧಿಸಿತು. ಮಾತಂಡ ಆರ್ಯನ್ ೩, ಸುಬ್ಬಯ್ಯ ಹಾಗೂ ಗಣಪತಿ ತಲಾ ೨, ಅಮೃತ್ ೧ ಗೋಲು ಗಳಿಸಿದರು.

ಕೇಚಂಡ, ಮುದ್ದಿಯಡ ವಿರುದ್ಧ ೭-೨ ಗೋಲಿನ ಅಂತರದ ಜಯಭೇರಿ ಬಾರಿಸಿತು. ಕೇಚಂಡ ತಸ್ವಿನ್ ೩, ಶರಣು, ವಿಪುಲ್ ತಲಾ ೨ ಗೋಲು ಹೊಡೆದರು.ಮುದ್ದಿಯಡ ದಿಶಾನ್ ೨ ಗೋಲು ಗಳಿಸಿದರು.

ಪಳಂಗAಡ ತಂಡಕ್ಕೆ ನಿಗದಿತ ಸಮಯದಲ್ಲಿ ಮೈದಾನಕ್ಕೆ ಇಳಿಯಲು ಸಾಧ್ಯವಾಗದ ಕಾರಣ ಮಾಳೇಟಿರ ತಂಡ ವಾಕ್ ಓವರ್ ಪಡೆದುಕೊಂಡು ಮುನ್ನಡೆಯಿತು.

ಕರೋಟಿರ ವಿರುದ್ಧ ಅಮ್ಮಂಡ ೬-೫ ಗೋಲುಗಳ ರೋಚಕ ಜಯ ಸಾಧಿಸಿತು. ಅಮ್ಮಂಡ ರೋಹನ್ ೪, ನಾಚಪ್ಪ ೨, ಕರೋಟಿರ ಪೂವಣ್ಣ ೨, ಸಚಿನ್, ಬೋಪಣ್ಣ ತಲಾ ೧ ಗೋಲು ಬಾರಿಸಿದರು.

ಮಲ್ಲಂಗಡ ವಿರುದ್ಧ ಮನೆಯಪಂಡ ೬-೫ ಗೋಲಿನ ಜಯಗಳಿಸಿತು. ಮನೆಯಪಂಡ ಸುಬ್ಬಯ್ಯ ೩, ಬೋಪಣ್ಣ ೨, ಮಾಚಯ್ಯ ೧, ಮಲ್ಲಂಗಡ ಲೇಖನ್ ೩, ಪವನ್ ೧, ಧೀರಜ್ ೧ ಗೋಲು ಹೊಡೆದರು.

ಮೂಕಳೇರ ವಿರುದ್ಧ ಮಾಚಂಗಡ ೫- ೧ ಗೋಲುಗಳ ಜಯಪಡೆಯಿತು.

ಮಾಚಂಡ ಪ್ರಿನ್ಸ್ ೫ ಗೋಲು ಹೊಡೆದು ಮಿಂಚಿದರೆ, ಮೂಕಳೇರ ಲಿಖಿತ್ ೧ ಗೋಲು ಹೊಡೆದರು. ಚೊಟ್ಟೆಯಂಡಮಾಡ ವಿರುದ್ಧ ನಾಮೇರ ೭-೩ ಗೋಲುಗಳ ವಿಜಯ ಸಾಧಿಸಿತು. ನಾಮೇರ ಕರುಣ್ ೩, ಬೋಪಣ್ಣ, ಚಿಣ್ಣಪ್ಪ ತಲಾ ೨ ಗೋಲು ಗಳಿಸಿದರು. ಚೊಟ್ಟೆಯಂಡಮಡ ಗೌರವ್ ೨, ಶಾಶ್ವತ್ ೧ ಗೋಲು ಬಾರಿಸಿದರು.

ನೆರ್ಪಂಡ ವಿರುದ್ಧ ತಿರ್‌ಟೆರ ೯-೨ ಗೋಲುಗಳ ಜಯಗಳಿಸಿತು.

ತಿರ್‌ಟೆರ ವಿನು ೫, ಪೂವಯ್ಯ ೨, ಗೌತಮ್, ಭುವನ್ ತಲಾ ೧, ನೆರ್ಪಂಡ ಸೋಮಣ್ಣ ೨ ಗೋಲು ಗಳಿಸಿದರು. ಕರ್ತಮಾಡ ವಿರುದ್ಧ ಪರದಂಡ ೭-೩ ಗೋಲುಗಳಿಂದ ಜಯಗಳಿಸಿತು. ಪರದಂಡ ಕೀರ್ತನ್ ೩, ಕುಶಾಲಪ್ಪ, ಪ್ರಸಾದ್ ತಲಾ ೨, ಕರ್ತಮಾಡ ಲವ ೩ ಗೋಲು ಬಾರಿಸಿದರು. ಮಾತಂಡ, ಮಾಳೇಟಿರ ವಿರುದ್ಧ ೧೦-೬ ಗೋಲಿನಿಂದ ಜಯ ಜಯಭೇರಿ ಬಾರಿಸಿತು. ಮಾತಂಡ ಸುಬ್ಬಯ್ಯ ೬, ಆರ್ಯನ್ ೪, ಮಾಳೇಟಿರ ಮುದ್ದಪ್ಪ ೩, ಜಯ ೨, ದಿಶ ೧ ಗೋಲು ಗಳಿಸಿದರು.

- ಹೆಚ್.ಕೆ. ಜಗದೀಶ್