(ಹೆಚ್.ಕೆ. ಜಗದೀಶ್)ಗೋಣಿಕೊಪ್ಪಲು, ಅ. ೨೭: ಕೊಡವ ಕೌಟುಂಬಿಕ ಹಾಕಿ ಉತ್ಸವದ ಜನಕ ದಿವಂಗತ ಪಾಂಡAಡ ಎಂ. ಕುಟ್ಟಪ್ಪ ಅವರ ಸ್ಮರಣಾರ್ಥವಾಗಿ ಕೊಡವ ಹಾಕಿ ಅಕಾಡೆಮಿ ಪ್ರಥಮ ಬಾರಿಗೆ ಕೊಡವ ಕುಟುಂಬಗಳ ನಡುವೆ ೫ಂ ಸೈಡ್ ಹಾಕಿ ಪಂದ್ಯಾವಳಿಯನ್ನು ಆಯೋಜಿಸಿದ್ದು, ಪೊನ್ನಂಪೇಟೆಯ ಸಿಂಥೆಟಿಕ್ ಟರ್ಫ್ ಮೈದಾನದಲ್ಲಿ ಇಂದು ಚಾಲನೆ ನೀಡಲಾಯಿತು.
ವಾರ್ಷಿಕವಾಗಿ ಬೇಸಿಗೆಯಲ್ಲಿ ಕೌಟುಂಬಿಕ ಹಾಕಿ ಉತ್ಸವವನ್ನು ಕೊಡವ ಹಾಕಿ ಅಕಾಡೆಮಿ ಸಹಯೋಗದಲ್ಲಿ ಬೇರೆ ಬೇರೆ ಕುಟುಂಬಗಳು ಆತಿಥ್ಯ ವಹಿಸಿಕೊಂಡು ನಡೆಸುತ್ತಿವೆ. ಈ ೫ಂ ಸೈಡ್ ಪಂದ್ಯಾವಳಿಯನ್ನು ಈ ಬಾರಿ ಕಳೆದ ಎರಡು ವರ್ಷಗಳ ಹಿಂದೆ ಸ್ವರ್ಗೀಯರಾದ ಕುಟ್ಟಪ್ಪ ಅವರ ಸ್ಮರಣಾರ್ಥವಾಗಿ ಕೊಡವ ಹಾಕಿ ಅಕಾಡೆಮಿಯೇ ೨೦೨೩ರ ವಾರ್ಷಿಕ ಉತ್ಸವಕ್ಕೆ ಹೊಸ ಪ್ರೇರೇಪಣೆಯ ಮಾದರಿಯಲ್ಲಿ ಆಯೋಜಿಸಿದೆ. ಈ ಪಂದ್ಯಾವಳಿಗೆ ಒಟ್ಟು ೧೧೪ ಕುಟುಂಬಗಳು ಪಾಲ್ಗೊಂಡಿದ್ದು, ನವೆಂಬರ್ ೬ರ ತನಕ ಜರುಗಲಿದೆ.
ದ.ಕೊಡಗಿನ ಪ್ರಮುಖ ಪಟ್ಟಣವಾದ ಪೊನ್ನಂಪೇಟೆಯ ಟರ್ಫ್ ಮೈದಾನದಲ್ಲಿ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷರಾದ ಪಾಂಡAಡ ಕುಟ್ಟಪ್ಪನವರ ಪುತ್ರ ಹಾಗೂ ಪ್ರಸ್ತುತ ಕೊಡವ ಹಾಕಿ ಅಕಾಡೆಮಿಯ ನೂತನ ಅಧ್ಯಕ್ಷರಾಗಿರುವ ಪಾಂಡAಡ ಬೋಪಣ್ಣ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವೂ ಯಶಸ್ವಿಯಾಗಿ ಜರುಗಿತು. ಟರ್ಫ್ ಮೈದಾನದಲ್ಲಿ ಬೆಳ್ಳಿ ಸ್ಟಿಕ್ನಿಂದ ಬೆಳ್ಳಿ ಬಾಲನ್ನು ತಳ್ಳುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಲಾಯಿತು. ಕರ್ನಾಟಕ ಜೀವ ವೈವಿದ್ಯ ಮಂಡಳಿ ರಾಜ್ಯಾಧ್ಯಕ್ಷ ನಾಪಂಡ ರವಿ ಕಾಳಪ್ಪ, ಒಲಂಪಿಯನ್ ಹಾಕಿ ಆಟಗಾರ ಚೆಪ್ಪುಡೀರ ಎಸ್.ಪೂಣಚ್ಚ, ಸೇರಿದಂತೆ ಇನ್ನಿತರ ಗಣ್ಯರು ಈ ಅಪರೂಪದ ಕ್ರೀಡಾಕೂಟವನ್ನು ಸಾಕ್ಷೀಕರಿಸಿದರು.
ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡAಡ ಬೋಪಣ್ಣ ಹಾಗೂ ಅತಿಥಿಗಳು ಬೆಳ್ಳಿ ಸ್ಟಿಕ್ ಹಾಗೂ ಬೆಳ್ಳಿ ಬಾಲ್ನೊಂದಿಗೆ ಅತಿಥಿಗಳೊಂದಿಗೆ ವೇದಿಕೆಯಿಂದ ಕೊಡವ ವಾಲಗದೊಂದಿಗೆ ಮೈದಾನಕ್ಕೆ ಆಗಮಿಸಿದರು. ಈ ವೇಳೆ ಬಾರಿ ಸಂಖ್ಯೆಯಲ್ಲಿ ಸೇರಿದ್ದ ಹಾಕಿ ಪ್ರೇಮಿಗಳು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತ ಪಡಿಸಿದರು. ಕಳೆದ ೫ ವರ್ಷಗಳಿಂದ ಹಲವು ಕಾರಣಗಳಿಂದ ನೆನೆಗುದಿಯಲ್ಲಿದ್ದ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಇದೀಗ ೫ಂ ಸೈಡ್ ಪಂದ್ಯಾಟದ ಮೂಲಕ ಚಾಲನೆ ದೊರೆಯುತ್ತಿದ್ದಂತೆ ಎಲ್ಲರ ಮೊಗದಲ್ಲೂ ಸಂತಸ ಮನೆ ಮಾಡಿತ್ತು.
ಪಂದ್ಯಾವಳಿಗೆ ಆಗಮಿಸಿದ ಕ್ರೀಡಾಪಟುಗಳು ಟರ್ಫ್ ಮೈದಾನದಲ್ಲಿ ತಮ್ಮ ಪ್ರದರ್ಶನವನ್ನು ತೋರಿಸುವ ಮೂಲಕ ಕ್ರೀಡಾಭಿಮಾನಿಗಳ ಗಮನ ಸೆಳೆಯಲಿದ್ದಾರೆ. ಪ್ರತಿ ಪಂದ್ಯಾವಳಿಗೆ ಒಟ್ಟು ೧೫ ನಿಮಿಷಗಳ ಅವಕಾಶ ನೀಡಲಾಗಿದೆ.
ವಿವಿಧ ಜನಾಂಗೀಯ ಕ್ರೀಡೆಗೂ ಕುಟ್ಟಪ್ಪ ಕಾರಣರು
ಕೊಡವ ಹಾಕಿ ಪಂದ್ಯಾವಳಿಯಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕರ್ನಾಟಕ ಜೀವ ವೈವಿದ್ಯ ಮಂಡಳಿ ರಾಜ್ಯಾಧ್ಯಕ್ಷ ನಾಪಂಡ ರವಿ ಕಾಳಪ್ಪ ಕೊಡಗಿನಲ್ಲಿ ಮೊದಲ ಬಾರಿಗೆ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಪರಿಚಯಿಸಿದ ಕೀರ್ತಿ ಪಾಂಡAಡ ಕುಟ್ಟಪ್ಪನವರಿಗೆ ಸಲ್ಲಬೇಕಾಗಿದೆ. ಇದರಿಂದ ಕೊಡವ ಕುಟುಂಬಗಳು ವರ್ಷಕ್ಕೊಮ್ಮೆ ಒಂದೆಡೆ ಸೇರುವ ಅವಕಾಶವನ್ನು ಕಲ್ಪಿಸಿದ್ದಾರೆ.
(ಮೊದಲ ಪುಟದಿಂದ) ತದನಂತರದಲ್ಲಿ ಕೊಡಗಿನ ನಾನಾ ಜನಾಂಗಗಳು ವಿವಿಧ ಕ್ರೀಡೆಗಳನ್ನು ಆಯೋಜಿಸುವ ಮೂಲಕ ತಮ್ಮ ತಮ್ಮ ಸಮಾಜವನ್ನು ಒಟ್ಟು ಗೂಡಿಸುವ ಕೆಲಸ ಮಾಡಿದ್ದಾರೆ.
ಕೊಡಗಿನಲ್ಲಿ ಕೌಟುಂಬಿಕ ಹಾಕಿ ಕ್ರೀಡೆಯ ಜನಕ ಎಂದು ಪ್ರಖ್ಯಾತಿ ಆಗಿರುವ ಪಾಂಡAಡ ಕುಟ್ಟಪ್ಪ ಉಳಿದ ಕ್ರೀಡೆಗೂ ಕೂಡ ಜನಕ ಆಗಿದ್ದಾರೆ ಎಂದು ಇವರ ಸಾಧನೆಯನ್ನು ಸ್ಮರಿಸಿದರು. ಇದೀಗ ಕುಟ್ಟಪ್ಪ ಅವರ ಸ್ಥಾನವನ್ನು ಕುಟ್ಟಪ್ಪನವರ ಮಗನಾದ ಪಾಂಡAಡ ಬೋಪಣ್ಣ ತುಂಬಿದ್ದಾರೆ. ಮುಂದೆ ಹಾಕಿ ಕ್ರೀಡೆಯು ಕೊಡಗಿನಲ್ಲಿ ಯಶಸ್ವಿಯಾಗಿ ನಡೆಯಲಿದೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದ ಅವರು ಕೊಡಗಿನ ಹಾಕಿ ಕ್ರೀಡೆ ವಿಶ್ವದಲ್ಲಿ ಗಮನ ಸೆಳೆದಿದೆ. ಇದರಿಂದ ಕೊಡಗಿನ ಕೀರ್ತಿ ಹೆಚ್ಚಾಗಿದೆ. ಕೊಡವರಿಗೆ ಹಾಕಿ ಕ್ರೀಡೆಯು ಒಂದು ಭಾಗವಾಗಿರುವುದು ಹೆಮ್ಮೆಯ ವಿಷಯ. ಸಾಕಷ್ಟು ಕ್ರೀಡಾ ಪಟುಗಳನ್ನು ದೇಶಕ್ಕೆ ನೀಡಿದ ಕೀರ್ತಿ ಕೊಡಗಿಗೆ ಸಲ್ಲಬೇಕು ಕೊಡವ ಹಾಕಿ ಅಕಾಡೆಮಿಗೆ ನಾಡಿನ ಜನತೆ ಸಂಪೂರ್ಣ ಸಹಕಾರ ನೀಡುವ ಮೂಲಕ ಹಾಕಿ ಕ್ರೀಡೆಯನ್ನು ಮತ್ತಷ್ಟು ಬೆಳೆಸಬೇಕು, ಇದರಿಂದ ಯುವ ಪ್ರತಿಭೆಗಳಿಗೆ ಉತ್ತಮ ವೇದಿಕೆಗಳು ಲಭಿಸಲಿದೆ ಎಂದರು.
ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡAಡ ಬೋಪಣ್ಣ ತಂದೆಯವರ ನಿಧನ ನಂತರ ಕೊಡಗಿನಲ್ಲಿ ಕೌಟುಂಬಿಕ ಹಾಕಿ ಪಂದ್ಯಾವಳಿ ನಡೆದಿರಲಿಲ್ಲ. ಇದರಿಂದ ಹಲವು ಮಹನೀಯರು ಸೇರಿ ಹಾಕಿಗೆ ಉತ್ತೇಜನ ನೀಡಲು ತೀರ್ಮಾನ ಕೈಗೊಳ್ಳಲಾಯಿತು. ಅಕಾಡೆಮಿಯ ಅಧ್ಯಕ್ಷನಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಪಾಂಡAಡ ಕುಟ್ಟಪ್ಪನವರ ಸ್ಮರಣಾರ್ಥ ೫ಂ ಸೈಡ್ ಹಾಕಿ ಪಂದ್ಯಾವಳಿಯನ್ನು ನಡೆಸಲು ನಿರ್ಧಾರ ಕೈಗೊಳ್ಳಲಾಯಿತು. ಆರಂಭದಲ್ಲಿ ಉತ್ತಮವಾದ ಬೆಂಬಲ ದೊರೆತ ಹಿನ್ನೆಲೆಯಲ್ಲಿ ಜಿಲ್ಲೆಯ ನಾನಾ ಭಾಗದಿಂದ ೧೧೪ ಕೊಡವ ಕುಟುಂಬಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ. ೧೦ ದಿನಗಳ ಕಾಲ ಪಂದ್ಯಾವಳಿ ನಡೆಯಲಿದ್ದು ಅನೇಕ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಲಾಗಿದೆ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಹಾಕಿ ಆಟಗಾರ, ಒಲಂಪಿಯನ್ ಚೆಪ್ಪುಡೀರ ಎಸ್. ಪೂಣಚ್ಚ ಮಾತನಾಡಿ ಭಾರತ ದೇಶಕ್ಕೆ ಸಾಕಷ್ಟು ಕ್ರೀಡಾಪಟುಗಳನ್ನು ಕೊಡಗು ಜಿಲ್ಲೆ ಕಳುಹಿಸಿಕೊಟ್ಟಿದೆ. ಇದರಿಂದ ಹಾಕಿ ಕ್ರೀಡೆಗಿರುವ ಗೌರವ ಹೆಚ್ಚಾಗಿದೆ. ಪ್ರತಿ ವರ್ಷವೂ ಕೌಟುಂಬಿಕ ಹಾಕಿ ಪಂದ್ಯಾವಳಿಗಳು ಯಶಸ್ವಿಯಾಗಿ ನಡೆಯಬೇಕು, ಇದರಿಂದ ಹೊಸ ಪ್ರತಿಭೆಗಳು ಕ್ರೀಡೆಯಲ್ಲಿ ಸಾಧನೆ ಮಾಡಲು ಅವಕಾಶವಾಗಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಕೂರ್ಗ್ ಹಾಕಿ ಅಸೋಸಿಯೆಷನ್ನ ಮಾಜಿ ಅಧ್ಯಕ್ಷ ಚೆಪ್ಪುಡೀರ ಎ. ಮುತ್ತಣ್ಣ, ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಅಧ್ಯಕ್ಷೆ ಗಿರಿಜ ವೆಂಕಟೇಶ್ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಉಪಾಧ್ಯಕ್ಷ ಮಂಡಚAಡ ಚಿಟ್ಟಿಯಪ್ಪ ಸೇರಿದಂತೆ ಪಾಂಡAಡ ಲೀಲಾ ಮೇದಪ್ಪ, ತೀತರಮಾಡ ಪ್ರಭು, ಪುಲಿಯಂಡ ಕಸ್ತೂರಿ ಚಂಗಪ್ಪ, ಮುಂತಾದವರು ಭಾಗವಹಿಸಿದ್ದರು. ಚೇಂದೀರ ನಿರ್ಮಲ ಬೋಪಣ್ಣ ಪ್ರಾರ್ಥಿಸಿ, ಕೊಡವ ಹಾಕಿ ಅಕಾಡೆಮಿಯ ಉಪಾಧ್ಯಕ್ಷ ಮಾದಂಡ ಪೂವಯ್ಯ ಸ್ವಾಗತಿಸಿ, ಚೆಪ್ಪುಡೀರ ಕಾರ್ಯಪ್ಪ, ಚೋಕಿರ ಅನಿತಾ ದೇವಯ್ಯ ನಿರೂಪಿಸಿದರು. ಹಾಕಿ ಅಕಾಡೆಮಿಯ ಕುಲ್ಲೇಟ್ಟೀರ ಅರುಣ್ ಬೇಬ ವಂದಿಸಿದರು. ಪಾಂಡAಡ ಕುಟ್ಟಪ್ಪನವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮವು ನಡೆಯಿತು.
ಕಾರ್ಯಕ್ರಮದಲ್ಲಿ ಹಾಕಿ ಕೂರ್ಗ್ ಕಾರ್ಯದರ್ಶಿ, ಮಾಜಿ ಅಂತರ್ರಾಷ್ಟಿçÃಯ ಆಟಗಾರ ಬುಟ್ಟಿಯಂಡ ಚಂಗಪ್ಪ, ಹಾಕಿ ಅಕಾಡೆಮಿಯ ಕಾರ್ಯದರ್ಶಿ ರನ್ನಾ ಭೀಮಯ್ಯ, ನಿರ್ದೇಶಕರಾದ ಚೈಯಂಡ ಸತ್ಯ ಗಣಪತಿ, ಚೇನಂಡ ಸುರೇಶ್ ನಾಣಯ್ಯ, ನೆರಪಂಡ ಹರ್ಷ ಮಂದಣ್ಣ, ಕಲಿಯಂಡ ಸಂಪನ್ ಅಯ್ಯಪ್ಪ, ಮಾರ್ಚಂಡ ಗಣೇಶ್ ಪೊನ್ನಪ್ಪ, ಕುಲ್ಲೇಟೀರ ಅರುಣ್ ಬೇಬ, ಕಂಬೀರAಡ ರಾಖಿ ಪೂವಣ್ಣ, ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು. ಈ ಹಿಂದಿನAತೆ ವಾರ್ಷಿಕ ಕೌಟುಂಬಿಕ ಹಾಕಿ ಹಬ್ಬ ೨೦೨೩ರಲ್ಲಿ ನಾಪೋಕ್ಲುವಿನಲ್ಲಿ ನಡೆಯಲಿದ್ದು, ಅಪ್ಪಚೆಟ್ಟೋಳಂಡ ಕುಟುಂಬ ಆಯೋಜಿಸುತ್ತಿದೆ.
೫ ತಂಡಗಳ ಮುನ್ನಡೆ
ಗುರುವಾರ ಆರಂಭವಾದ ಕೌಟುಂಬಿಕ ಹಾಕಿ ಹಣಾಹಣಿಯಲ್ಲಿ ಅಲ್ಲಪಂಡ ಹಾಗೂ ಕೇಳಪಂಡ ಕುಟುಂಬಗಳ ನಡುವೆ ನಡೆದ ಪಂದ್ಯಾವಳಿಯು ರೋಚಕತೆಯಿಂದ ಕೂಡಿತು. ಅಲ್ಲಪಂಡ ೭ ಗೋಲುಗಳನ್ನು ಬಾರಿಸಿದರೆ ಕೇಳಪಂಡ ೪ ಗೋಲುಗಳನ್ನು ಬಾರಿಸಿ ಸೋಲನ್ನು ಕಂಡಿತು. ಎರಡನೇ ಪಂದ್ಯ ಕರ್ತಮಾಡ ಹಾಗೂ ಬೊಟ್ಟಂಗಡ ನಡುವೆ ನಡೆದ ಪಂದ್ಯವು ರೋಮಾಂಚನಕಾರಿಯಾಗಿತ್ತು.
ಕರ್ತಮಾಡ ೪ ಗೋಲು ಬಾರಿಸಿದರೆ ಬೊಟ್ಟಂಗಡ ೨ ಗೋಲು ಗಳಿಸಿ ಸೋಲನ್ನು ಕಂಡರು. ೩ನೇ ಪಂದ್ಯ ಚಿಲ್ಲವಂಡ ಹಾಗೂ ಆಲೆಮಾಡ ಕುಟುಂಬಗಳ ನಡುವೆ ನಡೆಯಿತು. ಚಿಲ್ಲವಂಡ ೩ ಗೋಲು ಗಳಿಸಿದರೆ ಆಲೆಮಾಡ ೬ ಗೋಲನ್ನು ಬಾರಿಸಿ ವಿಜಯದ ನಗೆ ಬೀರಿತು. ೪ನೇ ಪಂದ್ಯಾಟ ಬಟ್ಟಿರ ಹಾಗೂ ಕಳ್ಳಂಗಡ ಕುಟುಂಬಗಳ ನಡುವೆ ಪಂದ್ಯಾಟವು ನಡೆಯಿತು.
ಬಟ್ಟಿರ ೪ ಗೋಲು ಗಳಿಸಿದರೆ ಇವರ ವಿರುದ್ಧ ಸೆಣಸಾಡಿದ ಕಳ್ಳಂಗಡ ೫ ಗೋಲು ಗಳಿಸಿ ವಿಜಯದ ನಗೆ ಬೀರಿತು. ಅಂತಿಮ ಪಂದ್ಯವು ಮಾತಂಡ ಹಾಗೂ ಶಿವಚಾಳಿಯಂಡ ಕುಟುಂಬಗಳ ನಡುವೆ ನಡೆಯಿತು. ಮಾತಂಡ ೭ ಗೋಲು ಬಾರಿಸಿ ಪಂದ್ಯದ ಆರಂಭದಿAದಲೂ ಹಿಡಿತ ಸಾಧಿಸಿತು ಶಿವಚಾಳಿಯಂಡ ೩ ಗೋಲು ಗಳಿಸಿ ಸೋಲು ಅನುಭವಿಸಿತು.