ಕರಿಕೆ, ಅ. ೨೭: ಬೆಲೆ ಬಾಳುವ ಔಷಧಿಗಳಿಗೆ ಉಪಯೋಗಿಸಲ್ಪಡುವ ಆನೆಯ ಹಲ್ಲುಗಳನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿದ ಅರಣ್ಯ ಸಂಚಾರಿ ದಳದವರು ಈರ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಮಡಿಕೇರಿ ಅರಣ್ಯ ಸಂಚಾರಿ ದಳದ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗಳಾದ ಶಿವರಾಮ್ ಬಾಬು ಅವರ ಮಾರ್ಗದರ್ಶನದಲ್ಲಿ
ನಡೆದ ಕಾರ್ಯಾಚರಣೆಯಲ್ಲಿ ಪೊನ್ನಂಪೇಟೆ ತಾಲೂಕಿನ
ಮೇಕೂರು ಹೊಸ್ಕರೆ ಗ್ರಾಮ ವ್ಯಾಪ್ತಿಯಲ್ಲಿ ಆನೆ ಹಲ್ಲು
ಮಾರಾಟ ಮಾಡಲು ಯತ್ನಿಸುತ್ತಿರುವ ಆರೋಪಿಗಳನ್ನು
ಮಾಲು ಸಮೇತ ಬಂಧಿಸುವಲ್ಲಿ ಅರಣ್ಯ
(ಮೊದಲ ಪುಟದಿಂದ) ಸಂಚಾರಿ ದಳದ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ. ಅರಣ್ಯ ಸಂಚಾರಿ ದಳಕ್ಕೆ ದೊರೆತ ಖಚಿತ ಸುಳಿವಿನ ಮೇರೆಗೆ ತಿತಿಮತಿ - ಪಾಲಿಬೆಟ್ಟ ರಸ್ತೆಯ ಪಕ್ಕದಲ್ಲಿರುವ ನಿರ್ಜನ ಮೋರಿಯ ಸಮೀಪ ಅಂದಾಜು ಇಪ್ಪತ್ತು ಕೆ.ಜಿ. ತೂಕದ ಮೂರು ಆನೆಯ ದವಡೆಯ ಹಲ್ಲುಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವಾಗ ಕಾರ್ಯಾಚರಣೆ ನಡೆಸಿದ ಸಂಚಾರಿದಳ ಇಬ್ಬರು ಆರೋಪಿಗಳನ್ನು ಮಾಲು ಸಮೇತವಾಗಿ ಬಂಧಿಸಿದ್ದಾರೆ. ಮತ್ತಿಬ್ಬರು ಆರೋಪಿಗಳು ಪರಾರಿಯಾಗಿದ್ದು, ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡು ಕಾನೂನು ರೀತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾರ್ಯಾಚರಣೆ ತಂಡದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ ನಾಯಕ್, ವಲಯ ಅರಣ್ಯ ಅಧಿಕಾರಿ, ಮಂಜುನಾಥ ದೂಳೆ, ಉಪವಲಯ ಅರಣ್ಯ ಅಧಿಕಾರಿಗಳಾದ ಚಂದ್ರಶೇಖರ, ಗಣಪತಿ ಪಿ., ವಿಕ್ರಮ ಜಿ. ಹಾಗೂ ವಾಹನ ಚಾಲಕ ಪ್ರಕಾಶ ಪಾಲ್ಗೊಂಡಿದ್ದರು. - ಸುಧೀರ್ ಹೊದ್ದೆಟ್ಟಿ