ವೀರಾಜಪೇಟೆ: ತಾಲೂಕಿನಾದ್ಯಂತ ಮೂರು ದಿನಗಳ ಕಾಲ ಬೆಳಕಿನ ಹಬ್ಬ ದೀಪಾವಳಿಯನ್ನು ಸಡಗರ ಸಂಭ್ರಮದಿAದ ಆಚರಿಸಲಾಯಿತು. ಸೋಮವಾರ ನರಕ ಚತುರ್ದಶಿ ಆಚರಿಸಿದರೆ ಮಂಗಳವಾರ ಅಮಾವಾಸ್ಯೆಯಂದು ಸೂರ್ಯಗ್ರಹಣ ಇದ್ದುದರಿಂದ ಕೆಲವರು ಲಕ್ಷಿ÷್ಮ ಪೂಜೆಯನ್ನು ಕೆಲವರು ಬುಧವಾರ ಆಚರಿಸಿದರು. ಬಲಿಪಾಡÀ್ಯಮಿ ಪ್ರಯುಕ್ತ ಗೋ ಪೂಜೆ, ತುಳಸಿ ಪೂಜೆ ಮಾಡಲಾಯಿತು. ಅಂಗಡಿ, ವಾಣಿಜ್ಯ ಮಳಿಗೆಗಳಲ್ಲಿ ಕುಟುಂಬದೊAದಿಗೆ ಲಕ್ಷಿ÷್ಮಪೂಜೆ ಮಾಡಿದ ವ್ಯಾಪಾರಿಗಳು ಸಿಹಿ ವಿತರಿಸಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

ಕೊರೊನಾ ನಿಮಿತ್ತ ಕಳೆದ ಎರಡು ವರ್ಷಗಳಿಂದ ಸಾಧಾರಣವಾಗಿ ಆಚರಿಸಲಾದ ದೀಪಾವಳಿ ಈ ಬಾರಿ ಅತ್ಯಂತ ಸಡಗರ ಸಂಭ್ರಮದಿAದ ಮನೆಗಳಲ್ಲಿ ತೈಲ ಅಭ್ಯಂಜನ ನಡೆಸಿ ದೀಪಾವಳಿಯನ್ನು ಆಚರಿಸಿದರು. ದೀಪಾವಳಿ ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು. ಅಂಗಡಿಗಳಲ್ಲಿ ಪಟಾಕಿಗಳ ಖರೀದಿ ಜೋರಾಗಿತ್ತು. ಮಕ್ಕಳು ಹಾಗೂ ಯುವಕರು ಪಟಾಕಿ ಹಚ್ಚುವ ಮೂಲಕ ಸಂಭ್ರಮದಿAದ ಹಬ್ಬವನ್ನು ಆಚರಿಸಿದರು.

ನಗರದ ಇತಿಹಾಸ ಪ್ರಸಿದ್ಧ ಗಣಪತಿ ದೇವಾಲಯ, ಆಂಜನೇಯ ದೇವಸ್ಥಾನ, ಮಾರಿಯಮ್ಮ ದೇವಸ್ಥಾನ, ಅಂಗಾಳ ಪರಮೇಶ್ವರಿ ದೇವಸ್ಥಾನ, ಬಸವನಗುಡಿ ದೇವಾಲಯ ಸೇರಿದಂತೆ, ಶನೀಶ್ವರ ದೇವಾಲಯದಲ್ಲಿ ದೀಪಾವಳಿ ಪೂಜೆ ನೆರವೇರಿಸಿ ಕಾರ್ತಿಕ ದೀಪೋತ್ಸವ ಆಚರಿಸಲಾಯಿತು.*ಗೋಣಿಕೊಪ್ಪ: ದೀಪಾವಳಿ ಮೂರನೇಯ ದಿನದಲ್ಲಿ ಗೋಣಿಕೊಪ್ಪ ಹಿಂದೂಪರ ಸಂಘಟನೆಗಳು ಗೋ ಪೂಜೆ ಮಾಡಿದರು. ದೇವಸ್ಥಾನದ ಉಮಾಮಹೇಶ್ವರಿ ಗರ್ಭಗುಡಿಯಿಂದ ಹೊತ್ತಿಸಿದ ದೀಪವನ್ನು ಎರಡನೇ ವಿಭಾಗದ ನಿವಾಸಿಗಳ ಮನೆಗಳಲ್ಲಿ ದೀಪ ಹಚ್ಚುವ ಮೂಲಕ ಬೆಳಕಿನ ಹಬ್ಬದ ಆಚರಣೆ ಮಾಡಿದರು.

ಇಲ್ಲಿನ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಉಮಾಮಹೇಶ್ವರಿ ಭಜನ ಮಂಡಳಿ ಸಂಚಾಲಕ ಹಿರಿಯ ವೈದ್ಯ ಚಂದ್ರಶೇಖರ್, ಯಶೋಧ ದಂಪತಿಗಳು ಗೋ ಪೂಜೆ ನೆರವೇರಿಸಿದರು.

ನಂತರ ಮಾತೃ ಮಂಡಳಿಯ ಮಹಿಳೆಯರು ದೀಪ ಹಿಡಿದು ದೇವಾಲಯದಿಂದ ಬಸ್ ನಿಲ್ದಾಣ ಮೂಲಕ ಮೆರವಣಿಗೆ ನಡೆಸಿ ಎರಡನೆ ವಿಭಾಗದಲ್ಲಿ ಸಭಾ ಕಾರ್ಯಕ್ರಮ ನಡೆಸಿದರು.

ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಹಿರಿಯ ಸನ್ಯಾಸಿ ಧರ್ಮನಾಥ ನಂದಾ ಮಹಾರಾಜ್ ಹಿತವಚನಗಳನ್ನಾಡಿದರು.

ರಾಷ್ಟಿçÃಯ ಸ್ವಯಂ ಸೇವಾ ಸಂಘಟನೆಯ ಜಿಲ್ಲಾ ಸಂಘ ಸರಸಂಚಾಲಕ ಚಕ್ಕೇರ ಮನು ಕಾವೇರಪ್ಪ, ಗೋಣಿಕೊಪ್ಪ ಶಕ್ತಿ ಕೇಂದ್ರದ ಪ್ರಮುಖ ಸುರೇಶ್ ರೈ, ರಾಜ್ಯ ಕೃಷಿ ಮೋರ್ಚ ಸದಸ್ಯ ಮಾಪಂಗಡ ಯಮುನಾ ಚಂಗಪ್ಪ, ಹಿರಿಯ ವೈದ್ಯರಾದ ಡಾ. ಶಿವಪ್ಪ, ಡಾ. ಚಂದ್ರಶೇಖರ್, ವಿವೇಕ್ ರಾಯ್ಕರ್, ಮಾತೃಮಂಡಳಿ ತಾಲೂಕು ಸಂಚಾಲಕಿ ಧನಲಕ್ಷಿö್ಮ, ಜಿ.ಕೆ ಗೀತಾ, ರತಿ ಅಚ್ಚಪ್ಪ, ಪುಷ್ಪ ಮನೋಜ್, ಜ್ಯೋತಿ ಹೆಚ್.ಕೆ, ಸೇರಿದಂತೆ ಮಾತೃ ಮಂಡಳಿಯ ಸದಸ್ಯರುಗಳು ವಿವಿಧ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಹಾಜರಿದ್ದರು.ಮುಳ್ಳೂರು: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯದಲ್ಲಿ ಪರಿಸರ ಸ್ನೇಹಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ದುಂಡಳ್ಳಿ ಗ್ರಾ.ಪಂ.ಯ ಡಿಜಿಟಲ್ ಗ್ರಂಥಾಲಯದ ಮೇಲ್ವಿಚಾರಕಿ ಎಸ್.ಪಿ.ದಿವ್ಯ ನೇತೃತ್ವದಲ್ಲಿ ಓದುಗರು, ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪರಿಸರ ಸ್ನೇಹಿ ದೀಪಾವಳಿಯನ್ನು ಬಣ್ಣಬಣ್ಣದ ಹೂವಿನ ರಂಗೋಲಿ ಬಿಡಿಸಿ ಅದರ ಸುತ್ತಾ ಹಣತೆ ಹಚ್ಚಿ ಆಚರಿಸಿದರು.ವೀರಾಜಪೇಟೆ: ಜಯ ಭಾರತ ರಕ್ಷಣಾ ವೇದಿಕೆ ಕೊಡಗು ಜಿಲ್ಲಾ ಘಟಕದ ವತಿಯಿಂದ ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸ್ನೇಹ ಭವನ ವೃದ್ಧಾಶ್ರಮದ ವಾಸಿಗಳಿಗೆ ದೀಪಾವಳಿ ಹಬ್ಬದ ಪ್ರಯುಕ್ತ ದಿನಬಳಕೆ ವಸ್ತುಗಳನ್ನು ನೀಡಲಾಯಿತು.

ಈ ಸಂದರ್ಭ ಮಾತನಾಡಿದ ಜಯ ಭಾರತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಬಬ್ಬೀರ ಮನು ಜೋಯಪ್ಪ ಅವರು ಪಠಾಕಿಗಳನ್ನು ಖರೀದಿಸಿ ಒಂದು ಕ್ಷಣಕ್ಕೆ ಮಾತ್ರ ಸೀಮಿತವಾಗುವಂತೆ ಸಾವಿರಾರು ರೂ.ಗಳನ್ನು ವ್ಯಯ ಮಾಡುವುದಕ್ಕಿಂತ ಸಮಾಜದಿಂದ ಧಿಕ್ಕರಿಸಲಾದ, ಕುಟುಂಬದಿAದ ಬೇರ್ಪಟ್ಟ ಸದಸ್ಯರಿಗೆ ದಿನಬಳಕೆಯ ವಸ್ತುಗಳನ್ನು ನೀಡಲಾಗಿದೆ ಎಂದರು.

ಜಯ ಭಾರತ ರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ಖಲೀಲ್, ಮನೋಹರ್, ಚಂದ್ರ ಶೇಖರ್ ಬಿಟ್ಟಂಗಾಲ ಮಹಿಳಾ ಘಟಕದ ಅಧ್ಯಕೆÀ್ಷ ಅನಿತಾ ಚಂದ್ರ ಶೇಖರ್, ನಿವೃತ್ತ ಸರ್ವೆಯರ್ ರಾಘು ಶೆಟ್ಟಿ, ಬಲ್ಲಡಿಚಂಡ ಬೋಪಣ್ಣ, ಚೇರಿಯಂಡ ದೀಪು, ಮತ್ತು ಸ್ನೇಹ ಭವನ ವೃದ್ಧಾಶ್ರಮದ ವ್ಯವಸ್ಥಾಪಕ ಜಾನ್ಸನ್ ಹಾಗೂ ವೃದ್ಧಾಶ್ರಮದ ವಾಸಿಗಳು ಹಾಜರಿದ್ದರು.

ಮುಳ್ಳೂರು: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿಯ ಡಿಜಿಟಲ್ ಗ್ರಂಥಾಲಯದಲ್ಲಿ ಪರಿಸರ ಸ್ನೇಹಿ ದೀಪಾವಳಿ ಹಬ್ಬವನ್ನು ಆಚರಿಸಲಾಯಿತು. ದುಂಡಳ್ಳಿ ಗ್ರಾ.ಪಂ.ಯ ಡಿಜಿಟಲ್ ಗ್ರಂಥಾಲಯದ ಮೇಲ್ವಿಚಾರಕಿ ಎಸ್.ಪಿ.ದಿವ್ಯ ನೇತೃತ್ವದಲ್ಲಿ ಓದುಗರು, ವಿದ್ಯಾರ್ಥಿಗಳ ಸಮ್ಮುಖದಲ್ಲಿ ಪರಿಸರ ಸ್ನೇಹಿ ದೀಪಾವಳಿಯನ್ನು ಬಣ್ಣಬಣ್ಣದ ಹೂವಿನ ರಂಗೋಲಿ ಬಿಡಿಸಿ ಅದರ ಸುತ್ತಾ ಹಣತೆ ಹಚ್ಚಿ ಆಚರಿಸಿದರು.ವೀರಾಜಪೇಟೆ: ಜಯ ಭಾರತ ರಕ್ಷಣಾ ವೇದಿಕೆ ಕೊಡಗು ಜಿಲ್ಲಾ ಘಟಕದ ವತಿಯಿಂದ ವೀರಾಜಪೇಟೆ ತಾಲೂಕಿನ ಆರ್ಜಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸ್ನೇಹ ಭವನ ವೃದ್ಧಾಶ್ರಮದ ವಾಸಿಗಳಿಗೆ ದೀಪಾವಳಿ ಹಬ್ಬದ ಪ್ರಯುಕ್ತ ದಿನಬಳಕೆ ವಸ್ತುಗಳನ್ನು ನೀಡಲಾಯಿತು.

ಈ ಸಂದರ್ಭ ಮಾತನಾಡಿದ ಜಯ ಭಾರತ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಬಬ್ಬೀರ ಮನು ಜೋಯಪ್ಪ ಅವರು ಪಠಾಕಿಗಳನ್ನು ಖರೀದಿಸಿ ಒಂದು ಕ್ಷಣಕ್ಕೆ ಮಾತ್ರ ಸೀಮಿತವಾಗುವಂತೆ ಸಾವಿರಾರು ರೂ.ಗಳನ್ನು ವ್ಯಯ ಮಾಡುವುದಕ್ಕಿಂತ ಸಮಾಜದಿಂದ ಧಿಕ್ಕರಿಸಲಾದ, ಕುಟುಂಬದಿAದ ಬೇರ್ಪಟ್ಟ ಸದಸ್ಯರಿಗೆ ದಿನಬಳಕೆಯ ವಸ್ತುಗಳನ್ನು ನೀಡಲಾಗಿದೆ ಎಂದರು.

ಜಯ ಭಾರತ ರಕ್ಷಣಾ ವೇದಿಕೆಯ ಪದಾಧಿಕಾರಿಗಳಾದ ಖಲೀಲ್, ಮನೋಹರ್, ಚಂದ್ರ ಶೇಖರ್ ಬಿಟ್ಟಂಗಾಲ ಮಹಿಳಾ ಘಟಕದ ಅಧ್ಯಕೆÀ್ಷ ಅನಿತಾ ಚಂದ್ರ ಶೇಖರ್, ನಿವೃತ್ತ ಸರ್ವೆಯರ್ ರಾಘು ಶೆಟ್ಟಿ, ಬಲ್ಲಡಿಚಂಡ ಬೋಪಣ್ಣ, ಚೇರಿಯಂಡ ದೀಪು, ಮತ್ತು ಸ್ನೇಹ ಭವನ ವೃದ್ಧಾಶ್ರಮದ ವ್ಯವಸ್ಥಾಪಕ ಜಾನ್ಸನ್ ಹಾಗೂ ವೃದ್ಧಾಶ್ರಮದ ವಾಸಿಗಳು ಹಾಜರಿದ್ದರು.