ಮಡಿಕೇರಿ, ಅ. ೨೭ : ವೀರಾಜಪೇಟೆ ಸಮೀಪದ ಬೇಟೋಳಿ ರಾಮನಗರದ ಪುದುಪಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಬಲಿಪಾಡ್ಯಮಿಯ ಪ್ರಯುಕ್ತ ವಿಶೇಷ ಗೋಪೂಜೆಯನ್ನು ನೆರವೇರಿಸಲಾಯಿತು. ಬಲಿಪಾಡ್ಯಮಿಯ ದಿನದಂದು ಮುಂಜಾನೆ ತುಳಸಿ ಪೂಜೆ ಹಾಗೂ ಅರ್ಚನೆ ಜರುಗಿತು. ತದನಂತರ ಅರ್ಚಕರು ಗೋಪೂಜೆಯನ್ನು ನೆರವೇರಿಸಿದರು. ಗೋವಿನ ಪಾದ ಪೂಜೆಯನ್ನು ಮಾಡಿ, ಅರಶಿನ ಕುಂಕುಮಗಳಿAದ ಅರ್ಚನೆ ಮಾಡಿ, ಆರತಿಯನ್ನು ಬೆಳಗಿ ಪೂಜಿಸಲಾಯಿತು. ಈ ಸಂದರ್ಭ ಅರ್ಚಕರು ವಿಶೇಷ ಪ್ರಾರ್ಥನೆಯನ್ನು ಮಾಡಿ ಮಹಾ ಮಂಗಳಾರತಿಯನ್ನು ನೆರವೇರಿಸಿದರು. ಗೋ ಪೂಜೆಯ ಬಳಿಕ ಗೋವಿಗೆ ಆಹಾರ ನೀಡಲಾಯಿತು. ಭಕ್ತರು ಗೋಮಾತೆಯಿಂದ ಆಶೀರ್ವಾದ ಪಡೆದರು. ಈ ಸಂದರ್ಭ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ದೇವಸ್ಥಾನದ ಪ್ರಧಾನ ಅರ್ಚಕರಾದ ವಿಶ್ವನಾಥ್ ಭಟ್ ಅವರು ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿದರು. ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಹಾಜರಿದ್ದರು.
ಕೂಡಿಗೆ : ಕೂಡಿಗೆಯ ಕೃಷಿ ಕೇಂದ್ರದ ಆವರಣದಲ್ಲಿರುವ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರದ ಹಸುಗಳ ಸಾಕಾಣಿಕೆ ಕೇಂದ್ರದಲ್ಲಿ ಗೋಪೂಜೆ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಕೇಂದ್ರದ ನಿರ್ದೇಶಕ ಡಾ. ಶಶಿಧರ್, ಕೋಳಿ ಕೇಂದ್ರದ ವೈದ್ಯಾಧಿಕಾರಿ ಡಾ. ನಾಗರಾಜ್, ಹಂದಿ ತಳಿ ಕೇಂದ್ರದ ಡಾ, ಶೈಲಜಾ, ಕೇಂದ್ರದ ಪಶುವೈದ್ಯ ಪರಿವೀಕ್ಷ ನಂದಕುಮಾರ್, ಕಚೆೆÃರಿ ಪ್ರಥಮ ದರ್ಜೆಯ ನೌಕರರಾದ ಭಾನುಮತಿ, ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಪೊನ್ನಂಪೇಟೆ : ಪೊನ್ನಂಪೇಟೆ ಪ್ರಖಂಡ ವಿಶ್ವಹಿಂದೂ ಪರಿಷತ್, ಭಜರಂಗದಳ, ಮಾತೃ ಶಕ್ತಿ, ದುರ್ಗಾವಾಹಿನಿಯ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಕಾಟ್ರಕೊಲ್ಲಿಯಲ್ಲಿ ಗೋಪೂಜೆ ನೆರವೇರಿಸಲಾಯಿತು. ಈ ವೇಳೆ ಪೊನ್ನಂಪೇಟೆ ಪ್ರಖಂಡ ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಪಂದ್ಯAಡ ಹರೀಶ್, ಕಾರ್ಯದರ್ಶಿ ಅಮ್ಮತ್ತೀರ ಸುರೇಶ್, ಭಜರಂಗದಳ ಪೊನ್ನಂಪೇಟೆ ಪ್ರಖಂಡ ಸಹ ಸಂಯೋಜಕ ಚೀರಂಡ ಚಂಗಪ್ಪ, ಮಾತೃಶಕ್ತಿಯ ದಿವ್ಯ, ದುರ್ಗಾವಾಹಿನಿಯ ಶರಣ್ಯ, ಭಜರಂಗದಳ ಕಿರುಗೂರು ಘಟಕದ ಭವನ್, ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸದಸ್ಯ
(ಮೊದಲ ಪುಟದಿಂದ) ಅಡ್ಡಂಡ ನಿಲನ್, ಭಾ.ಜ.ಪದ ವೀರಾಜಪೇಟೆ ತಾಲೂಕು ಕಾರ್ಯದರ್ಶಿ ಚೋಡುಮಾಡ ದಿನೇಶ್, ಚೀರಂಡ ಸುನಿಲ್, ಕಾಟ್ರಕೊಲ್ಲಿಯ ಸೆಂದಿಲ್ ಕುಟುಂಬಸ್ಥರು ಹಾಗೂ ಕಾಟ್ರಕೊಲ್ಲಿ ಗ್ರಾಮಸ್ಥರು ಹಾಜರಿದ್ದರು. ಪೊನ್ನಂಪೇಟೆ ಶ್ರೀ ಬಸವೇಶ್ವರ ದೇವಸ್ಥಾನದ ಅರ್ಚಕರು ಪೂಜೆ ನೆರವೇರಿಸಿದರು. ನಂತರ ನೆರೆದಿದ್ದವರರಿಗೆ ಸಿಹಿ ಹಂಚಲಾಯಿತು.ಮಡಿಕೇರಿ ಬ್ರಹ್ಮಕುಮಾರೀಸ್ ಶಾಖೆಯ ಲೈಟ್ ಹೌಸ್ ಸಭಾಂಗಣದಲ್ಲಿ ದೀಪಾವಳಿಯನ್ನು ಜಿಲ್ಲಾ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ಗಾಯಿತ್ರೀಜಿ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಕಾಂಗ್ರೆಸ್ ಯುವ ನಾಯಕ ಡಾ. ಮಂಥರ್ ಗೌಡ ಅವರು ಜ್ಯೋತಿ ಬೆಳಗಿಸಿ ಎಲ್ಲರಿಗೂ ಶುಭಾಶಯಗಳನ್ನು ನೀಡಿದರು. ಬ್ರಹ್ಮಕುಮಾರೀಸ್ನ ಐಚೆಟ್ಟೀರ ಬೋಜಿ ಬೋಪಣ್ಣ ಅವರಿಗೆ ಈ ಸಂದರ್ಭ ಸನ್ಮಾನಿಸಲಾಯಿತು. ಅವರ ಪುತ್ರಿ ಯಶೋಧ ಬೋಪಣ್ಣ ಅವರು ತಮ್ಮ ಅಧ್ಯಾತ್ಮದ ಆರಂಭದ ದಿನಗಳ ಅನುಭವವನ್ನು ಹಂಚಿಕೊAಡರು. ಮಡಿಕೇರಿ ಪದವಿ ಕಾಲೇಜಿನ ಉಪ ಪ್ರಾಂಶುಪಾಲ ಡಾ: ಪ್ರಕಾಶ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಬ್ರಹ್ಮಕುಮಾರಿ ಧನಲಕ್ಷಿö್ಮಯವರು ದೀಪಾವಳಿಯ ಅಧ್ಯಾತ್ಮಿಕ ರಹಸ್ಯವನ್ನು ತಿಳಿಸಿದರು. ಎಲ್ಲಾ ಸಹೋದರ ಸಹೋದರಿಯರಿಗೆ ದೀಪಾವಳಿಯ ಪ್ರಸಾದವನ್ನು ಹಂಚಲಾಯಿತು.ವಿಶೇಷಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ದೀಪಾವಳಿ ಹಬ್ಬದ ಅಂಗವಾಗಿ ಕೂಡಿಗೆಯ ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿರುವ ಪುರುಷ ಮತ್ತು ಮಹಿಳಾ ವೃದ್ಧರಿಗೆ ಬಟ್ಟೆಗಳನ್ನು ವಿತರಿಸಲಾಯಿತು.
ದೀಪಾವಳಿ ಹಬ್ಬದ ದಿನದ ಮಹತ್ವದ ಬಗ್ಗೆ ಕೂಡಿಗೆ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ ಮಾತನಾಡಿದರು. ಈ ಸಂದರ್ಭ ವೃದ್ಧಾಶ್ರಮದ ವ್ಯವಸ್ಥಾಪಕ ಚಂದ್ರು, ಪತ್ರಕರ್ತ ಗಣೇಶ್ ಹಾಜರಿದ್ದರು.
ಮಡಿಕೇರಿಯಲ್ಲಿ ಜಿಲ್ಲಾಧಿಕಾರಿ ಡಾ ಬಿ.ಸಿ.ಸತೀಶ ಅವರ ಮನೆಯಲ್ಲಿ ಪರಿಸರ ಸ್ನೇಹಿ ಹಸಿರು ದೀಪಾವಳಿ ಅಂಗವಾಗಿ ಮಕ್ಕಳು ಜತೆಗೂಡಿ ಹಣತೆ ಬೆಳಗಿಸಿ ದೀಪಾವಳಿ ಆಚರಿಸಿದರು. ಪರಿಸರ ಸ್ನೇಹಿ ಹಸಿರು ದೀಪಾವಳಿ ಆಚರಣೆ ಅಂಗವಾಗಿ ಮಕ್ಕಳಿಂದ ಹಸಿರು ದೀಪಾವಳಿ ಕುರಿತು ಜಾಗೃತಿ ಕೂಡ ಮೂಡಿಸಲಾಯಿತು.
ಸುಂಟಿಕೊಪ್ಪ ಉಲುಗುಲಿ ರಸ್ತೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೋಮವಾರಪೇಟೆ ವಿವಿದ್ದೋದ್ದೇಶ ಸಹಕಾರ ಸಂಘದ ಬ್ಯಾಂಕಿನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಲಕ್ಷಿö್ಮ ಪೂಜೆ ನಡೆಸಲಾಯಿತು. ಈ ಸಂದರ್ಭ ಬ್ಯಾಂಕಿನ ವ್ಯವಸ್ಥಾಪಕಿ ರೇಖಾ, ಸಿಬ್ಬಂದಿಗಳಾದ ಬಿ.ಕೆ.ವಿಶ್ವನಾಥ ರೈ, ರಮೇಶ್ ಪೂಜಾರಿ. ಸುಮ ಬಿ.ಎಸ್. ಹಾಜರಿದ್ದರು. ಸುಂಟಿಕೊಪ್ಪ ಚಾಮುಂಡೇಶ್ವರಿ ದೇವಸ್ಥಾನದ ಅರ್ಚಕ ಮಂಜುನಾಥ ಉಡುಪ ಪೂಜಾ ಕೈಂಕರ್ಯವನ್ನು ನೆರವೇರಿಸಿದರು. ನಂತರ ತೀರ್ಥ ಪ್ರಸಾದ ವಿತರಿಸಲಾಯಿತು.ನಾಪೋಕ್ಲು : ಮಡಿಕೇರಿಯ ತನಲ್ ವೃದ್ಧಾಶ್ರಮದಲ್ಲಿ ನಾಪೋಕ್ಲು ಶೌರ್ಯ ಘಟಕದ ಸಂಯೋಜಕಿ ದಿವ್ಯ ಬಾಳೆಯಡ ಅವರ ನೇತೃತ್ವದಲ್ಲಿ ಶೌರ್ಯ ಸದಸ್ಯರು ದೀಪಾವಳಿಯನ್ನು ಆಚರಿಸಿದರು. ಈ ಸಂದರ್ಭ ವೃದ್ಧಾಶ್ರಮದಲ್ಲಿ ವಿವಿಧ ಸ್ವಚ್ಛತಾ ಕಾರ್ಯಗಳನ್ನು ಮಾಡಿ ವಿವಿಧ ಖಾದ್ಯಗಳನ್ನು ತಯಾರಿಸಿ ಹಿರಿಯರಿಗೆ ಉಣಬಡಿಸಲಾಯಿತು.
ಈ ಸಂದರ್ಭ ಶೌರ್ಯ ಸದಸ್ಯರಾದ ಉಮಾಲಕ್ಷಿö್ಮ, ಆಶಾ, ಚಂದ್ರಕಲಾ, ಗೀತಾ, ಸ್ವಪ್ನ, ಅಜಿತಾ, ಸತ್ಯಬಾಮ, ಸರಸ್ವತಿ, ಸೀನ ಮಾಧವನ್, ಶಂಕರ್, ದಿಲೀಶ್, ಅಜಿತ್, ಸೋಮಣ್ಣ, ಯೋಗೀಶ್, ಪ್ರವೀಣ್ ಹಾಜರಿದ್ದರು.