ಸುAಟಿಕೊಪ್ಪ, ಅ. ೨೭: ಕಾಫಿ ತೋಟದ ಗೋದಾಮಿನಲ್ಲಿ ಶೇಖರಿಸಿಟ್ಟಿದ್ದ ರೂ. ೪ ಲಕ್ಷ ಮೌಲ್ಯದ ಕರಿಮೆಣಸನ್ನು ಕಳವು ಮಾಡಿದ ಆರೋಪಿಗಳನ್ನು ಸುಂಟಿಕೊಪ್ಪ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ಯಿಂದ ಬಂಧಿಸಿದ ಘಟನೆ ನಡೆದಿದೆ.
ಅತ್ತೂರು ನಲ್ಲೂರು ಗ್ರಾಮದ ಮಹಾಲಕ್ಷಿö್ಮ ಎಸ್ಟೇಟ್ನ ತೋಟದ ಮನೆಯಿಂದ ತಾ. ೧೭ ರಿಂದ ೧೯ರ ನಡುವೆ ೧೬ ಪ್ಲಾಸ್ಟಿಕ್ ಚೀಲಗಳಲ್ಲಿ ತುಂಬಿಸಿಟ್ಟಿದ್ದ ರೂ. ೪ ಲಕ್ಷ ಮೌಲ್ಯದ ೮೦೦ ಕೆ.ಜಿ. ಕರಿಮೆಣಸನ್ನು ಯಾರೋ ಕಳ್ಳರು ಮನೆಯ ಹೆಂಚು ತೆಗೆದು ಒಳ ಪ್ರವೇಶಿಸಿ ಕಳವು ಮಾಡಿರುವುದಾಗಿ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ಅವರ ನಿರ್ದೇಶನದಂತೆ ಸೋಮವಾರಪೇಟೆ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಆರ್.ವಿ. ಗಂಗಾಧರಪ್ಪ ಅವರ
(ಮೊದಲ ಪುಟದಿಂದ) ಉಸ್ತುವಾರಿಯಲ್ಲಿ, ಕುಶಾಲನಗರ ವೃತ್ತ ನಿರೀಕ್ಷಕ ಬಿ.ಜಿ.ಮಹೇಶ್ ಅವರ ನೇತೃತ್ವದ ಅಪರಾಧ ಪತ್ತೆ ತಂಡವು ಪ್ರಕರಣವನ್ನು ಬೇಧಿಸಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೂತನಹಳ್ಳಿ ನಿವಾಸಿ ಮೂರ್ತಿ, ಪಿರಿಯಾಪಟ್ಟಣ ತಾಲೂಕಿನ ತರಿಕಲ್ಲು ಗ್ರಾಮದ ಕುಮಾರ, ಹರೀಶ, ಸಿದ್ದಾಪುರ ಬಳಿಯ ಬಾಡಗ ಬಾಣಂಗಾಲ ಗ್ರಾಮದ ಚಂದ್ರಶೇಖರ್ ಮತ್ತು ಪೊನ್ನಂಪೇಟೆ ತಾಲೂಕಿನ ತೂಚಮಕೇರಿ ನಿವಾಸಿ ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುತ್ತಿರುವ ಎಂ.ಸಿ. ಕಾಳಪ್ಪ ಎಂಬ ಐವರನ್ನು ಬಂಧಿಸಿ ಅವರಿಂದ ಕಳವು ಮಾಡಿದ ೮೦೦ ಕೆ.ಜಿ. ಕರಿಮೆಣಸು, ನಗದು ಹಣ ರೂ. ೧.೬೭ ಲಕ್ಷ ಹಾಗೂ ಕಳವಿಗೆ ಉಪಯೋಗಿಸಿದ ಒಂದು ಮಹೀಂದ್ರಾ ಜೀಪನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸುಂಟಿಕೊಪ್ಪ ಠಾಣಾಧಿಕಾರಿ ಹೆಚ್.ಡಿ. ಮಂಜು, ನಗರ ಠಾಣಾಧಿಕಾರಿ ಸ್ವಾಮಿ ಹೆಚ್.ಸಿ., ಕುಶಾಲನಗರ ಗ್ರಾಮಾಂತರ ಠಾಣೆಯ ಠಾಣಾಧಿಕಾರಿ ಹೆಚ್.ವಿ. ಚಂದ್ರಶೇಖರ್, ಪ್ರೊ. ಪಿಎಸ್ಐ ನವೀನ್, ಎಎಸ್ಐ ಗೋಪಾಲ್ ಎಂ.ಎ., ಸಿಬ್ಬಂದಿಗಳಾದ ಸತೀಶ್, ದಯಾನಂದ, ಸಜಿ, ಲೋಕೇಶ್, ಚಂಗಪ್ಪ, ಪ್ರಕಾಶ್, ಪ್ರವೀಣ್, ಸಂದೇಶ್, ರಂಜಿತ್, ಚಾಲಕರಾದ ಅರುಣ್, ಜಯಶಂಕರ್ ಹಾಗೂ ಸಿಡಿಆರ್ ವಿಭಾಗದ ರಾಜೇಶ್, ಗಿರೀಶ್ ಮತ್ತು ಪ್ರವೀಣ್ ಪಾಲ್ಗೊಂಡಿದ್ದರು.