ಮಹಿಳಾ ಕ್ರಿಕೆಟಿಗರಿಗೆ ಸಮಾನ ಸಂಬಳ ಘೋಷಣೆ
ನವದೆಹಲಿ, ಅ. ೨೭: ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರರಿಗೆ ಪುರುಷರ ತಂಡದ ಸದಸ್ಯರಷ್ಟೇ ಸಮಾನವಾಗಿ ಸಂಬಳ ನೀಡುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿ.ಸಿ.ಸಿ.ಐ) ಘೋಷಿಸಿದೆ. ಮಂಡಳಿಯ ೧೫ನೇ ಅಪೆಕ್ಸ್ ಕೌನ್ಸಿಲ್ ಸಭೆಯು ತಾ. ೨೭ ರಂದು ವೀಡಿಯೋ ಕಾನ್ಫರೆನ್ಸ್ ಮೂಲಕ ಜರುಗಿದ್ದು, ಸದಸ್ಯರು ಸರ್ವಾನುಮತದಿಂದ ಈ ನಿರ್ಣಯ ಕೈಗೊಂಡರು. ಈ ಬಗ್ಗೆ ಮಾತನಾಡಿದ ಬಿ.ಸಿ.ಸಿ.ಐ.ನ ನೂತನ ಅಧ್ಯಕ್ಷ ರೋಜರ್ ಬಿನ್ನಿ ಅವರು, ಅಂತರರಾಷ್ಟಿçÃಯ ಕ್ರಿಕೆಟ್ನಲ್ಲಿ ಪ್ರತಿ ಪಂದ್ಯಕ್ಕೆ ನೀಡಲಾಗುವ ಸಂಬಳವನ್ನು ಮಹಿಳಾ ಹಾಗೂ ಪುರುಷ ಆಟಗಾರರಿಗೆ ಸಮಾನ ರೀತಿಯಲ್ಲಿ ನೀಡಲು ನಿರ್ಧರಿಸಲಾಗಿದೆ. ಮಹಿಳಾ ಕ್ರಿಕೆಟ್ನ ಬೆಳವಣಿಗೆಗೆ ಇದು ಮಹತ್ವದ ಹೆಜ್ಜೆ ಆಗಿದೆ ಎಂದರು. ಬಿ.ಸಿ.ಸಿ.ಐ. ಕಾರ್ಯದರ್ಶಿ ಜೈ ಶಾ ಅವರು ಮಾತನಾಡಿ ಟೆಸ್ಟ್ ಕ್ರಿಕೆಟ್ಗೆ ಪ್ರತಿ ಪಂದ್ಯಕ್ಕೆ ರೂ. ೧೫ ಲಕ್ಷ, ಏಕದಿನ ಪಂದ್ಯಕ್ಕೆ ರೂ. ೬ ಲಕ್ಷ ಹಾಗೂ ಟಿ-೨೦ ಪಂದ್ಯಕ್ಕೆ ರೂ. ೩ ಲಕ್ಷದಂತೆ ನೀಡುವ ಸಂಬಳವನ್ನು ಸಮಾನವಾಗಿ ಪುರುಷ ಹಾಗೂ ಮಹಿಳಾ ಆಟಗಾರರಿಗೆ ನೀಡುವುದಾಗಿ ಹೇಳಿದರು.
ಲಡಾಖ್ ಏರ್ಫೀಲ್ಡ್ ಮೇಲ್ದರ್ಜೆಗೇರಿಸಲು ಭಾರತ ಮುಂದು
ನವದೆಹಲಿ, ಅ. ೨೭: ಚೀನಾ ತನ್ನ ಭಾಗದಲ್ಲಿ ಹೊಸ ಮಿಲಿಟರಿ ಮೂಲಸೌಕರ್ಯವನ್ನು ನಿರ್ಮಿಸುತ್ತಿದೆ ಎಂಬ ವರದಿಗಳ ನಡುವೆ, ಭಾರತ ಪೂರ್ವ ಲಡಾಖ್ನ ಎಲ್ಎಸಿಯಿಂದ ೫೦ ಕಿಲೋಮೀಟರ್ಗಿಂತ ಕಡಿಮೆ ದೂರದಲ್ಲಿ ಯುದ್ಧ ವಿಮಾನ ಕಾರ್ಯಾಚರಣೆಗಾಗಿ ತನ್ನ ನ್ಯೋಮಾ ಸುಧಾರಿತ ಲ್ಯಾಂಡಿAಗ್ ಗ್ರೌಂಡ್ ಅನ್ನು ನವೀಕರಿಸುವ ಕಾರ್ಯವನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ ಎಂದು ಭಾರತೀಯ ಸೇನಾ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಚೀನಾದೊಂದಿಗೆ ಗಡಿ ಸಂಘರ್ಷದ ಸಮಯದಲ್ಲಿ ನ್ಯೋಮಾ ಏರ್ಫೀಲ್ಡ್ ಅನ್ನು ಸಿಬ್ಬಂದಿ ಮತ್ತು ಸಾಮಗ್ರಿಗಳ ಸಾಗಣೆಗೆ ಬಳಸಲಾಗಿದೆ. ಅಲ್ಲದೆ ಚಿನೂಕ್ ಹೆವಿ-ಲಿಫ್ಟ್ ಚಾಪರ್ಗಳು ಮತ್ತು ಅ-೧೩೦ಎ ವಿಶೇಷ ಕಾರ್ಯಾಚರಣೆಯನ್ನು ನಡೆಸಲಾಗಿದೆ. "ಅಗತ್ಯವಿರುವ ಹೆಚ್ಚಿನ ಅನುಮತಿಗಳು ಮತ್ತು ಅನುಮೋದನೆಗಳು ಈಗಾಗಲೇ ಬಂದಿರುವುದರಿAದ ಎಎಲ್ ಜಿಯನ್ನು ಯುದ್ಧ ವಿಮಾನ ಕಾರ್ಯಾಚರಣೆಗಳಿಗಾಗಿ ಶೀಘ್ರದಲ್ಲೇ ನವೀಕರಿಸಲಾಗುವುದು. ಯೋಜನೆಗಳ ಪ್ರಕಾರ, ಹೊಸ ಏರ್ಫೀಲ್ಡ್ ಮತ್ತು ಮಿಲಿಟರಿ ಮೂಲಸೌಕರ್ಯಗಳ ನಿರ್ಮಾಣವನ್ನು ಗಡಿ ರಸ್ತೆಗಳ ಸಂಸ್ಥೆ ಮಾಡಲಿದೆ" ಎಂದು ಹಿರಿಯರು, ರಕ್ಷಣಾ ಅಧಿಕಾರಿಗಳು ಎಎನ್ಐಗೆ ತಿಳಿಸಿದ್ದಾರೆ.
ದ್ವೇಷ ಭಾಷಣ: ಆಜಂ ಖಾನ್ಗೆ ೩ ವರ್ಷ ಜೈಲು ಶಿಕ್ಷೆ
ಲಖನೌ, ಚಿ. ೨೭: ಸಮಾಜವಾದಿ ಪಕ್ಷದ ಹಿರಿಯ ನಾಯಕ ಅಜಂ ಖಾನ್ಗೆ ರಾಂಪುರ ಕೋರ್ಟ್ ದೊಡ್ಡ ಶಾಕ್ ನೀಡಿದ್ದು ಉದ್ರೇಕಕಾರಿ ಭಾಷಣ ಪ್ರಕರಣದಲ್ಲಿ ಎಸ್ಪಿ ನಾಯಕನನ್ನು ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದೆ. ಇದೇ ವೇಳೆ ಅವರಿಗೆ ಮೂರು ವರ್ಷಗಳ ಶಿಕ್ಷೆ ವಿಧಿಸಿದೆ. ಅಜಂ ಖಾನ್ಗೆ ಮೂರು ವರ್ಷ ಜೈಲು ಶಿಕ್ಷೆ ಜೊತೆಗೆ ೨೫ ಸಾವಿರ ರೂಪಾಯಿ ದಂಡವನ್ನು ಕೋರ್ಟ್ ವಿಧಿಸಿದೆ. ೨೦೧೯ ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅಜಂ ಖಾನ್ ನಿಂದನೀಯ ಪದಗಳನ್ನು ಬಳಸಿದ್ದರು. ಈ ಪ್ರಕರಣದಲ್ಲಿ ನ್ಯಾಯಾಲಯ ಆತನನ್ನು ದೋಷಿ ಎಂದು ಘೋಷಿಸಿ ಶಿಕ್ಷೆಯನ್ನೂ ನಿಗದಿಪಡಿಸಿದೆ. ಯೋಗಿ ಆದಿತ್ಯನಾಥ್ ಮತ್ತು ಅಂದಿನ ಜಿಲ್ಲಾ ಮ್ಯಾಜಿಸ್ಟೆçÃಟ್ ಆಂಜನೇಯ ಕುಮಾರ್ ಸಿಂಗ್ ವಿರುದ್ಧ ಆಜಂ ಖಾನ್ ಅವರು ಪ್ರಚೋದನಕಾರಿ ಭಾಷಣ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಅಜಂ ಖಾನ್ ವಿರುದ್ಧ ಪ್ರಕರಣ ದಾಖಲಾಗಿರುವ ಸೆಕ್ಷನ್ಗಳಲ್ಲಿ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅವಕಾಶವಿತ್ತು. ಸಮಾಜವಾದಿ ನಾಯಕನ ಮೇಲೆ ಭ್ರಷ್ಟಾಚಾರ ಮತ್ತು ಕಳ್ಳತನ ಸೇರಿದಂತೆ ಸುಮಾರು ೯೦ ಪ್ರಕರಣಗಳಿವೆ. ಈ ವರ್ಷದ ಆರಂಭದಲ್ಲಿ, ವಂಚನೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಭೂಕಬಳಿಕೆ ಪ್ರಕರಣದಲ್ಲಿ ಸುಮಾರು ಎರಡು ವರ್ಷಗಳ ಕಾಲ ಜೈಲಿನಲ್ಲಿದ್ದರು.
ಭಯೋತ್ಪಾದಕರ ಖಾತೆಗಳ ವರದಿ ನೀಡಲು ಬ್ಯಾಂಕ್ಗಳಿಗೆ ಸೂಚನೆ
ಮುಂಬೈ, ಅ. ೨೭: ಕೇಂದ್ರ ಗೃಹ ಸಚಿವಾಲಯ ಭಯೋತ್ಪಾದಕರೆಂದು ಘೋಷಿಸಿರುವ ೧೦ ಮಂದಿಯ ಬ್ಯಾಂಕ್ ಖಾತೆಗಳ ವಿವರಗಳನ್ನು ಸರ್ಕಾರಕ್ಕೆ ನೀಡುವಂತೆ ಎಲ್ಲಾ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಗೆ ರಿಸರ್ವ್ ಬ್ಯಾಂಕ್ ಸೂಚನೆ ನೀಡಿದೆ. ಅ. ೪ ರಂದು ಗೃಹ ಸಚಿವಾಲಯ ಹಿಜ್ಬುಲ್ ಮುಜಾಹಿದ್ದೀನ್ (ಹೆಚ್ಎಂ), ಲಷ್ಕರ್-ಎ-ತೈಯ್ಬಾ (ಎಲ್ಇಟಿ) ಹಾಗೂ ಇತರ ಭಯೋತ್ಪಾದಕ ಸಂಘಟನೆಗಳಿಗೆ ಸೇರಿದ ೧೦ ಮಂದಿಯನ್ನು ಯುಎಪಿಎ ಕಾಯ್ದೆಯಡಿ ಭಯೋತ್ಪಾದಕರೆಂದು ಘೋಷಿಸಿತ್ತು. ಹಿಬುಬುಲ್ಲಾ ಮಲೀಕ್ ಅಲಿಯಾಸ್ ಸಾಜಿದ್ ಜುಟ್ (ಪಾಕಿಸ್ತಾನಿ ಪ್ರಜೆ) ಬಸಿತ್ ಅಹ್ಮದ್ ರೇಷಿ (ಜಮ್ಮು-ಕಾಶ್ಮೀರದ ಬಾರಾಮುಲ್ಲಾ ನಿವಾಸಿ, ಆದರೆ ಪಾಕ್ನಲ್ಲಿ ವಾಸ) ಜಮ್ಮು-ಕಾಶ್ಮೀರದ ಇಮ್ತಿಯಾಜ್ ಅಹ್ಮದ್ ಕಂಡೂ ಅಲಿಯಾಸ್ ಸಜಾದ್, ಜಾಫರ್ ಇಕ್ಬಾಲ್ ಅಲಿಯಾಸ್ ಸಲೀಂ, ಶೇಖ್ ಜಮೀಲ್-ಉರ್-ರೆಹಮಾನ್ ಅಲಿಯಾಸ್ ಶೇಖ್ ಸಾಹಬ್ ಎಂಬುವವರನ್ನು ಭಯೋತ್ಪಾದಕರೆಂದು ಘೋಷಿಸಲಾಗಿದೆ. ಹಬೀಬುಲ್ಲಾ ಮಲೀಕ್ ಎಂಬಾತ ಭಯೋತ್ಪಾದಕರಲ್ಲಿ ಪ್ರಮುಖನಾಗಿದ್ದು, ಪೂಂಛ್ನಲ್ಲಿ ಭಾರತೀಯ ಯೋಧರ ಮೇಲೆ ದಾಳಿ ನಡೆಸಿದವನಾಗಿದ್ದಾನೆ. ಕೆವೈಸಿಯ ಆಧಾರದಲ್ಲಿ ಆರ್ಬಿಐನ ಮಾಸ್ಟರ್ ನಿರ್ದೇಶನದ ಪ್ರಕಾರ, ಈ ವ್ಯಕ್ತಿಗಳನ್ನು ಹೋಲುವ ಯಾವುದೇ ವ್ಯಕ್ತಿಗಳ ಬ್ಯಾಂಕ್ ಖಾತೆ ವಿವರಗಳನ್ನು ಗೃಹ ಸಚಿವಾಲಯದೊಂದಿಗೆ ಹಂಚಿಕೊಳ್ಳಬೇಕೆAಬ ನಿರ್ದೇಶನ ನೀಡಲಾಗಿದೆ.
ಭಾರತದೊಂದಿಗೆ ಜಮ್ಮು-ಕಾಶ್ಮೀರ ವಿಲೀನ ಷರತ್ತುಗಳನ್ನು ಮರುಸ್ಥಾಪಿಸಲು ಕೋರಿಕೆ
ಶ್ರೀನಗರ, ಅ. ೨೭: ಭಾರತದೊಂದಿಗೆ ಜಮ್ಮು-ಕಾಶ್ಮೀರ ವಿಲೀನವಾಗಲು ಮಹಾರಾಜ ಹರಿ ಸಿಂಗ್ ಸಹಿ ಹಾಕುವಾಗ ವಿಧಿಸಲಾಗಿದ್ದ ಷರತ್ತುಗಳನ್ನು ಮರು ಸ್ಥಾಪಿಸದೇ ಇದ್ದಲ್ಲಿ ಜಮ್ಮು-ಕಾಶ್ಮೀರದಲ್ಲಿ ಭಾರತದ ಇರುವಿಕೆ ಅಕ್ರಮವಾಗಲಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹ್ಬೂಬಾ ಮುಫ್ತಿ ಹೇಳಿದ್ದಾರೆ. ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ ೨೦೧೯ ರ ಆಗಸ್ಟ್ ೫ ರ ನಿರ್ಧಾರ ಕಾನೂನು ಬಾಹಿರ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ. ಜಮ್ಮು-ಕಾಶ್ಮೀರ ಭಾರತದ ಭಾಗವಾಗಲು ಒಪ್ಪಿಗೆ ನೀಡಿದಾಗ ವಿಧಿಸಲಾಗಿದ್ದ ಷರತ್ತುಗಳನ್ನು ಮರುಸ್ಥಾಪಿಸಬೇಕು ಅಥವಾ ಜಮ್ಮು-ಕಾಶ್ಮೀರದಲ್ಲಿ ಭಾರತದ ಇರುವಿಕೆ ಅಕ್ರಮವಾಗಲಿದೆ. ೧೯೪೭ ರಲ್ಲಿ ಸೇರ್ಪಡೆಯ ಸಂದರ್ಭದ ಖಾತ್ರಿಗಳನ್ನು ನಮ್ಮಿಂದ ಕಸಿದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅದನ್ನು ಯಾರಾದರೂ ಅನ್ಯಾಯವಾಗಿ ಕಸಿದುಕೊಂಡಿದ್ದೇ ಆದಲ್ಲಿ ಬಿಜೆಪಿ ಮತ್ತೊಮ್ಮೆ ಹೊಸದಾಗಿ ಜಮ್ಮು-ಕಾಶ್ಮೀರವನ್ನು ಭಾರತದೊಂದಿಗೆ ಸೇರ್ಪಡೆಗೊಳಿಸಿಕೊಳ್ಳಬೇಕಾಗುತ್ತದೆ. ಆಗ ಷರತ್ತುಗಳು ಇರಲಿವೆ ಎಂಬುದು ಗೊತ್ತಿಲ್ಲ ಎಂದು ಮೆಹಬೂಬಾ ಮುಫ್ತಿ ಪಕ್ಷದ ಕಚೇರಿಯಲ್ಲಿ ಹೇಳಿದ್ದಾರೆ. ಭಾರತದೊಂದಿಗೆ ನಮ್ಮ ಸಂಬAಧ ಸೇರ್ಪಡೆಯ ಸಾಧನದ ಆಧಾರದಲ್ಲಿತ್ತು ಆದರೆ ಅದನ್ನು ಈಗ ನೀವು ಗನ್, ಸೇನೆ, ಪಿಎಸ್ಎ, ಯುಎಪಿಎ, ಇಡಿ ಆಧಾರದಲ್ಲಿರಿಸಿಕೊಂಡಿದ್ದೀರ, ಇದನ್ನೇ ಎಷ್ಟು ಮುಂದುವರೆಸಲು ಸಾಧ್ಯ ಎಂದು ಮುಫ್ತಿ ಪ್ರಶ್ನಿಸಿದ್ದಾರೆ.
ಭಾರತ-ಪಾಕಿಸ್ತಾನ ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಸಲಹೆ
ಬೀಜಿಂಗ್, ಅ. ೨೭: ಭಾರತ ಮತ್ತು ಪಾಕಿಸ್ತಾನ ಪರಸ್ಪರ ಮಾತುಕತೆ, ಸಮಾಲೋಚನೆ ಮೂಲಕ ಕಾಶ್ಮೀರ ವಿವಾದವನ್ನು ಬಗೆಹರಿಸಿಕೊಳ್ಳಬೇಕು ಮತ್ತು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಬಹುದಾದ ಏಕಪಕ್ಷೀಯ ಕ್ರಮ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು ಎಂದು ಚೀನಾ ಗುರುವಾರ ಹೇಳಿದೆ. ಸುದ್ದಿಗೋಷ್ಠಿಯಲ್ಲಿ ಪಾಕಿಸ್ತಾನದ ಪತ್ರಕರ್ತರೊಬ್ಬರು ಕೇಳಿದ ಕಾಶ್ಮೀರ ವಿಷಯ ಕುರಿತ ಪ್ರಶ್ನೆಗೆ ಉತ್ತರಿಸಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್, ಕಾಶ್ಮೀರದ ವಿಷಯದಲ್ಲಿ ಚೀನಾದ ನಿಲುವು ಸ್ಥಿರ ಮತ್ತು ಸ್ಪಷ್ಟವಾಗಿದೆ ಎಂದು ಹೇಳಿದರು. ಇದು ಭಾರತ ಮತ್ತು ಪಾಕಿಸ್ತಾನದ ನಡುವಿನ ದೀರ್ಘಕಾಲೀನ ಸಮಸ್ಯೆಯಾಗಿದೆ ಮತ್ತು ಯುಎನ್ ಚಾರ್ಟರ್, ಭದ್ರತಾ ಮಂಡಳಿಯ ಸಂಬAಧಿತ ನಿರ್ಣಯಗಳು ಮತ್ತು ದ್ವಿಪಕ್ಷೀಯ ಒಪ್ಪಂದಗಳಿಗೆ ಅನುಗುಣವಾಗಿ ಶಾಂತಿಯುತ ರೀತಿಯಲ್ಲಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರು. ಭಾರತ ಮತ್ತು ಪಾಕಿಸ್ತಾನ ಏಕಪಕ್ಷೀಯ ಕ್ರಮ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು, ವಿವಾದವನ್ನು ಪರಿಹರಿಸಿಕೊಳ್ಳಲು ಮತ್ತು ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮಾತುಕತೆ ಮತ್ತು ಸಮಾಲೋಚನೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಹೇಳಿದರು.