(ವಿಶೇಷ ವರದಿ : ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು.ಅ.೨೫: ತಾ. ೨೭ರಿಂದ ನವೆಂಬರ್ ೬ರವರೆಗೆ ೧೦ ದಿನಗಳ ಕಾಲ ಪೊನ್ನಂಪೇಟೆಯ ಟರ್ಫ್ ಮೈದಾನದಲ್ಲಿ ಇದೇ ಮೊದಲ ಬಾರಿಗೆ ೫ಂ ಸೈಡ್ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟವು ನಡೆಯಲಿದೆ. ದ.ಕೊಡಗಿನ ಹಾಕಿ ಪ್ರಿಯರಿಗೆ ಪೊನ್ನಂಪೇಟೆಯ ಮೈದಾನದಲ್ಲಿ ಹಾಕಿ ಆಟವನ್ನು ವೀಕ್ಷಿಸುವ ಅವಕಾಶ ದೊರೆಯಲಿದೆ. ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯ ಜನಕ ಪಾಂಡAಡ ಕುಟ್ಟಪ್ಪ ಸ್ಮರಣಾರ್ಥದಲ್ಲಿ ನಡೆಯಲಿರುವ ಈ ಪಂದ್ಯಾಟವನ್ನು ಕೊಡವ ಹಾಕಿ ಅಕಾಡೆಮಿ ಆಯೋಜಿಸಿದೆ. ಈಗಾಗಲೇ ೧೧೩ ತಂಡಗಳು ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಹೆಸರು ನೋಂದಾವಣಿ ಮಾಡಿಕೊಂಡಿವೆ.
ಪೊನ್ನಂಪೇಟೆಯ ಟರ್ಫ್ ಮೈದಾನದಲ್ಲಿ ೫ಂ ಸೈಡ್ ಮಾದರಿಯಲ್ಲಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಮೊದಲ ಬಾರಿಗೆ ಆಯೋಜನೆಗೊಂಡಿದ್ದು, ವಿಜೇತರಿಗೆ ೧ ಲಕ್ಷ ನಗದು ಬಹುಮಾನ ಸೇರಿದಂತೆ ಪಾರಿತೋಷಕ ಲಭಿಸಲಿದೆ. ಅಲ್ಲದೆ ವಿವಿಧ ತಂಡಗಳಿಗೂ ಉತ್ತಮ ಬಹುಮಾನ ನೀಡಲು ಕೊಡವ ಹಾಕಿ ಅಕಾಡೆಮಿ ನಿರ್ಧಾರ ಕೈಗೊಂಡಿದೆ. ಕಳೆದ ೫ ವರ್ಷಗಳಿಂದ ಕೊರೊನಾ ಸೇರಿದಂತೆ ಇನ್ನಿತರ ಕಾರಣಗಳಿಂದ ಸ್ಥಗಿತಗೊಂಡಿದ್ದ ಕೌಟುಂಬಿಕ ಹಾಕಿ ಪಂದ್ಯಾಟ ಈ ಬಾರಿ ಮತ್ತಷ್ಟು ಸಂಭ್ರಮದಿAದ ನಡೆಯಲಿದೆ.
ಸಾವಿರಾರು ಸಂಖ್ಯೆಯಲ್ಲಿ ಹಾಕಿ ಕ್ರೀಡಾಭಿಮಾನಿಗಳು
(ಮೊದಲ ಪುಟದಿಂದ) ಮೈದಾನಕ್ಕೆ ಆಗಮಿಸುವ ನಿರೀಕ್ಷೆಯಿದ್ದು ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷ ಪಾಂಡAಡ ಬೋಪಣ್ಣ ಮುಂದಾಳತ್ವದಲ್ಲಿ ಯಶಸ್ವಿ ಪಂದ್ಯಾವಳಿಯನ್ನು ನಡೆಸಲು ಆಯೋಜಕರು ವಿವಿಧ ಕಾರ್ಯಗಳಲ್ಲಿ ತಮ್ಮನ್ನು ಬಿಡುವಿಲ್ಲದಂತೆ ತೊಡಗಿಸಿ ಕೊಂಡಿದ್ದಾರೆ. ದ.ಕೊಡಗಿನ ಪ್ರಮುಖ ನಗರ ಪೊನ್ನಂಪೇಟೆ ಮೈದಾನದಲ್ಲಿ ಹಾಕಿ ಪಂದ್ಯಾವಳಿ ಆಯೋಜನೆ ಗೊಂಡಿರುವುದರಿAದ ಸಹಜವಾಗಿಯೇ ಹೆಚ್ಚಿನ ಸಂಖ್ಯೆಯಲ್ಲಿ ಹಾಕಿ ಕ್ರೀಡಾಭಿಮಾನಿಗಳು ಮೈದಾನಕ್ಕೆ ಹಾಕಿ ವೀಕ್ಷಣೆಗೆ ಆಗಮಿಸುವ ನಿರೀಕ್ಷೆ ಹೊಂದಲಾಗಿದೆ.
ಹಾಕಿ ಪಂದ್ಯಾವಳಿಯ ಯಶಸ್ವಿಗೆ ಹಾಕಿ ಕೂರ್ಗ್ ಹಾಗೂ ಅಂಪೈರ್ ಹಲವು ಕಾರಣಗಳಿಂದ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟ ನಡೆಯಲಿಲ್ಲ. ಹಾಕಿ ಕ್ರೀಡೆಗೆ ಉತ್ತೇಜನ ನೀಡುವ ಸಲುವಾಗಿ ಇದೀಗ ೫ ವರ್ಷಗಳ ನಂತರ ಕೌಟುಂಬಿಕ ಹಾಕಿ ಪಂದ್ಯಾವಳಿಗೆ ಕೊಡವ ಹಾಕಿ ಅಕಾಡೆಮಿಯ ಮೂಲಕ ಚಾಲನೆ ನೀಡಲಾಗುತ್ತಿದೆ. ಇದರಿಂದ ಹಾಕಿ ಪ್ರಿಯರಿಗೆ ಹೊಸ ಉತ್ಸಾಹ ಮೂಡಲು ಸಹಾಯಕವಾಗಲಿದೆ. ಅಲ್ಲದೆ ಪ್ರತಿಭಾವಂತ ಹಾಕಿ ಪಟುಗಳು ತಮ್ಮ ಪ್ರದರ್ಶನವನ್ನು ಮೈದಾನದಲ್ಲಿ ಪ್ರದರ್ಶಿಸಲು ಅವಕಾಶ ಲಭಿಸಲಿದೆ. ಸಾವಿರಾರು ಸಂಖ್ಯೆಯಲ್ಲಿ ಹಾಕಿ ಕ್ರೀಡಾ ಪ್ರೇಮಿಗಳು ಮೈದಾನದಲ್ಲಿ ಸೇರುವ ನಿರೀಕ್ಷೆ ಹೊಂದಲಾಗಿದೆ. ೧೦ ದಿನಗಳು ಪಂದ್ಯಾಟವು ನಡೆಯಲಿದ್ದು ೧೧೩ ತಂಡಗಳು ಭಾಗವಹಿಸಲಿವೆ. ಉತ್ತಮ ನಗದು ಹಾಗೂ ಪಾರಿತೋಷಕಗಳನ್ನು ನೀಡಲು ಅಕಾಡೆಮಿ ನಿರ್ಧರಿಸಿದೆ .ಹಾಕಿಯ ಗತವೈಭವವನ್ನು ಮರುಕಳುಹಿಸುವುದು ಮೂಲ ಉದ್ದೇಶವಾಗಿದೆ.
-ಪಾಂಡAಡ ಬೋಪಣ್ಣ,
ಅಧ್ಯಕ್ಷರು ಕೊಡವ ಹಾಕಿ ಅಕಾಡೆಮಿ
ಅಸೋಸಿಯೇಷನ್ ಭಾಗವಹಿಸಲಿದೆ. ಪಾಂಡAಡ ಕುಟ್ಟಪ್ಪ ಅವರ ನಿಧನದ ನಂತರ ಇದೇ ಮೊದಲ ಬಾರಿಗೆ ಕೌಟುಂಬಿಕ ಹಾಕಿ ಪಂದ್ಯಾವಳಿ ನಡೆಯುತ್ತಿದೆ.