ಮಡಿಕೇರಿ, ಅ. ೨೫: ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಆಗಿ ಕರ್ತವ್ಯದಲ್ಲಿದ್ದ ವೀರಾಜಪೇಟೆ ಕುಕ್ಲೂರಿನವರಾದ ಶರಣ್ಯರಾವ್ ಹೆಚ್. ಇದೀಗ ಕ್ಯಾಪ್ಟನ್ ಆಗಿ ಬಡ್ತಿ ಹೊಂದಿದ್ದಾರೆ. ಕಾರ್ಗಿಲ್‌ನಲ್ಲಿ ಇ.ಎಂ.ಇ. ಬೆಟಾಲಿಯನ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶರಣ್ಯ ಈ ಹಿಂದೆ ಎನ್‌ಸಿಸಿ ಹಾಗೂ ಕ್ರೀಡೆಯಲ್ಲಿ ಉತ್ತಮ ಸಾಧನೆಯೊಂದಿಗೆ ಸೇನೆಗೆ ಸೇರ್ಪಡೆಗೊಂಡಿದ್ದರು. ಇವರು ಕುಕ್ಲೂರಿನ ಹರೀಶ್‌ರಾವ್ ಎಸ್. ಹಾಗೂ ಮೈಥಿಲಿರಾವ್ ದಂಪತಿಯ ಪುತ್ರಿ.