(ನಿನ್ನೆಯ ಸಂಚಿಕೆಯಿAದ) ೪. ಜಿಲ್ಲಾ ಪಂಚಾಯಿತಿಗಳಲ್ಲಿ ಆವರ್ತನೆಯ ಮೇಲೆ ಮೀಸಲಾತಿ.: (೧) ಪ್ರತಿ ಜಿಲ್ಲಾ ಪಂಚಾಯಿತಿಯಲ್ಲಿ ಸ್ಥಾನಗಳ ಸಂಖ್ಯೆಯನ್ನು ಪ್ರತಿ ಮೀಸಲಿರಿಸಿದ ಮತ್ತು ಮೀಸಲಿರಿಸದ ಪ್ರವರ್ಗಗಳ ಸ್ನಾನಗಳು; ಮೀಸಲಿರಿಸಿದ ಮತ್ತು ಮೀಸಲಿರಿಸದ ಸ್ಥಾನಗಳಲ್ಲಿ ಮಹಿಳೆಯರಿಗೆ ಸ್ಥಾನಗಳ ನಿರ್ಧಾರಣವನ್ನು ಅಧಿನಿಯಮದ ಪ್ರಕರಣ ೧೬೧, ೧೬೨ ಮತ್ತು ೧೬೩ರ ಉಪ ಬಂಧಗಳನ್ವಯ ನಿರ್ಧರಿಸತಕ್ಕದ್ದು.

ರಾಜ್ಯ ಸರ್ಕಾರವು ಜಿಲ್ಲಾ ಪಂಚಾಯಿತಿಯಲ್ಲಿ ಅನುಸೂಚಿತ ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗೆ ಮೀಸಲಿರಿಸಿದ ಸ್ಥಾನಗಳ ಪೈಕಿ ಅನುಸೂಚಿತ ಪಂಗಡಗಳ ಜನಸಂಖ್ಯೆ ಹೆಚ್ಚು ಇರುವ ತಾಲ್ಲೂಕುಗಳಿಗೆ ಆಧ್ಯತೆಯನ್ನು ನೀಡಿ ಜಿಲ್ಲೆಯಲ್ಲಿರುವ ತಾಲೂಕುಗಳಿಗೆ ಆದ್ಯತೆಯನ್ನು ನೀಡಿ ಜಿಲ್ಲೆಯಲ್ಲಿರುವ ತಾಲೂಕುಗಳಿಗೆ ಒಂದೊAದು ಸ್ಥಾನವನ್ನು ಆವರ್ತನೆಯ ಮೂಲಕ ಹಂಚಿಕೆ ಮಾಡತಕ್ಕದ್ದು.

ಪರಂತು ಅನುಸೂಚಿತ ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗೆ ಮೀಸಲಿರಿಸಿದ ಸ್ಥಾನಗಳ ಸಂಖ್ಯೆಯು ಜಿಲ್ಲೆಯಲ್ಲಿನ ತಾಲೂಕುಗಳ ಸಂಖ್ಯೆಗಿAತ ಹೆಚ್ಚಿಗೆಯಾಗಿ ದ್ದರೆ, ಈ ಖಂಡದ ಅಡಿಯಲ್ಲಿ ಹಂಚಿಕೆ ಮಾಡಿದ ತರುವಾಯ ಉಳಿದ ಸ್ಥಾನಗಳನ್ನು ಅನುಸೂಚಿತ ಪಂಗಡಗಳ ಜನಸಂಖ್ಯೆ ಹೆಚ್ಚು ಇರುವ ತಾಲೂಕು ಗಳಿಗೆ ಆದ್ಯತೆ ನೀಡಿ ಆ ತಾಲೂಕುಗಳಿಗೆ ಮತ್ತೆ ಹಂಚಿಕೆ ಮಾಡತಕ್ಕದ್ದು.

೨) ಅನುಸೂಚಿತ ಜಾತಿಗಳಿಗೆ ಮೀಸಲಾದ ಸ್ಥಾನಗಳನ್ನು ಮೇಲಿನ ಉಪಬಂಧ (೧) ರಂತೆ ಅನುಸೂಚಿತ ಪಂಗಡಗಳಿಗೆ ಸ್ಥಾನಗಳನ್ನು ಮೀಸಲಿರಿ ಸಿದ ರೀತಿಯಲ್ಲಿಯೇ ಆವರ್ತನೆಯ ಮೇರೆಗೆ ಹಂಚಿಕೆ ಮಾಡತಕ್ಕದ್ದು.

೩) ಸರ್ಕಾರವು, ಜಿಲ್ಲಾ ಪಂಚಾಯಿತಿಯಲ್ಲಿನ ಆವರ್ತನೆಯ ಮೀಸಲಾತಿ ಮತ್ತು ಇತರ ವಿಷಯಗಳಿಗೆ ನಿಯಮ ೩ರ ಉಪಬಂಧಗಳನ್ನು ಯಥೋಚಿತ ವಾಗಿ ಅನುಸರಿಸತಕ್ಕದು.

೫. ನಗರ ಸಂಸ್ಥೆಗಳೊAದಿಗೆ ವಿಲೀನವಾಗುವುದರಿಂದ ಮತ್ತು ತಾಲೂಕು ಮತ್ತು ಜಿಲ್ಲೆಗಳ ವಿಭಜನೆಯಿಂದಾಗಿ ಹಾಗೂ ಕ್ಷೇತ್ರಗಳ ಮರುವಿಂಗಡನೆಯಿAದ ಮೀಸಲಾತಿಯ ಮೇಲೆ ಪರಿಣಾಮ ಬೀರುವ ಅಂಶಗಳು:- ಈ ನಿಯಮಗಳು ಪ್ರಾರಂಭಗೊAಡ ನಂತರ ಯಾವುದೇ ಕ್ಷೇತ್ರ ವಿಂಗಡಣೆಯಲ್ಲಿ.

(ಎ) ಮvಕ್ಷೇತ್ರದ ಪ್ರದೇಶವು, ಈ ಮೊದಲ ಮತಕ್ಷೇತ್ರದ ಹೆಚ್ಚಿನ ಪ್ರದೇಶವನ್ನು ಹೊಂದಿದಲ್ಲಿ, ಈ ನಿಯಮಗಳಡಿ ಆವರ್ತನೆಯನ್ನು ಮಾಡುವ ಸಲುವಾಗಿ ಅದನ್ನು ಈ ಹಿಂದಿನ ಮತ ಕ್ಷೇತ್ರದ ಅನುಕ್ರಮ ಮತಕ್ಷೇತ್ರವೆಂದು ಪರಿಗಣಿಸತಕ್ಕದ್ದು.

(ಬಿ) ಮತಕ್ಷೇತ್ರ ಅಥವಾ ಮತಕ್ಷೇತ್ರಗಳಿಂದ ರಚಿಸಲಾದ ಒಂದು ಮತಕ್ಷೇತ್ರವನ್ನು ಹಿಂದಿನ ಮತಕ್ಷೇತ್ರದ ಸಣ್ಣ ಪ್ರದೇಶ ಅಥವಾ ಮತಕ್ಷೇತ್ರಗಳ ಸಣ್ಣ ಪ್ರದೇಶದ ವಿಲೀನಗಳೊಂದಿಗೆ ರಚಿತವಾಗಿರುತ್ತದೋ ಆ ಮತಕ್ಷೇತ್ರಕ್ಕೆ ಹೊಸ ಮತಕ್ಷೇತ್ರವಾಗಿರತಕ್ಕದ್ದು, ಈ ಮತಕ್ಷೇತ್ರಕ್ಕೆ, ಮೇಲಿನ ನಿಯಮ (೩)ರಡಿಯಲ್ಲಿ ಮೀಸಲಾತಿಯನ್ನು ಹೊಸದಾಗಿ ಪ್ರಾರಂಭಿಸತಕ್ಕದ್ದು,

(ಸಿ) ಮತ್ತೊಂದು ಮತಕ್ಷೇತ್ರ ಅಥವಾ ಮತಕ್ಷೇತ್ರಗಳ ಪ್ರದೇಶವನ್ನು ಸೇರಿಸುವ ಮೂಲಕ ವಿಸ್ತರಿಸಲಾದ ಮತಕ್ಷೇತ್ರದಲ್ಲಿ ಈ ರೀತಿ ಸೇರ್ಪಡೆ ಗೊಳ್ಳುವ ಹಿಂದಿನ ಕ್ಷೇತ್ರದ ಆವರ್ತನೆ ಮೀಸಲನ್ನು ಮುಂದುವರೆಸತಕ್ಕದ್ದು,

(ಡಿ) ಎರಡು ಅಥವಾ ಹೆಚ್ಚಿನ ಮತಕ್ಷೇತ್ರಗಳ ವಿಲೀನದಿಂದ ರಚಿಸಲಾದ ಮತಕ್ಷೇತ್ರಕ್ಕೆ, ಈ ಪೈಕಿ ದೊಡ್ಡ ಮತಕ್ಷೇತ್ರದ ಮೀಸಲನ್ನು ಮುಂದುವರೆಸತಕ್ಕದ್ದು.

೬. ಕ್ಷೇತ್ರಗಳ ಮೀಸಲಾತಿ ಅಧಿಸೂಚನೆ. (೧) ಸರ್ಕಾರವು ನಿಯಮ ೩ರನ್ವಯ ಸಿದ್ಧಪಡಿಸಲಾದ ಅಂತಿಮ ಪಟ್ಟಿ ಆಧಾರದ ಮೇಲೆ ಮತಕ್ಷೇತ್ರಗಳ ಮೀಸಲಾತಿಯ ಕರಡು ಅಧಿಸೂಚನೆಯನ್ನು ಸಾರ್ವಜನಿಕರಿಂದ ಆಕ್ಷೇಪಣೆ ಗಳನ್ನು ಸಲ್ಲಿಸಲು ಹತ್ತು ದಿನಗಳ ಕಾಲಾವಕಾಶವನ್ನು ನೀಡಿ ರಾಜ್ಯ ಪತ್ರದಲ್ಲಿ ಪ್ರಕಟಿಸತಕ್ಕದ್ದು.

(೨) ಕರಡು ಅಧಿಸೂಚನೆಗೆ ಸಂಬAಧಿಸಿದAತೆ ಸ್ವೀಕರಿಸಲಾದ ಆಕ್ಷೇಪಣೆಗಳನ್ನು ಸರ್ಕಾರವು ಪರಿಗಣಿಸತಕ್ಕದ್ದು ಮತ್ತು ಆಕ್ಷೇಪಣೆಗಳನ್ನು ಒಪ್ಪಲು ಅಥವಾ ತಿರಸ್ಕರಿಸಲು ಸೂಕ್ತ ನಿರ್ಣಯಗಳನ್ನು ಕೈಗೊಳ್ಳತಕ್ಕದ್ದು.

(೩) ತದನಂತರ ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯಿತಿ ಮತಕ್ಷೇತ್ರಗಳ ಮೀಸಲಾತಿಯ ಅಂತಿಮ ಅಧಿಸೂಚನೆಯನ್ನು ಸರ್ಕಾರವು ಪ್ರಕಟಿಸತಕ್ಕದ್ದು.

೭. ಸರ್ಕಾರದ ಅಧಿಕಾರ : ಈ ನಿಯಮಗಳಲ್ಲಿ ಯಾವುದಾದರೂ ಅವಶ್ಯ ಅಂಶಗಳು ಒಳಗೊಂಡಿರದಿದ್ದರೆ, ಈ ಅದಿನಿಯಮದ ಅಡಿಯಲ್ಲಿ ಹಾಗೂ ಸಂವಿಧಾನದ ೭೩ನೇ ತಿದ್ದುಪಡಿ ಅಧಿನಿಯಮ, ೧೯೯೨ರನುಸಾರ ಸರ್ಕಾರವು ನಿಯಮಗಳನ್ನು ರೂಪಿಸುತಕ್ಕದ್ದು.

೮. ನಿರಸನ ಮತ್ತು ಉಳಿಸುವಿಕೆ: ಕರ್ನಾಟಕ ಪಂಚಾಯತ್‌ರಾಜ್ (ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳ ಸ್ಥಾನಗಳನ್ನು ಆವರ್ತನೆಯ ಮೇಲೆ ಮೀಸಲಿಡುವ) ನಿಯಮಗಳು, ೨೦೨೧ ಈ ಮೂಲಕ ನಿರಸನಗೊಳಿಸಲಾಗಿದೆ.

ಪರಂತು, ಅಂತಹ ನಿರಸನವು

(ಎ) ನಿರಸಿತವಾದ ನಿಯಮಗಳ ಹಿಂದಿನ ಕಾರ್ಯಾಚರಣೆ ಅಥವಾ ನಿರಸಿತವಾಗುವುದಕ್ಕಿಂತ ಮೊದಲು ಮಾಡಲಾದ ಯಾವುದೇ ಕಾರ್ಯ ಅಥವಾ ಕೈಗೊಂಡ ಯಾವುದೇ ಕ್ರಮ; ಅಥವಾ

(ಬಿ) ನಿರಸಿತವಾದ ನಿಯಮಗಳಡಿಯಲ್ಲಿ ಗಳಿಸಿದ, ಪ್ರಾಪ್ತವಾದ, ವಹಿಸಲಾದ, ಯಾವುದೇ ಹಕ್ಕು, ಹೊಣೆಗಾರಿಕೆ ಅಥವಾ ಬಾಧ್ಯತೆಯ ಮೇಲೆ, ಪರಿಣಾಮ ಉಂಟುಮಾಡತಕ್ಕದ್ದಲ್ಲ.

(ಮುಂದುವರಿಯುವುದು)