ವೀರಾಜಪೇಟೆ, ಅ. ೨೫: ಹೊಳೆಯ ಬದಿಯ ಪೊದೆ ಯೊಂದರಲ್ಲಿ ಅಪರಿಚಿತ ಪುರುಷನ ಶವ ಪತ್ತೆಯಾದ ಘಟನೆ ವೀರಾಜಪೇಟೆ ಕಂಡAಗಾಲ ಗ್ರಾಮದಲ್ಲಿ ನಡೆದಿದೆ. ವೀರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಟ್ಟಂದಿ ಮತ್ತು ಕಂಡAಗಾಲ ಗ್ರಾಮದ ಮಧ್ಯೆ ಹರಿಯುವ ಕುರುಡುಹೊಳೆಗೆ ಅಡ್ಡಲಾಗಿ ಕಟ್ಟಲಾಗಿರುವ ಸೇತುವೆಯ ಬಳಿಯ ಪೊದೆಯೊಂದರಲ್ಲಿ ಪುರುಷನ ಕೊಳೆತ ರೀತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಇಂದು ಮುಂಜಾನೆ ಗ್ರಾಮದಲ್ಲಿ ಹೊಳೆಯ ಬದಿಯಿಂದ ತೆರಳುವ ಸಂದರ್ಭದಲ್ಲಿ ದುರ್ವಾಸನೆ ಬೀರಿದೆ. ದುರ್ವಾಸನೆ ಬೀರುವ ಸ್ಥಳಕ್ಕೆ
ತೆರಳಿ ನೋಡಿದಲ್ಲಿ ಪುರುಷನ
ಮೃತ ದೇಹ ಪತ್ತೆಯಾಗಿದೆ. ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ಮಾಹಿತಿ
ಬಂದ ಮೇರೆಗೆ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದಾರೆ. ಪುರುಷ ಮೃತ ದೇಹವಾಗಿದ್ದು ಸುಮಾರು
೪೦-೫೦ ವರ್ಷ ಪ್ರಾಯವಾಗಿ ರಬಹುದು. ಸಾವನ್ನಪಿ ಸುಮಾರು ೮ ರಿಂದ ೧೦ ದಿನಗಳಾಗಿವೆ. ಜೀನ್ಸ್ ಪ್ಯಾಂಟ್ ಧರಿಸಿರುವುದು
ಬಿಟ್ಟರೆ ಮೇಲಿನ ಅಂಗಿ ಇರುವುದಿಲ್ಲ. ಮೃತ ಶರೀರವನ್ನು ವೀರಾಜಪೇಟೆ ನಗರದ ಶವಗಾರದಲ್ಲಿರಿಸಲಾಗಿದ್ದು, ವೀರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಅನಾಥ ಶವ
ಪತ್ತೆ ಪ್ರಕರಣ ದಾಖಲಾಗಿದ್ದು ಮುಂದಿನ ಕ್ರಮಕೈಗೊಂಡಿದ್ದಾರೆ.