ಮಡಿಕೇರಿ, ಅ. ೨೫: ಇಲ್ಲಿನ ಶ್ರೀ ಶಕ್ತಿ ವೃದ್ಧಾಶ್ರಮದಲ್ಲಿ ಆಶ್ರಯ ಪಡೆಯುತ್ತಿರುವ ಹಿರಿಯ ನಾಗರಿಕರಿಗೆ ದೀಪಾವಳಿ ಪ್ರಯುಕ್ತ ಆಶ್ರಮದ ಮಾತೃ ಸಂಸ್ಥೆಯ ವತಿಯಿಂದ ಬಟ್ಟೆ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಮಂಜುನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿ ವೃದ್ಧಾಶ್ರಮದಲ್ಲಿರುವವರು ಯಾರೂ ಅನಾಥರಲ್ಲ, ನಿಮ್ಮ ಮಕ್ಕಳು ನಿಮ್ಮ ಬಂಧು ಬಳಗ ಕೈಬಿಟ್ಟರೂ ಇತರ ಸಮಾಜ ಸಂಘ ಸಂಸ್ಥೆಗಳು, ಇಲಾಖೆಗಳು ನಿಮ್ಮೊಡನೆ ಕೈಜೋಡಿಸಲಿವೆ. ಪ್ರತಿಯೊಬ್ಬರೂ ಕೂಡ ಸಂತೋಷವಾಗಿ ಇಲ್ಲಿ ಜೀವನ ನಡೆಸುವಂತೆ ಸಲಹೆ ನೀಡಿದರು. ಈ ಸಂದರ್ಭ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವಿಮಲಾ, ಸಿಬ್ಬಂದಿ ಜಯಂತಿ, ಕರ್ನಾಟಕ ರಕ್ಷಣಾ ವೇದಿಕೆಯ ಮಡಿಕೇರಿ ಘಟಕದ ಅಧ್ಯಕ್ಷ ರವಿಗೌಡ ಹಾಗೂ ಡಿಎಸ್‌ಎಸ್ ತಾಲೂಕು ಸಂಚಾಲಕ ದೀಪಕ್ ಪೊನ್ನಪ್ಪ , ಪತ್ರಕರ್ತ ಚಂದನ್ ನಂದರಬೆಟ್ಟು ಹಾಗೂ ಪ್ರದೀಪ್ ಹಾಜರಿದ್ದರು.