ಕೂಡಿಗೆ, ಅ. ೨೫ : ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಸುಂದರನಗರ ಹಾಗೂ ಬಸವೇಶ್ವರ ಬಡಾವಣೆಯಲ್ಲಿ ಗಿಡಗಂಟಿಗಳು ತುಂಬಿದ್ದ ಪರಿಣಾಮ ಎದುರಾಗಿದ್ದ ರಸ್ತೆ ಸಂಚಾರ ಸಮಸ್ಯೆಯನ್ನು ಪರಿಹಾರ ಮಾಡಲಾಯಿತು. ರಸ್ತೆ ಅಗಲೀಕರಣ ಮಾಡುವ ಕೆಲಸ ಆರಂಭ.
ಸುಂದರನಗರದ ಕೋರೆ ರಸ್ತೆ ಹಾಗೂ ಫಾರೆಸ್ಟ್ ರಸ್ತೆಯಲ್ಲಿ ಎರಡೂ ಬದಿ ಗಿಡಗಂಟಿಗಳು ಬೆಳೆದು ನಿಂತು, ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಈ ಬಗ್ಗೆ ಸ್ಥಳೀಯರು ವಾರ್ಡ್ ಸಭೆಯಲ್ಲಿ ಚರ್ಚೆಗಳು ನಡೆದಿದ್ದವು. ಅದರಂತೆ ಪಂಚಾಯಿತಿ ವತಿಯಿಂದ ಜೆಸಿಬಿ ಮೂಲಕ ರಸ್ತೆ ಬದಿಯಿರುವ ಗಿಡಗಂಟಿಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಹಾಗೂ ವಾಹನಗಳಿಗೆ ಸುಗಮವಾಗಿ ಸಂಚರಿಸಲು ಅನುವುಮಾಡಿ ಕೊಡಲಾಯಿತು.
ಅದೇ ವೀರಭೂಮಿ ರಸ್ತೆಯ ಎರಡೂ ಬದಿಯಲ್ಲಿ ಬೆಳೆದು ನಿಂತಿರುವ ಕಾಡುಗಳನ್ನು ತೆರವುಗೊಳಿಸಲಾಯಿತು.
ಈ ಸಂದರ್ಭ ವಾರ್ಡ್ ಸದಸ್ಯ ಕೆ.ಬಿ. ಶಂಷುದ್ಧೀನ್, ಸ್ಥಳೀಯ ನಿವಾಸಿಗಳು ಹಾಜರಿದ್ದರು.