*ಗೋಣಿಕೊಪ್ಪ, ಅ. ೨೪: ವೀರಾಜಪೇಟೆ ತಾಲೂಕು ಸರ್ಕಾರಿ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಗೌರವಾಧ್ಯಕ್ಷರಾಗಿ ಬಾಳೆಲೆ ಶಾಲೆಯ ಶಿಕ್ಷಕ ಕೆ.ಆರ್. ಸುಬ್ಬಯ್ಯ, ಅಧ್ಯಕ್ಷರಾಗಿ ವೀರಾಜಪೇಟೆ ಶಾಲೆ ಶಿಕ್ಷಕ ಪಿ.ಎ. ಪ್ರವೀಣ್, ಉಪಾಧ್ಯರಾಗಿ ಪಾಲಿಬೆಟ್ಟ ಶಾಲೆಯ ಶಿಕ್ಷಕಿ ಮೀರಾ ಅಶೋಕ ಎಂ.ಎ, ಕಾರ್ಯದರ್ಶಿಯಾಗಿ ಪೊನ್ನಂಪೇಟೆ ಶಾಲೆಯ ಮಹೇಶ್ ಟಿ.ಎಸ್, ಖಜಾಂಚಿಯಾಗಿ ಮಾಯಮುಡಿ ಶಾಲೆಯ ಸತ್ಯ ಎಂ.ಟಿ, ಸಂಘಟನಾ ಕಾರ್ಯದರ್ಶಿಯಾಗಿ ಗೋಣಿಕೊಪ್ಪಲು ಶಾಲೆಯ ರಮಾನಂದ ಟಿ.ಡಿ, ಸಹ ಕಾರ್ಯದರ್ಶಿಯಾಗಿ ಕುಟ್ಟ ಶಾಲೆಯ ಶಿಕ್ಷಕ ಅಲಿಮ ಪಿ.ಎ, ನಿರ್ದೇಶಕರುಗಳಾಗಿ ತಿತಿಮತಿ ಶಾಲೆಯ ಪರಮೇಶ್ ಎಸ್.ಜೆ, ಬೇಟೋಳಿ ಶಾಲೆಯ ತಿಮ್ಮಯ್ಯ ಎಂ.ಕೆ, ಚೂರಿಕಾಡು ಶಾಲೆಯ ವಿನಾಯಕ್ ತೋಡ್ಕರ್, ದೇವರಪುರ ಶಾಲೆಯ ವೈಲೇಟ್ ಡಿಸೋಜ, ಚೆನ್ನನಕೋಟೆ ಶಾಲೆಯ ಶಿಕ್ಷಕಿ ಶೈಲಾ, ಕಾರ್ಮಾಡು ಶಾಲೆಯ ಯಲ್ಲವ್ವ, ಬಿಳುಗುಂದ ಶಾಲೆಯ ನೇತ್ರಾವತಿ, ಅಮ್ಮತ್ತಿ ಶಾಲೆ ಕುಟ್ಟಪ್ಪ ಕೆ.ಎ, ಮಂಚಳ್ಳಿ ಶಾಲೆ ಧರ್ಮಲಿಂಗA, ಪೊನ್ನಪ್ಪಸಂತೆ ಶಾಲೆ ಪ್ರೇಮಕುಮಾರಿ ಇವರುಗಳನ್ನು ಮುಂದಿನ ಆಡಳಿತ ಮಂಡಳಿ ನಿರ್ವಹಣಾ ಜವಾಬ್ಧಾರಿಯನ್ನು ನೀಡಲಾಗಿದೆ.