ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ರಾಜ್ ಅಧಿನಿಯಮ, ೧೯೯೩ (೧೯೯೩ರ ಕರ್ನಾಟಕ ಅಧಿನಿಯಮ ಸಂಖ್ಯೆ ೧೪) ರ ಪ್ರಕರಣ ೧೨೩, ೧೨೪, ೧೬೨ ಮತ್ತು ಪ್ರಕರಣ ೧೬೩ ಗಳನ್ನು ಪ್ರಕರಣ ೩೧೧ರೊಡನೆ ಓದಿಕೊಂಡAತೆ, ಪ್ರಕರಣ ೩೧೧ರ ಉಪಪ್ರಕರಣ (೧)ರಡಿ ಕರ್ನಾಟಕ ಸರ್ಕಾರವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳಲ್ಲಿ ಸ್ಥಾನಗಳನ್ನು ಆವರ್ತನೆಯ ಮೇಲೆ ಮೀಸಲಿಡುವ ನಿಯಮಗಳು ೨೦೨೨ರ ಕರಡು ನಿಯಮಗಳನ್ನು ಸರ್ಕಾರವು ರಚಿಸಲು ಉದ್ದೇಶಿಸಿದ್ದು, ಇದರಿಂದ ಬಾಧಿತರಾಗುವ ಎಲ್ಲಾ ವ್ಯಕ್ತಿಗಳ ಮಾಹಿತಿಗಾಗಿ ಸದರಿ ಅಧಿನಿಯಮದ ಪ್ರಕರಣ ೩೧೧ರಲ್ಲಿ ನಿಗಧಿಪಡಿಸಿದಂತೆ ಪ್ರಕಟಿಸಲಾಗಿದೆ ಮತ್ತು ಈ ಮೂಲಕ ಆಕ್ಷೇಪಣೆ ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದೆ. ಸದರಿ, ಆಕ್ಷೇಪಣೆ ಮತ್ತು ಸಲಹೆಗಳನ್ನು ಈ ನಿಯಮಗಳು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿತವಾದ ದಿನಾಂಕದಿAದ ಹದಿನೈದು ದಿನಗಳೊಳಗಾಗಿ ಕಳುಹಿಸಲು ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ ಪ್ರಕಟಣೆಯಲ್ಲಿ ಕೋರಿದೆ.
ನಿಗದಿಪಡಿಸಿದ ಅವಧಿಯು ಮುಕ್ತಾಯವಾಗುವ ಮೊದಲು ಕರಡು ಸಂಬAಧಿಸಿದAತೆ ಯಾವೊಬ್ಬ ವ್ಯಕ್ತಿಯಿಂದ ರಾಜ್ಯ ಸರ್ಕಾರವು ಸ್ವೀಕರಿಸ ಬಹುದಾದ ಆಕ್ಷೇಪಣೆ ಮತ್ತು ಸಲಹೆಗಳನ್ನು ರಾಜ್ಯ ಸರ್ಕಾರ ಪರಿಗಣಿಸಲಿದೆ. ಆಕ್ಷೇಪಣೆಗಳನ್ನು ಅಥವಾ ಸಲಹೆಗಳನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬಹುಮಹಡಿಗಳ ಕಟ್ಟಡ, ೩ನೇ ಹಂತ, ೩ನೇ ಮಹಡಿ, ಡಾ|| ಅಂಬೇಡ್ಕರ್ ಬೀದಿ, ಬೆಂಗಳೂರು-೦೧ ಇವರಿಗೆ ಕಳುಹಿಸಲು ಕೋರಲಾಗಿದೆ.
ಕರಡು ನಿಯಮಗಳು
೧. ಶೀರ್ಷಿಕೆ ಮತ್ತು ಪ್ರಾರಂಭ: (೧) ಈ ನಿಯಮಗಳನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ರಾಜ್ (ತಾಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಗಳಲ್ಲಿ ಸ್ಥಾನಗಳನ್ನು ಆವರ್ತನೆಯ ಮೇಲೆ ಮಿಸಲಿಡುವ) ನಿಯಮಗಳು ೨೦೨೨ ಎಂದು ಕರೆಯತಕ್ಕದ್ದು.
(೨) ಈ ನಿಯಮಗಳು ಕರ್ನಾಟಕ ರಾಜ್ಯ ಪತ್ರದಲ್ಲಿ ಅಂತಿಮವಾಗಿ ಪ್ರಕಟಗೊಂಡ ದಿನಾಂಕದಿAದ ಜಾರಿಗೆ ಬರತಕ್ಕದ್ದು.
೨. ಪರಿಭಾಷೆಗಳು : (೧) ಈ ನಿಯಮಗಳಲ್ಲಿ ಸಂದರ್ಭಕ್ಕೆ ಅನ್ಯಥಾ ಅಗತ್ಯವಿರದ ಹೊರತು:-
(ಎ) ‘ಅಧಿನಿಯಮ' ಎಂದರೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ರಾಜ್ ಅಧಿನಿಯಮ, ೧೯೯೩ (೧೯೯೩ರ ಕರ್ನಾಟಕ ಅಧಿನಿಯಮ ಸಂಖ್ಯೆ ೧೪).
(ಬಿ) ‘‘ಜನಗಣತಿ ಸಂಖ್ಯೆಗಳು” ಎಂದರೆ ಜನಗಣತಿ ಅಧಿನಿಯಮ ೧೯೪೮ರ (ಕೇಂದ್ರ ಅಧಿನಿಯಮ ೧೯೪೮ರ ೩೭) ಉಪಬಂಧಗಳನ್ವಯ ಭಾರತದ ಮಹಾ ನೋಂದಣಾಧಿಕಾರಿಗಳು ಹಾಗೂ ಜನಗಣತಿ ಆಯುಕ್ತರ ಕಚೇರಿಯಿಂದ ಪ್ರಕಟವಾದ ಕಳೆದ ಹಿಂದಿನ ಜನಗಣತಿ ವರದಿ.
(ಸಿ) ‘‘ಆಯೋಗ’’ ಎಂದರೆ ಪ್ರಕರಣ ೩೦೮ರಡಿ ರಚಿತವಾದ ರಾಜ್ಯ ಚುನಾವಣಾ ಆಯೋಗ,
(ಡಿ) "ಕ್ಷೇತ್ರ ವಿಂಗಡಣೆ" ಎಂದರೆ ಜನಗಣತಿ ಅಂಕಿ-ಅAಶಗಳನ್ನು ಆಧರಿಸಿ ಕ್ಷೇತ್ರಗಳ ಗಡಿಗಳ ಮರುಹೊಂದಾಣಿಕೆ ಮತ್ತು ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಸ್ಥಾನಗಳ ಮರು ಹೊಂದಾಣಿಕೆ ಅಥವಾ ನಿಗದಿಪಡಿಸುವಿಕೆ ಎಂದು ಅರ್ಥೈಸತಕ್ಕದ್ದು.
(ಇ) ಅಡ್ಡ ಮೀಸಲಾತಿ" ಎಂದರೆ ಮೀಸಲಿರಿಸದ ಸ್ಥಾನಗಳನ್ನು ಒಳಗೊಂಡAತೆ ಪ್ರತಿಯೊಂದು ವರ್ಗದಲ್ಲಿಯೂ ಮಹಿಳೆಯರಿಗೆ ಮೀಸಲಿರಿಸಬೇಕಾದ ಸ್ಥಾನಗಳು.
(ಎಫ್) ‘‘ಸ್ಥಾನಗಳು’’ ಎಂದರೆ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿಗಳ ಕ್ಷೇತ್ರಗಳು.
(ಜಿ) “ಪ್ರಕರಣ” ಎಂದರೆ ಅಧಿನಿಯಮದ ಪ್ರಕರಣ.
(೨) ಈ ನಿಯಮಗಳಲ್ಲಿ ಬಳಸಲಾದ ಮತ್ತು ಪರಿಭಾಷಿಸಿಲ್ಲದ ಇತರ ಪದಗಳು ಮತ್ತು ಪದಜೋಡಣೆಗಳಿಗೆ, ಅಂದರೆ ಅಧಿನಿಯಮದಲ್ಲಿ ಪರಿಭಾಷಿಸಲಾದಂತೆ ಅನುಕ್ರಮವಾಗಿ ಅರ್ಥವನ್ನು ಹೊಂದಿರತಕ್ಕದ್ದು.
೩. ಪ್ರತಿ ತಾಲೂಕು ಪಂಚಾಯಿತಿಯಲ್ಲಿ ಆವರ್ತನೆಯ ಮೇಲೆ ಸ್ಥಾನಗಳ ಮೀಸಲಿಡುವಿಕೆ :-
(೧) ತಾಲೂಕು ಪಂಚಾಯಿತಿಯಲ್ಲಿ ಪ್ರತಿಯೊಂದು ಪ್ರವರ್ಗಗಳಿಗೆ ಮೀಸಲಿಡಲಾದ ಹಾಗೂ ಮೀಸಲಿರಿಸದ ಸ್ಥಾನಗಳನ್ನು ಹಾಗೂ ಮೀಸಲಿರಿಸಲಾದ ಹಾಗೂ ಮೀಸಲಿರಿಸದ ಪ್ರವರ್ಗಗಳಲ್ಲಿ ಮಹಿಳೆಯರಿಗೆ ಸ್ಥಾನಗಳನ್ನು ಅಧಿನಿಯಮದ ಪ್ರಕರಣ ೧೨೩ ರಂತೆ
(೨) ಈ ನಿಯಮಗಳ ಉಪನಿಯಮ (೩)ರಲ್ಲಿ ನಿರ್ದಿಷ್ಟಪಡಿಸಿದ ಮೀಸಲು ಕ್ರಮದಂತೆ ಪ್ರತಿ ತಾಲೂಕು ಪಂಚಾಯಿತಿ ಪ್ರದೇಶದ ಕ್ಷೇತ್ರಗಳಲ್ಲಿ ಸ್ಥಾನಗಳ ಮೀಸಲಾತಿಯನ್ನು ಆವರ್ತನೆಯ ಮೇಲೆ ನಿಗದಿತ ಅನುಕ್ರಮದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಮಾಡತಕ್ಕದ್ದು,
(೩) ಪ್ರತಿ ತಾಲೂಕು ಪಂಚಾಯಿತಿಯಲ್ಲಿ ಈ ಕೆಳಗಿನ ವಿಷಯಗಳನ್ನು ಪರಿಗಣನೆಗೆ ತೆಗೆದುಕೊಂಡು ಸ್ಥಾನಗಳ ಮೀಸಲಾತಿಯನ್ನು ಮಾಡತಕ್ಕದು, ಅವುಗಳೆಂದರೆ:
(ಎ) ಈ ನಿಯಮಗಳು ಜಾರಿಗೆ ಬಂದ ದಿನಾಂಕದ ನಂತರ ನಡೆಯುವ ಸಾರ್ವತ್ರಿಕ ಚುನಾವಣೆಯಿಂದ ಪ್ರಾರಂಭಿಸಿ ಪ್ರತಿಯೊಂದು ಪ್ರಾದೇಶಿಕ ಚುನಾವಣಾ ಕ್ಷೇತ್ರದಲ್ಲಿ ಮುಂದಿನ ಚುನಾವಣೆಗೆ ಆವರ್ತನೆಯ ಮೇಲೆ ಪ್ರವರ್ಗಗಳ ಮೀಸಲಾತಿಯನ್ನು ನಿರ್ಧರಿಸತಕ್ಕದ್ದು.
(ಬಿ) ರಾಜ್ಯ ಸರ್ಕಾರವು ತಾಲೂಕಿನ ಜನಸಂಖ್ಯೆಯಲ್ಲಿ ಶೇಕಡಾವಾರು ಅತಿ ಹೆಚ್ಚು ಅನುಸೂಚಿತ ಪಂಗಡಗಳ ಜನಸಂಖ್ಯೆ ಇರುವ ಮತ ಕ್ಷೇತ್ರಗಳನ್ನು, ಅವರೋಹಣ ಕ್ರಮದಲ್ಲಿ ಪಟ್ಟಿ ಮಾಡತಕ್ಕದ್ದು.
(ಸಿ) ರಾಜ್ಯ ಸರ್ಕಾರವು ತಾಲೂಕಿನ ಜನಸಂಖ್ಯೆಯಲ್ಲಿ ಶೇಕಡಾವಾರು ಅತಿ ಹೆಚ್ಚು, ಅನುಸೂಚಿತ ಜಾತಿ ಜನಸಂಖ್ಯೆ ಇರುವ ಮತಕ್ಷೇತ್ರಗಳನ್ನು ಅವರೋಹಣ ಕ್ರಮದಲ್ಲಿ ಪಟ್ಟಿ ಮಾಡತಕ್ಕದ್ದು.
(ಡಿ) ಸರ್ಕಾರವು ಅನುಸೂಚಿತ ಪಂಗಡಗಳಿಗೆ ಸೇರಿದ ವ್ಯಕ್ತಿಗಳಿಗಾಗಿ ಮೀಸಲಿರಿಸಿದ ಸ್ಥಾನಗಳನ್ನು ತಾಲೂಕಿನ ಜನಸಂಖ್ಯೆಯಲ್ಲಿ ಅನುಸೂಚಿತ ಪಂಗಡಗಳ ಜನಸಂಖ್ಯೆಯ ಶೇಕಡಾವಾರು ಅತಿ ಹೆಚ್ಚು ಇರುವಂತಹ ಮತಕ್ಷೇತ್ರಗಳಿಗೆ ಆವರ್ತನೆಯ ಮೇಲೆ ನಿರ್ಧರಿಸತಕ್ಕದ್ದು, ಆದಾಗ್ಯೂ ಈಗಾಗಲೇ ಸದರಿ ಮತ ಕ್ಷೇತ್ರಕ್ಕೆ ಈ ಹಿಂದೆ ಅನುಸೂಚಿತ ಪಂಗಡ ಸ್ಥಾನ ಹಂಚಿಕೆಯಾಗಿದ್ದಲ್ಲಿ ಅದೇ ಮೀಸಲಾತಿಯು ಮುಂದಿನ ಅವಧಿಯ ಚುನಾವಣೆಯಲ್ಲಿ ಪುನರಾವರ್ತನೆಯಾಗುತ್ತಿಲ್ಲವೆನ್ನುವುದನ್ನು ಖಾತರಿಪಡಿಸಿಕೊಳ್ಳುವುದು ಮತ್ತು ಅನುಸೂಚಿತ ಪಂಗಡದ ಮೀಸಲಾತಿಯು ಶೇಕಡಾವಾರು ಹೆಚ್ಚಿನ ಅನುಸೂಚಿತ ಪಂಗಡಗಳ ಜನಸಂಖ್ಯೆಯಿರುವ ನಂತರದ ಸ್ಥಾನಕ್ಕೆ ಮೇಲಿನ ಉಪನಿಯಮ (೧)ರ ನಿಬಂಧನೆಗಳು ಹಾಗೂ ಷರತ್ತುಗಳಿಗೊಳಪಟ್ಟು ನಿಗದಿಗೊಳಿಸತಕ್ಕದ್ದು.
(ಇ) ಸರ್ಕಾರವು ಅನುಸೂಚಿತ ಪಂಗಡದಿAದ ಮಹಿಳೆಯರಿಗೆ ಸ್ಥಾನಗಳ ಮೀಸಲಾತಿ ಹಂಚಿಕೆ (ಅಡ್ಡ ಮೀಸಲಾತಿ) ಮಾಡುವಾಗ, ಅನುಸೂಚಿ ಪಂಗಡದ ಸ್ನಾನವನ್ನು ಹಂಚಿಕೆ ಮಾಡಲು ಅರ್ಹವಾಗಿರುವ ಮತಕ್ಷೇತ್ರಗಳ ಪೈಕಿ ಅತಿ ಹೆಚ್ಚಿನ ಅನುಸೂಚಿತ ಪಂಗಡಗಳ ಮಹಿಳಾ ಜನಸಂಖ್ಯೆಯಿರುವ ಮತ ಕ್ಷೇತ್ರಕ್ಕೆ ಹಂಚಿಕೆ ಮಾಡತಕ್ಕದ್ದು.
(ಎಫ್) ಸರ್ಕಾರವು ಅನುಸೂಚಿತ ಜಾತಿಗೆ ಸೇರಿದ ವ್ಯಕ್ತಿಗಳಿಗೆ ಮೀಸಲಿರಿಸಿದ ಸ್ಥಾನಗಳನ್ನು ತಾಲೂಕಿನ ಜನಸಂಖ್ಯೆಯಲ್ಲಿ ಶೇಕಡಾವಾರು ಅನುಸೂಚಿತ ಜಾತಿಯ ಜನಸಂಖ್ಯೆಯು ಅತೀ ಹೆಚ್ಚು ಇರುವಂತಹ ಮತಕ್ಷೇತ್ರಗಳಿಗೆ ಆವರ್ತನೆಯ ಮೇಲೆ ನಿರ್ಧರಿಸತಕ್ಕದ್ದು, ಆದಾಗ್ಯೂ, ಈಗಾಗಲೇ ಸದರಿ ಮತಕ್ಷೇತ್ರಕ್ಕೆ ಈ ಹಿಂದೆ ಅನುಸೂಚಿತ ಜಾತಿ ಸ್ಥಾನ ಹಂಚಿಕೆಯಾಗಿದ್ದಲ್ಲಿ ಅದೇ ಮೀಸಲಾತಿಯು ಮುಂದಿನ ಅವಧಿಯ ಚುನಾವಣೆಯಲ್ಲಿ ಪುನರಾವರ್ತನೆಯಾಗುತ್ತಿಲ್ಲವೆನ್ನುವುದನ್ನು ಖಾತರಿ ಪಡಿಸಿಕೊಳ್ಳುವುದು ಮತ್ತು ಅನುಸೂಚಿತ ಜಾತಿಯ ಮೀಸಲಾತಿಯು ಶೇಕಡಾವಾರು ಹೆಚ್ಚಿನ ಅನುಸೂಚಿತ ಜಾತಿಯ ಜನಸಂಖ್ಯೆಯಿರುವ ನಂತರದ ಸ್ಥಾನಕ್ಕೆ, ಮೇಲಿನ ಉಪನಿಯಮ (೧)ರ ನಿಬಂಧನೆಗಳು ಹಾಗೂ ಷರತ್ತುಗಳಿಗೊಳಪಟ್ಟು ನಿಗದಿಗೊಳಿಸತಕ್ಕದ್ದು,
(ಜಿ) ಸರ್ಕಾರವು ಅನುಸೂಚಿತ ಜಾತಿಯ ಮಹಿಳೆಯರ ಮೀಸಲಾತಿ ಸ್ಥಾನಗಳಿಗೆ ಹಂಚಿಕೆ (ಅಡ್ಡ ಮೀಸಲಾತಿ) ಮಾಡುವಾಗ ಅನುಸೂಚಿತ ಜಾತಿಯ ಸ್ಥಾನವನ್ನು ಹಂಚಿಕೆ ಮಾಡಲು ಅರ್ಹವಾಗಿರುವ ಮತಕ್ಷೇತ್ರಗಳ ಪೈಕಿ ಅತೀ ಹೆಚ್ಚಿನ ಅನುಸೂಚಿತ ಜಾತಿ ಮಹಿಳಾ ಜನಸಂಖ್ಯೆಯಿರುವ ಮತಕ್ಷೇತ್ರಕ್ಕೆ ಹಂಚಿಕೆ ಮಾಡತಕ್ಕದ್ದು.
(ಎಚ್) ತಾಲೂಕು ಪಂಚಾಯಿತಿಯಲ್ಲಿ ಅನುಸೂಚಿತ ಪಂಗಡ ಮತ್ತು ಅನುಸೂಚಿತ ಜಾತಿ ಮೀಸಲಾತಿಯನ್ನು ನಿಗದಿಪಡಿಸಿದ ಸಂದರ್ಭದಲ್ಲಿ, ಅಂತಹ ಮೀಸಲಾತಿಯು ಶೇಕಡಾ ಐವತ್ತರನ್ನು ಅಥವಾ ಅದಕ್ಕಿಂತ ಹೆಚ್ಚಾದಲ್ಲಿ, ಅಂತಹ ಸಂದರ್ಭದಲ್ಲಿ ಸರ್ಕಾರವು ಅಂತಹ ತಾಲೂಕು ಪಂಚಾಯಿತಿಯಲ್ಲಿ ಹಿಂದುಳಿದ ವರ್ಗಗಳಿಗೆ ಹಾಗೂ ಎಸ್.ಸಿ., ಎಸ್.ಟಿ.ಗಳಿಗೆ ಹೆಚ್ಚಾದ ಮೀಸಲಾತಿಯನ್ನು ಹಂಚಿಕೆ ಮಾಡತಕ್ಕದ್ದಲ್ಲ ಮತ್ತು ಅವುಗಳನ್ನು ಸಾಮಾನ್ಯ ವರ್ಗಕ್ಕೆ ನಿಗದಿಪಡಿಸತಕ್ಕದ್ದು.
(ಐ) ಈ ಮೇಲೆ ತಿಳಿಸಲಾದ ಉಪನಿಯಮ (ಎಚ್)ರ ಉಪಬಂಧಗಳಿ ಗೊಳಪಟ್ಟು, ಸರ್ಕಾರವು ತಾಲೂಕು ಪಂಚಾಯಿತಿಯಲ್ಲಿ ಹಿಂದುಳಿದ ವರ್ಗಗಳಿಗೆ. ಮೀಸಲಾದ ಸ್ಥಾನಗಳನ್ನು ಕಾರ್ಯಸಾಧ್ಯವಾಗುವ ಮಟ್ಟಿಗೆ ಆವರ್ತನೆಯ ಮೇಲೆ ಹಂಚಿಕೆ ಮಾಡತಕ್ಕದು.
ಹಿಂದಿನ ಅವಧಿಯಲ್ಲಿ ಒಂದು ಮತಕ್ಷೇತ್ರಕ್ಕೆ ಹಿಂದುಳಿದ ವರ್ಗ-ಎ ಅಥವಾ ಹಿಂದುಳಿದ ವರ್ಗ-ಬಿ ಎಂದು ಮೀಸಲಾತಿ ಹಂಚಿಕೆ ಮಾಡಿದ್ದಲ್ಲಿ, ಅದೇ ಉಪ-ಪ್ರವರ್ಗದ ಮೀಸಲಾತಿಯನ್ನು ಮುಂದಿನ ಅವಧಿಯ ಚುನಾವಣೆಯಲ್ಲಿ ಪುನರಾವರ್ತಿಸತಕ್ಕದ್ದಲ್ಲ,
(ಜೆ) ಸರ್ಕಾರವು ಯಥಾಸಾಧ್ಯವಾದ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಹಿಂದುಳಿದ ವರ್ಗಗಳಲ್ಲಿ ಮಹಿಳೆಯರಿಗೆ ಮೀಸಲಾದ ಸ್ಥಾನಗಳನ್ನು ಆವರ್ತನೆಯ ಮೇಲೆ ಹಂಚಿಕೆ ಮಾಡತಕ್ಕದ್ದು,
(ಕೆ) ಮೇಲೆ ಹೇಳಲಾದ ಹಂತಗಳನ್ನು ಪೂರ್ಣಗೊಳಿಸಿದ ನಂತರ, ಮೀಸಲಿರಿಸದ ಸ್ಥಾನಗಳಿಂದ (ಸಾಮಾನ್ಯ) ಮಹಿಳೆಯರಿಗೆ ಸ್ಥಾನವನ್ನು ಮೀಸಲಿಡುವಾಗ, ಮತಕ್ಷೇತ್ರದ ಒಟ್ಟು ಜನಸಂಖ್ಯೆಯಲ್ಲಿ ಅತ್ಯಂತ ಹೆಚ್ಚಿನ ಮಹಿಳಾ ಜನಸಂಖ್ಯೆ ಹೊಂದಿರುವ ಮತಕ್ಷೇತ್ರಕ್ಕೆ, ಸರ್ಕಾರವು ಹಂಚಿಕೆ ಮಾಡತಕ್ಕದ್ದು ಅಥವಾ ಕಾಯ್ದಿರಿಸತಕ್ಕದ್ದು.
ಪರಂತು, ಕಾರ್ಯಸಾಧುವಾಗುವ ಮಟ್ಟಿಗೆ ಮುಂದಿನ ಅವಧಿಯ ಚುನಾವಣೆಗಳಲ್ಲಿ ಪುನರಾವರ್ತನೆಯಾಗತಕ್ಕದಲ್ಲ.
(ಎಲ್) ಪ್ರತಿಯೊಂದು ಪ್ರವರ್ಗದಲ್ಲಿ ಮಹಿಳೆಯರಿಗೆ ಮೀಸಲಿಡಲಾದ ಸ್ಥಾನಗಳು ಮತ್ತು ಮೀಸಲಿರಿಸದ ಸ್ಥಾನಗಳ (ಸಾಮಾನ್ಯ) ಪೈಕಿ ಮಹಿಳೆಯರಿಗೆ ಮೀಸಲಿಡಲಾದ ಸ್ಥಾನಗಳು ಸಾಧ್ಯವಾದಷ್ಟು ಮಟ್ಟಿಗೆ ಮುಂದಿನ ಅವಧಿಯ ಚುನಾವಣೆಯಲ್ಲಿ ಪುನರಾವರ್ತನೆಯಾಗತಕ್ಕದಲ್ಲ ಮತ್ತು ಮೀಸಲಿರಿಸಲಾದ ಹಾಗೂ ಮೀಸಲಿರಿಸದ ಸ್ಥಾನಗಳ ಪೈಕಿ ಮಹಿಳೆಯರಿಗಾಗಿ ಇರುವಂತಹ ಮೀಸಲಾತಿಯು ಸಂಬAಧಪಟ್ಟ ಪ್ರವರ್ಗ ಅಥವಾ ಮೀಸಲಿರಿಸದ ಸ್ಥಾನಗಳ ಪೈಕಿ ಅತ್ಯಂತ ಹೆಚ್ಚಿನ ಮಹಿಳಾ ಜನಸಂಖ್ಯೆಯನ್ನು ಹೊಂದಿರುವ ನಂತರದ ಮತಕ್ಷೇತ್ರಕ್ಕೆ ಪ್ರವಹಿಸತಕ್ಕದ್ದು.
(ಮುಂದುವರಿಯುವುದು)