ವೀರಾಜಪೇಟೆ, ಅ. ೨೫: ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಾಂತರ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು ಆಟೋ ಹಾಗು ಇತರ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತಿದೆ. ೧೫ ದಿನದೊಳಗೆ ರಸ್ತೆಗಳನ್ನು ಮರು ಡಾಂಬರಿಕರಣಗೊಳಿಸದಿದ್ದರೆ ನವಂಬರ್ ೧೫ ರಂದು ಒಂದು ದಿನ ಆಟೋ ಬಂದ್ ಮಾಡಿ ಲೋಕೋಪಯೋಗಿ ಇಲಾಖೆ ಹಾಗು ಪುರಸಭೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಜೈಭಾರತ್ ಆಟೋ ಚಾಲಕರ ಹಾಗು ಮಾಲೀಕರ ಸಂಘದ ಗೌರವ ಅಧ್ಯಕ್ಷ ಅಧ್ಯಕ್ಷ ತೋರೆರ ಕುಟ್ಟಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗುಂಡಿ ಬಿದ್ದಿರುವ ರಸ್ತೆÀಗಳಲ್ಲಿ ಆಟೋ ಸಂಚಾರ ಕಷ್ಟ ಸಾಧ್ಯವಾಗುತ್ತಿದೆ. ಇಂತಹ ರಸ್ತೆಗಳಲ್ಲಿ ಸಂಚರಿಸುವುದರಿAದ ಆಟೋಗಳ ಬಿಡಿಭಾಗಗಳು ಉದುರಿ ಹೋಗುತ್ತಿವೆ. ಬರುವ ಆದಾಯವೆಲ್ಲ ವಾಹದ ಬಿಡಿ ಭಾಗಗಳಿಗೆ ಆಗುತ್ತದೆ. ಜೀವನ ನಿರ್ವಹಣೆ ಕಷ್ಟವಾಗುತ್ತಿದೆ. ಅಧಿಕಾರಿಗಳು ಹಾಗು ಜನ ಪ್ರತಿನಿಧಿಗಳು ಮೌನಕ್ಕೆ ಶರಣಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪ್ರತಿಭಟನೆ ಅನಿವಾರ್ಯ ಎಂದು ಹೇಳಿದರು. ಅಧ್ಯಕ್ಷ ಎನ್.ಎನ್ ಶಿವು ಮಾತನಾಡಿ ಕಳೆದ ತಿಂಗಳು ಆಟೋ ಚಾಲಕನೋರ್ವ ವಿದ್ಯಾರ್ಥಿನಿಯೋರ್ವಳನ್ನು ಅತ್ಯಾಚಾರಕ್ಕೆ ಯತ್ನಿಸಿದ ಪರಿಣಾಮ ಪೊಲೀಸರು ಆತನ ವಿರುದ್ದ ಪೋಕ್ಸೋ ಪ್ರಕರಣ ದಾಖಲಿಸಿದೆ. ಇಂತವರಿAದ ಎಲ್ಲಾ ಆಟೋ ಚಾಲಕರಿಗೂ ಕೆಟ್ಟ ಹೆಸರು ಬರುತ್ತಿದೆ. ಕೂಡಲೇ ಆತನ ಚಾಲನಾ ಪರವಾನಿಗೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರಧಾನ ಕಾರ್ಯದರ್ಶಿ ಪ್ರದೀಪ್ ಮಾತನಾಡಿ ಈಗಾಗಲೇ ವಿರಾಜಪೇಟೆ ಪಟ್ಟಣದಲ್ಲಿಯೆ ೮೦೦ ಕ್ಕೂ ಅಧಿಕ ಆಟೋಗಳಿವೆ. ಜಿಲ್ಲೆಯಲ್ಲಿ ಹತ್ತು ಸಾವಿರಕ್ಕೂ ಅಧಿಕ ಆಟೋಗಳಿವೆ. ಇರುವ ಆಟೋಗಳಿಗೆ ಬಾಡಿಗೆ ಇಲ್ಲದಂತಾಗಿದೆ. ಆದ್ದರಿಂದ ಕನಿಷ್ಟ ಮೂರು ವರ್ಷಗಳ ಕಾಲ ಹೊಸ ಪರವಾನಗಿ ನೀಡದಿದ್ದರೆ ಒಳಿತು. ಹೊರ ಜಿಲ್ಲೆಗಳಲ್ಲಿ ಆಟೋಗಳಿಗೆ ಜಿಲ್ಲಾ ಪರವಾನಿಗೆ ನೀಡಿದ್ದಾರೆ. ನಮಗೆ ಕೇವಲ ಸೀಮಿತ ಪ್ರದೇಶಗಳಿಗೆ ಮಾತ್ರ ಸಂಚರಿಸಲು ಅವಕಾಶ ಇದೆ. ನಮ್ಮ ಜಿಲ್ಲೆಯಲ್ಲಿಯು ಬೇರೆ ಜಿಲ್ಲೆಯಲ್ಲಿರುವ ನಿಯಮವನ್ನು ಜಾರಿ ಗೊಳಿಸಬೇಕು ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಉಪಾಧ್ಯಕ್ಷ ಅರ್ಜುನ್, ಗೌರವ ಸಲಹೆಗಾರ ಪ್ರವೀಣ್, ನಿರ್ದೇಶಕರುಗಳಾದ ಕಿರಣ್, ಜಾಕೋಬ್, ಮಂಜುನಾಥ್, ಜಸ್ವಿನ್, ಜೀವನ್ ಉಪಸ್ಥಿತರಿದ್ದರು.