ಭಾಗಮAಡಲ, ಅ. ೨೪: ದೀಪಾವಳಿ ಹಬ್ಬ ಹಾಗೂ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಭಾಗಮಂಡಲ ಹಾಗೂ ತಲಕಾವೇರಿಗೆ ಇಂದು ಭಕ್ತ ಸಾಗರ ಹರಿದು ಬಂತು. ಕ್ಷೇತ್ರಗಳಲ್ಲಿ ಸೋಮವಾರ ಅಧಿಕ ಸಂಖ್ಯೆಯ ಭಕ್ತರು ಪೂಜೆ ಸಲ್ಲಿಸುತ್ತಿದ್ದುದು ಕಂಡುಬAತು. ಅಮಾವಾಸ್ಯೆ ಹಿನ್ನೆಲೆಯಲ್ಲಿ ಪಿಂಡ ಪ್ರದಾನಕ್ಕಾಗಿ ಜಿಲ್ಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಭಕ್ತರು ಅಧಿಕ ಸಂಖ್ಯೆಯಲ್ಲಿ ಬಂದರು. ಇಂದು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನ ಮಾಡಿ ಭಗಂಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಭಕ್ತರು ತಲಕಾವೇರಿಯಲ್ಲಿ ತೀರ್ಥ ಸ್ನಾನ ಮಾಡಿದರು.
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ಮೂರು ವರ್ಷಗಳಿಂದ ಭಕ್ತರ ಸಂಖ್ಯೆ ಇಳಿಮುಖಗೊಂಡಿತ್ತು. ಈ ವರ್ಷವೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕಂಡು ಬಂದರು. ಕೊಡಗು ಏಕೀಕರಣ ರಂಗದಿAದ ಭಕ್ತರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಭಾಗಮಂಡಲ ದೇವಾಲಯದ ವತಿಯಿಂದಲೂ ಅನ್ನಸಂತರ್ಪಣೆ ನಡೆಯಿತು.
ಭಾಗಮಂಡಲದಲ್ಲಿ ವಿಶೇಷ ಪೂಜೆ: ಭಾಗಮಂಡಲದಲ್ಲಿರುವ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ತಾ. ೨೫ರಂದು (ಇಂದು) ಖಂಡಗ್ರಾಸ ಸೂರ್ಯಗ್ರಹಣವು ಸಂಜೆ ೫ ಗಂಟೆ ೧೧ ನಿಮಿಷಕ್ಕೆ ಪ್ರಾರಂಭಗೊAಡು ಸಂಜೆ ೬ ಗಂಟೆ ೨೮ ನಿಮಿಷಕ್ಕೆ ಗ್ರಹಣ ಮೋಕ್ಷವಾಗುತ್ತದೆ.
ಇದರಿಂದ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯಗಳ ರೂಢಿ ಸಂಪ್ರದಾಯದAತೆ ನಡೆಯಲಿರುವ ಪೂಜಾ ವಿಧಿ ವಿಧಾನಗಳ ಪ್ರಯುಕ್ತ ಶ್ರೀ ಭಗಂಡೇಶ್ವರ ದೇವಾಲಯದ ತ್ರಿವೇಣಿ ಸಂಗಮದಲ್ಲಿ
(ಮೊದಲ ಪುಟದಿಂದ) ಬೆಳಗ್ಗೆ ೬ ಗಂಟೆಯಿAದ ಬೆಳಿಗ್ಗೆ ೧೧ ಗಂಟೆಯವರೆಗೆ ಪಿಂಡ ಪ್ರದಾನ ಕಾರ್ಯ ನೆರವೇರಿಸಲಾಗುವುದು.
ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ಭಕ್ತಾದಿಗಳಿಗೆ ಸೇವಾ ಕೈಂಕರ್ಯಗಳು ಬೆಳಿಗ್ಗೆ ೬ ರಿಂದ ಮಧ್ಯಾಹ್ನ ೧೨ ಗಂಟೆಯವರೆಗೆ ನಡೆಸಲಾಗುವುದು. ಗ್ರಾಸ್ತಾಸ್ತ ಖಂಡಗ್ರಾಸ ಸೂರ್ಯ ಗ್ರಹಣದ ಮೋಕ್ಷ ನಂತರ ಶ್ರೀ ಭಗಂಡೇಶ್ವರ ದೇವಾಲಯದಲ್ಲಿ ರಾತ್ರಿ ೭ ಗಂಟೆಯಿAದ ನಿತ್ಯ ಪೂಜೆ ನೆರವೇರಿಸಲಾಗುವುದು.
ಗ್ರಾಸ್ತಾಸ್ತ ಖಂಡಗ್ರಾಸ ಸೂರ್ಯಗ್ರಹಣದ ಪ್ರಯುಕ್ತ
ಶ್ರೀ ತಲಕಾವೇರಿ ದೇವಾಲಯದಲ್ಲಿ ತಾ. ೨೫ ರಂದು (ಇಂದು) ಬೆಳಿಗ್ಗೆ ೬ ಗಂಟೆಯಿAದ ಮಧ್ಯಾಹ್ನ ೨.೩೦ ಗಂಟೆಯವರಗೆ ಭಕ್ತಾದಿಗಳಿಗೆ ಸೇವಾ ಕೈಂಕರ್ಯಗಳನ್ನು ನೆರವೇರಿಸಲಾಗುವುದು. ನಂತರ ಯಾವುದೇ ಸೇವೆಗಳು ಇರುವುದಿಲ್ಲ ಎಂದು ಶ್ರೀ ಭಗಂಡೇಶ್ವರ-ತಲಕಾವೇರಿ ಸಮೂಹ ದೇವಾಲಯಗಳ ಕಾರ್ಯನಿರ್ವ ಹಣಾಧಿಕಾರಿ ಬಿ.ಎಂ. ಕೃಷ್ಣಪ್ಪ ತಿಳಿಸಿದ್ದಾರೆ.
- ಸುನಿಲ್ ಕುಯ್ಯಮುಡಿ