ನಾಪೋಕ್ಲು, ಅ. ೨೪: ಕೊಡವ ಜನಾಂಗದ ಹಕ್ಕುಗಳಿಗಾಗಿ ಹೋರಾಟ ನಡೆಸುವುದು ನಮ್ಮ ಕರ್ತವ್ಯ ಎಂದು ಹೈಕೋರ್ಟಿನ ಹಿರಿಯ ವಕೀಲ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ. ಹೇಳಿದರು. ಇಲ್ಲಿನ ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಸ್ಥಳೀಯ ನಾಲ್‌ನಾಡ್ ಪ್ಲಾಂಟರ್ಸ್ ರಿಕ್ರಿಯೆಷನ್ ಅಸೋಸಿಯೇಷನ್ ವತಿಯಿಂದ ಏರ್ಪಡಿಸಲಾಗಿದ್ದ ದ್ವಿತೀಯ ವರ್ಷದ ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಕ್ಕುಗಳಿಗಾಗಿ ನಾವು ನಡೆಸುವ ಹೋರಾಟದಿಂದ ಇತರರಿಗೆ ತೊಂದರೆ ಆಗಬಾರದು. ಸಂಸ್ಕೃತಿಯ ರಕ್ಷಣೆ ಮಾಡುವ ಜವಾಬ್ದಾರಿ ಸಮುದಾಯದ ಮೇಲಿದೆ. ಸಂಘಗಳು ಬೆಳೆದಷ್ಟು ಸಂಸ್ಕೃತಿಗೆ ಬಲ ಬರುತ್ತದೆ ಎಂದರು.

ಕೋವಿಗಳಿಗೆ ಪೂಜೆ ಸಲ್ಲಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ನಂದಿನೆರವAಡ ಯು. ನಾಚಪ್ಪ ಮಾತನಾಡಿ, ಕೋವಿ ಕೊಡವರ ಧಾರ್ಮಿಕ ಸಂಸ್ಕಾರ. ಇದು ಕೊಡವ ಜನಾಂಗದ ಬದುಕಿನ ಭಾಗವಾಗಿದೆ. ಭಾರತ ಸ್ವಾತಂತ್ರö್ಯ ನಂತರ ಕೊಡವರ ಹಕ್ಕನ್ನು ಕಸಿದುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಸಂಸ್ಕೃತಿ, ಪದ್ಧತಿ ಪರಂಪರೆಗಳನ್ನು ರಕ್ಷಿಸುತ್ತಾ ಬಂದಿರುವ ಕೊಡವ ಸಮುದಾಯ ಸಂವಿಧಾನಬದ್ಧವಾಗಿ

(ಮೊದಲ ಪುಟದಿಂದ) ತನ್ನ ಹಕ್ಕುಗಳಿಗಾಗಿ ಪ್ರತಿಪಾದಿಸುತ್ತಿದೆ. ಬಹು ಸಂಸ್ಕೃತಿಯ ದೇಶದಲ್ಲಿ ನಮ್ಮ ಸಂಸ್ಕೃತಿ ಪದ್ಧತಿಗಳನ್ನು ನಾವು ಕಳೆದುಕೊಳ್ಳಬಾರದು. ಸಿಎನ್‌ಸಿ ಪ್ರತಿ ವರ್ಷ ಡಿಸೆಂಬರ್ ೧೮ಕ್ಕೆ ತೋಕ್‌ನಮ್ಮೆ ಆಚರಿಸುತ್ತದೆ. ಆ ಮೂಲಕ ಕೋವಿ ಹಕ್ಕನ್ನು ಪ್ರತಿಪಾದಿಸುತ್ತಿದೆ. ನಮ್ಮ ಹಕ್ಕುಗಳನ್ನು ಇತರರ ಮುಂದೆ ಸಮರ್ಥವಾಗಿ ಪ್ರತಿಪಾದಿಸಿದರೆ ಮಾತ್ರ ನಮ್ಮ ಹಕ್ಕನ್ನು ಪಡೆದುಕೊಳ್ಳಲು ಸಾಧ್ಯ. ಕೊಡವ ಸಮುದಾಯದ ಪ್ರತಿಯೊಬ್ಬರು ಸಂಸ್ಕೃತಿ ಸಂಪ್ರದಾಯಗಳನ್ನು ಪಾಲಿಸಬೇಕು ಎಂದರು.

ಮುಖ್ಯ ಅತಿಥಿಗಳಾಗಿ ದಿ ತಾಮರ ಕೂರ್ಗ್ ರೆಸಾರ್ಟ್ನ ಸಲಹೆಗಾರ ಪಾಲೆಕಂಡ ಶಾಹಿ ಕರುಂಬಯ್ಯ ತೆಂಗಿನಕಾಯಿಗೆ ಗುಂಡು ಹೊಡೆಯುವುದರ ಮೂಲಕ ಚಾಲನೆ ನೀಡಿದರು.

ಈ ಸಂದರ್ಭ ನಾಪೋಕ್ಲುವಿನ ಕಾಫಿ ಬೆಳೆಗಾರ ಬಿದ್ದಾಟಂಡ ಜೀವನ್ ಕಾರ್ಯಪ್ಪ, ದಾನಿ ಚೀಯಕಪೂವಂಡ ಕಂಬು ನಂಜಪ್ಪ, ಅಸೋಸಿಯೇಷನ್ ಉಪಾಧ್ಯಕ್ಷ ಅರೆಯಡ ರತ್ನಾ ಪೆಮ್ಮಯ್ಯ, ಕಾರ್ಯದರ್ಶಿ ಚೀಯಕಪೂವಂಡ ಎಂ. ಅಪ್ಪಚ್ಚು, ಜಂಟಿ ಕಾರ್ಯದರ್ಶಿ ಕೇಟೋಳಿರ ಹರೀಶ್ ಪೂವಯ್ಯ, ಖಜಾಂಚಿ ಕರವಂಡ ಬೆಲ್ಲು ಬೆಳ್ಯಪ್ಪ, ನಿರ್ದೇಶಕರಾದ ಬೊಳ್ಳಜೆಟ್ಟೀರ ಎಂ. ಸುರೇಶ್, ಅರೆಯಡ ಅಶೋಕ್ ಮುದ್ದಪ್ಪ, ಚೇನಂಡ ಸುರೇಶ್ ನಾಣಯ್ಯ, ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಬಡಕಡ ಸುರೇಶ್ ಬೆಳ್ಳಿಯಪ್ಪ, ಕೇಟೋಳಿರ ಪಿ ವಿನೋದ್, ಕುಂಡಿಯೊಳAಡ ಬೋಪಣ್ಣ. ಕೇಟೋಳಿರ ಶಮ್ಮಿ , ಚೋಕಿರ ಎಸ್. ರೋಷನ್ ಇನ್ನಿತರರು ಉಪಸ್ಥಿತರಿದ್ದರು.

ಚೋಕಿರ ಯಾನ ಚಿನ್ನಪ್ಪ ಪ್ರಾರ್ಥಿಸಿದ ಕಾರ್ಯಕ್ರಮವನ್ನು ಮುಕ್ಕಾಟಿರ ಎಂ. ವಿನಯ್ ನಿರೂಪಿಸಿ ಪ್ಲಾಂಟರ್ಸ್ ಕ್ಲಬ್ ಅಧ್ಯಕ್ಷ ಬಾಚಮಂಡ ಲವ ಚಿನ್ನಪ್ಪ ಸ್ವಾಗತಿಸಿದರು. ನಿರ್ದೇಶಕ ಚೇನಂಡ ಸುರೇಶ್ ನಾಣಯ್ಯ ವಂದಿಸಿದರು.