ಮಡಿಕೇರಿ, ಅ. ೨೫: ಭಾರತ ಸೇರಿದಂತೆ ವಿಶ್ವದ ಕೆಲವೆಡೆ ತಾ.೨೫ ರಂದು ಭಾಗಶಃ ಸೂರ್ಯಗ್ರಹಣ ಗೋಚರಿಸಿತು. ಭಾರತದಲ್ಲಿ ಜಮ್ಮು ಕಾಶ್ಮೀರ, ನವದೆಹಲಿಯಲ್ಲಿ ಸುಮಾರು ಕಾಲು ಭಾಗದಷ್ಟು ಸೂರ್ಯನನ್ನು ಚಂದ್ರ ಆವರಿಸಿದ್ದರೆ,
ಕೊಡಗು ಜಿಲ್ಲೆಯಲ್ಲಿ ಇದಕ್ಕಿಂತ ಕೊಂಚ ಕಡಿಮೆ ಪ್ರಮಾಣದಲ್ಲಿ (ಸುಮಾರು ಶೆ. ೮) ಚಂದ್ರ ಆವರಿಸಿದ್ದು, ಖಗೋಳಾಸಕ್ತರು ಉತ್ಸಾಹದಿಂದ ವೀಕ್ಷಣೆ ನಡೆಸಿದರು. ಗ್ರಹಣ ಸ್ಪರ್ಶಕಾಲ ಸಂಜೆ ೪:೫೨ಕ್ಕೆ ಪ್ರಾರಂಭವಾಗಿದ್ದು ಕೊಡಗಿನಲ್ಲಿ ಸುಮಾರು ೫:೧೫ಕ್ಕೆ ಸೂರ್ಯನ ಬಲಭಾಗವನ್ನು ಚಂದ್ರನು ಆವರಿಸುತ್ತಿದ್ದುದ್ದನ್ನು ಮಡಿಕೇರಿ ಕುಶಾಲನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸೌರ ಕನ್ನಡಕಗಳನ್ನು ಬಳಸಿ ಸಾರ್ವಜನಿಕರು ವೀಕ್ಷಣೆ ಮಾಡಿದರು.