*ಗೋಣಿಕೊಪ್ಪ, ಅ. ೨೩: ವೈವಿಧ್ಯಮಯ ಸಂಸ್ಕöÈತಿಯ ಹಿಂದೂ ರಾಷ್ಟçದಲ್ಲಿ ದೀಪಾವಳಿ ಹಬ್ಬವನ್ನು ವಿವಿಧ ಸಮುದಾಯದವರು ವಿಭಿನ್ನ ರೀತಿಯಲ್ಲಿ ಆಚರಿಸುವ ಮೂಲಕ ನಮ್ಮ ಸಂಸ್ಕöÈತಿ, ಸಂಪ್ರದಾಯವನ್ನು ಎತ್ತಿ ಹಿಡಿಯುತ್ತಾರೆ ಎಂದು ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಚೈತ್ರಾ ಬಿ. ಚೇತನ್ ತಿಳಿಸಿದರು.
ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ‘ನಮ್ಮ ದೇಶ ನಮ್ಮ ಸಂಸ್ಕöÈತಿ’ ಕಾರ್ಯಕ್ರಮದ ಅಂಗವಾಗಿ ಇಲ್ಲಿಯ ಕೊಡಗು ಹಿಂದೂ ಮಲೆಯಾಳಿ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ ದೀಪಾವಳಿ ಆಚರಣೆ ಕಾರ್ಯಕ್ರಮವನ್ನು ಮಣ್ಣಿನ ಹಣತೆ ಹಚ್ಚುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕುಟುಂಬಗಳನ್ನು ಬೆಸೆಯಲು ದೀಪಾವಳಿ ಆಚರಣೆ ಪಾರಂಪರಿಕ ವಾಗಿ ನಡೆಯುತ್ತಿದೆ. ವಿಭಿನ್ನ ಸಮುದಾಯದವರು ವಿವಿಧ ರೀತಿಯಲ್ಲಿ ಹಬ್ಬವನ್ನು ಆಚರಿಸುತ್ತಾರೆ. ಮೂರು ದಿನಗಳು ನಡೆಯುವ ಹಬ್ಬದಲ್ಲಿ ಲಕ್ಷಿ÷್ಮಪೂಜೆ, ಮತ್ತು ಹಿರಿಯರಿಗೆ ಎಡೆ ಇಡುವ ಕಾರ್ಯವನ್ನು ಬಿಳಿಮೊಗ್ಗ ಸಮುದಾಯ ಪ್ರಾಮುಖ್ಯವಾಗಿ ನಡೆಸುತ್ತಾರೆ. ಕೆಲವೆಡೆ ಹಬ್ಬದ ಮೊದಲ ದಿನದ ರಾತ್ರಿ ೧೧ ಗಂಟೆಗೆ ಬೆಟ್ಟ ಹತ್ತಿ ದೇವರಿಗೆ ದೀಪ ಬೆಳಗುವ ಮೂಲಕ ದೀಪಾವಳಿ ಆಚರಣೆ ಮುಂದಾಗುವ ಸ್ಥಳೀಯ ಗ್ರಾಮೀಣ ಸಂಸ್ಕöÈತಿಯನ್ನು ಅಳವಡಿಸಿಕೊಂಡಿದೆ. ಆ ಮಾರ್ಗದಂತೆ ಇತರ ಸಮುದಾಯವರು ಕೂಡ ತನ್ನದೇ ಆಚರಣೆಗಳೊಂದಿಗೆ ದೀಪಾವಳಿಯನ್ನು ಮೂರು ದಿನಗಳು ಆಚರಿಸುತ್ತಾರೆ. ನಮ್ಮ ಸಂಸ್ಕöÈತಿ ಆಚರಣೆಗಳ ಬಗ್ಗೆ ಯುವ ಸಮುದಾಯಕ್ಕೆ ತಿಳಿಯಪಡಿಸುವ ಮಹತ್ವದ ಕಾರ್ಯ ನಡೆಯಬೇಕಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಹಬ್ಬ ಹರಿದಿನಗಳ ಆಚರಣೆ ಪಟ್ಟಣದಲ್ಲಿಯೂ ಸಾಂಪ್ರದಾಯಿಕವಾಗಿ ನಡೆದಾಗ ಮುಂದಿನ ಸಮುದಾಯಕ್ಕೆ ಹಬ್ಬಗಳ ಮಹತ್ವವನ್ನು ಸಾರಬಹುದು ಎಂದು ಹೇಳಿದರು.
ಕನ್ನಡ ಗೌಡ ಜನಾಂಗ ಸಮುದಾಯದ ಪರವಾಗಿ ಉಪಸ್ಥಿತರಿದ್ದ ಹೆಚ್.ಬಿ. ಗಣೇಶ್ ಮಾತನಾಡಿ ದೀಪಾವಳಿಯನ್ನು ಪಾರಂಪರಿಕವಾಗಿ ಸಮುದಾಯ ದವರು ಆಚರಿಸುತ್ತಿದ್ದು, ಮನೆಯನ್ನು ರಂಗೋಲಿಯಿAದ ಅಲಂಕರಿಸಿ ದೀಪಗಳನ್ನು ಬೆಳಗುವ ಮೂಲಕ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತದೆ. ನಂತರ ಲಕ್ಷಿ÷್ಮ ಪೂಜೆ, ಗೋ ಪೂಜೆಗಳನ್ನು ಆಚರಿಸಿ ಸಿಹಿ ಪದಾರ್ಥಗಳನ್ನು ತಯಾರಿಸಿ ಸವಿಯುವ ಮತ್ತು ಹಂಚುವ ಮೂಲಕ ಹಬ್ಬವನ್ನು ಆಚರಿಸುತ್ತೇವೆ ಎಂದು ಹೇಳಿದರು.
ತುಳು ಭಾಷಿಕ ಸಮುದಾಯದ ಆಚರಣೆಯ ಬಗ್ಗೆ ತಿಳಿಸಲು ಮುಖ್ಯ ಅತಿಥಿಗಳಾಗಿದ್ದ ಶೇಖರ್ ಭಂಡಾರಿ ಮಾತನಾಡಿ, ಕರಾವಳಿ ಪ್ರದೇಶದಲ್ಲಿ ತನ್ನದೇ ಆದ ಸಂಪ್ರದಾಯದೊAದಿಗೆ ದೀಪಾವಳಿಯನ್ನು ಆಚರಿಸಲಾಗುತ್ತದೆ. ಮೂರು ದಿನಗಳು ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುವುದು. ಹೊಸ ಬಟ್ಟೆ ತೊಡುವುದರಿಂದ ರಂಗೋಲಿ, ದೀಪಾಲಂಕಾರ ಹೀಗೆ ವಿಭಿನ್ನ ಆಚರಣೆಗಳನ್ನು ಮಾಡಲಾಗುವುದು. ಲಕ್ಷಿ÷್ಮ ಪೂಜೆ, ಗೋ ಪೂಜೆ ಮತ್ತು ಹಿರಿಯರಿಗೆ ಎಡೆಹಿಡುವ ಕಾರ್ಯವನ್ನು ಸಹ ಈ ಸಂದರ್ಭದಲ್ಲಿ ನಡೆಸಲಾಗುವುದು ಎಂದು ಹೇಳಿದರು.
ದೈವಜ್ಞ ಬ್ರಾಹ್ಮಹಣರ ಸಮುದಾಯದ ಪರವಾಗಿ ಎಂ.ಜಿ. ಮೋಹನ್ ಉಪಸ್ಥಿತರಿದ್ದು, ಸಮುದಾಯದವರು ಆಚರಿಸುವ ದೀಪಾವಳಿಯ ಬಗ್ಗೆ ತಿಳಿಸಿದರು. ವಿಶೇಷವಾಗಿ ಸೌತೆಕಾಯಿ ಕಡುಬು ತಯಾರಿಸಿ ದೇವರಿಗೆ ನೈವೇದ್ಯ ಅರ್ಪಿಸುವುದು, ಮಹಾಲಕ್ಷಿ÷್ಮ ಪೂಜೆ ಮತ್ತು ಗೋವುಗಳನ್ನು ಶೃಂಗರಿಸಿ ಪೂಜಿಸಿ ತಯಾರಿಸಿದ ವಿಶೇಷ ಖಾದ್ಯಗಳನ್ನು ಗೋವುಗಳಿಗೆ ಭಕ್ಷಿಸಲು ನೀಡುವ ಮೂಲಕ ಪಾರಂಪರಿಕವಾಗಿ ಆಚರಣೆಯನ್ನು ನಡೆಸುತ್ತಿರುವುದಾಗಿ ಮಾಹಿತಿ ಒದಗಿಸಿದರು.
ವಿಷ್ಣು ಸಮಾಜ ಆಚರಣೆಯ ಬಗ್ಗೆ ತಿಳಿಸಿದ ಜಿ.ಡಿ. ಹಿಮತ್ ರಾಮ್ ಅವರು ದೀಪಾವಳಿಯಲ್ಲಿ ಮಹಾಲಕ್ಷಿ÷್ಮಯನ್ನು ವೈಭವೀಕರಣ ವಾಗಿ ಪೂಜಿಸುವ ಸಂಪ್ರದಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಕೊಡಗಿನಲ್ಲಿರುವ ವಿಷ್ಣು ಸಮಾಜದ ಸಮುದಾಯವರು, ಕೊಡಗಿನ ಕಾವೇರಿ ಮಾತೆಯನ್ನು ಲಕ್ಷಿ÷್ಮಯಾಗಿ ಪೂಜಿಸುವ ಆಚರಣೆಯನ್ನು ಕೂಡ ಹೊಂದಲಾಗಿದೆ ಎಂದು ಹೇಳಿದರು.
ತೆಲುಗು ಸಮುದಾಯದಲ್ಲಿ ದೀಪಾವಳಿ ಆಚರಿಸುವ ಮಾಹಿತಿಯನ್ನು ಉದ್ಯಮಿ ನಾಗಿರೆಡ್ಡಿ ಒದಗಿಸಿ ಆಂದ್ರ ತೆಲುಗು ರಾಜ್ಯದಲ್ಲಿ ದೀಪಾವಳಿಯನ್ನು ಒಂದು ರೀತಿಯಲ್ಲಿ ಆಚರಿಸಿದರೆ ಕರ್ನಾಟಕದಲ್ಲಿ ಮತ್ತೊಂದು ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿದೆ ಎಂದು ಹೇಳಿದರು.
ಪೊನ್ನಂಪೇಟೆ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ದೀಪಾವಳಿ ಆಚರಣೆಯ ಕಾರ್ಯಕ್ರಮದ ಸಂಚಾಲಕ ಚಿಮ್ಮಣಮಾಡ ದರ್ಶನ್ ದೇವಯ್ಯ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಎನ್.ಎನ್. ದಿನೇಶ್, ಕಾರ್ಯದರ್ಶಿ ಮಂಡೇಡ ಅಶೋಕ್, ಖಜಾಂಚಿ ವಿ.ವಿ. ಅರುಣ್ ಕುಮಾರ್, ನಿರ್ದೇಶಕ ಜಗದೀಶ್ ಜೋಡುಬೀಟಿ, ಸದಸ್ಯ ಟಿ.ಆರ್. ಮನೋಜ್ಕುಮಾರ್ ಇದ್ದರು.