ಮುಳ್ಳೂರು, ಅ. ೨೩: ಬೆಳಕಿನ ಹಬ್ಬ ದೀಪಾವಳಿ ಹಬ್ಬವನ್ನು ಪಟಾಕಿ ಹೊಡೆದು ಶಬ್ದಮಾಲಿನ್ಯ ಮತ್ತು ಪರಿಸರ ಮಾಲಿನ್ಯಗೊಳಿಸಿದರೆ ಮಾತ್ರ ದೀಪಾವಳಿ ಹಬ್ಬ ಸಂಭ್ರಮಗೊಳ್ಳುತ್ತದೆ ಎಂಬ ಭ್ರಮೆ ಎಲ್ಲಾರಲ್ಲೂ ಇದೆ. ಅಜ್ಞಾನ ಎಂಬ ಕತ್ತಲಿನಿಂದ ಜ್ಞಾನದ ಬೆಳಕಿಗೆ ಕೊಂಡೊಯ್ಯುವ ದೀಪಾವಳಿ ಹಬ್ಬವನ್ನು ಪಟಾಕಿ ಮತ್ತು ಹಣವನ್ನು ಸುಡದೆ ಪರಿಸರ ಸ್ನೇಹಿ ಹಸಿರು ಜ್ಞಾನದ ದೀಪಾವಳಿ ಹಬ್ಬವನ್ನು ಸಂಭ್ರದಿAದ ಆಚರಿಸಲು ಮುಳ್ಳೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕಾರ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡರು.

ಜ್ಞಾನದ ದೇಗುಲದಲ್ಲಿ ಬೆಳಕು ಪ್ರಜ್ವಲಿಸುವ ಸನ್ನಿವೇಶದಲ್ಲಿ ಬಣ್ಣಬಣ್ಣದ ಬಟ್ಟೆತೊಟ್ಟ ಶಾಲೆಯ ಚಿಣ್ಣರು ಬಣ್ಣಬಣ್ಣದ ದೀಪಗಳನ್ನು ಹಚ್ಚಿ ಸಂಭ್ರಮ ಪಟ್ಟರಲ್ಲದೆ ಪ್ರತಿಯೊಬ್ಬ ಚಿಣ್ಣರು ನಾನು ಈ ವರ್ಷ ದೀಪಾವಳಿ ಹಬ್ಬದಲ್ಲಿ ಪಟಾಕಿ ಹೊಡೆಯುವುದಿಲ್ಲ ಎಂಬ ಪ್ರತಿಜ್ಞಾವಿಧಿ ಸ್ವೀಕರಿಸಿ ಬೆಳಕ್ಕೆ ಮೌಲ್ಯಯುತ ಶಬ್ದವಲ್ಲ ಎಂಬ ಸಂದೇಶವನ್ನು ಸಾರಿದರು. ಶಾಲೆಯ ಕ್ರಿಯಾಶೀಲ ಮುಖ್ಯ ಶಿಕ್ಷಕ ಸಿ.ಎಸ್.ಸತೀಶ್ ಅವರ ಮಾಗದರ್ಶನದಲ್ಲಿ ಪರಿಸರ ಸ್ನೇಹಿ ಹಸಿರು ಜ್ಞಾನ ದೀಪಾವಳಿಯನ್ನು ಸಮಾಜಕ್ಕೊಂದು ಸಂದೇಶವನ್ನು ಸಾರುವಂತೆ ಅರ್ಥಪೂರ್ಣವಾಗಿ ಆಚರಿಸಿದರು. ಶಾಲೆಯ ವಿದ್ಯಾರ್ಥಿಗಳು ಈ ಬಾರಿ ನಾವು ಪಟಾಕಿಗೆ ಖರ್ಚು ಮಾಡುವ ಹಣವನ್ನು ಶಾಲಾ ಬ್ಯಾಂಕ್‌ಗೆ ಹಾಕಿ ಉಳಿತಾಯ ಮಾಡುತ್ತೇವೆ ಮತ್ತೆ ಕೆಲವು ವಿದ್ಯಾರ್ಥಿಗಳು ಅದೆ ಹಣದಿಂದ ಪುಸ್ತಕಗಳನ್ನು ಖರೀದಿಸಿ ಬಡವರಿಗೆ ಕೊಡುತ್ತೇವೆ, ವೃದ್ಧರಿಗೆ, ಅನಾಥರಗೆ ಕೊಡುತ್ತೇವೆ, ಹೊಸ ಬಟ್ಟೆ ಖರಿದಿಸುತ್ತೇವೆ ಎಂದು ಪ್ರತಿಜ್ಞಾವಿಧಿ ಸ್ವೀಕರಿಸಿದರು. ಶಾಲೆಯ ಅತಿಥಿ ಶಿಕ್ಷಕಿ ಎಂ.ಆರ್.ನವ್ಯ ಪಟಾಕಿ ಹೊಡೆಯುವದರಿಂದ ಜನರಿಗೆ ಆಗುವ ಅನಾಹುತ, ಪರಿಸರ, ಶಬ್ದ ಮಾಲಿನ್ಯ ಮುಂತಾದ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. -ಭಾಸ್ಕರ್ ಮುಳ್ಳೂರು