*ಗೋಣಿಕೊಪ್ಪ, ಅ. ೨೩: ಬೆಂಗಳೂರಿನಲ್ಲಿ ನಡೆದ ಫ್ಯಾಷನ್ ಶೋನಲ್ಲಿ ವಾಲ್ ಆಫ್ ಫ್ರೇಮ್ ಬ್ಯೂಟಿ ಕಾಂಟೆಸ್ಟ್ನಲ್ಲಿ ಮಿಸೆಸ್ ಸೌತ್ ಇಂಡಿಯಾ ಸರ್ಧೆಯಲ್ಲಿ ಭಾಗವಹಿಸಿ ಬೆಕ್ಕೆಸೊಡ್ಲೂರು ಗ್ರಾಮದ ಮಲ್ಲಮಾಡ ಶ್ಯಾಮಲಾ ಸುನೀಲ್ ಮತ್ತು ಹೈಸೊಡ್ಲೂರು ಬಾನಂಗಡ ಭಾಗ್ಯ ಪ್ರದೀಪ್ ಅವರು ವಿಜೇತರಾಗಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ಕೊಡಗಿನಿಂದ ಭಾಗವಹಿಸಿ ಗಮನ ಸೆಳೆದ ಇವರು ಗೋವಾದಲ್ಲಿ ನಡೆಯುವ ಮಿಸ್ಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.