ಸೋಮವಾರಪೇಟೆ, ಅ. ೨೩: ಪಾಕಿಸ್ತಾನದ ತಂಡದ ವಿರುದ್ಧ ಭಾರತ ಕ್ರಿಕೆಟ್ ತಂಡ ಗೆಲುವು ಸಾಧಿಸಿದ ಹಿನ್ನೆಲೆ ಸೋಮವಾರಪೇಟೆ ಪಟ್ಟಣದಲ್ಲಿ ಕ್ರಿಕೆಟ್ ಪ್ರೇಮಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ಸರ್ಕಲ್‌ನಲ್ಲಿ ಪಟಾಕಿ ಸಿಡಿಸಿ ಭಾರತದ ಪರ ಘೋಷಣೆ ಮೊಳಗಿಸಿದರು.

ಕ್ರೀಡಾಪ್ರೇಮಿಗಳಾದ ಬಿ.ಆರ್. ಮಹೇಶ್, ಪಂದ್ಯAಡ ಶರತ್, ಸಚಿನ್, ನಂಜುAಡ, ವಿಕಾಸ್, ಪ್ರಸನ್ನ ನಾಯರ್ ಸೇರಿದಂತೆ ಇತರರು ಇದ್ದರು.