ಮಡಿಕೇರಿ. ಅ. ೨೩: ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಆಯುರ್ವೇದ ಪ್ರಮುಖ ಪಾತ್ರ ವಹಿಸುತ್ತಿದ್ದು, ಭಾರತದಲ್ಲಿ ಪ್ರಧಾನಿ ಮೋದಿಯವರ ಪ್ರಯತ್ನದಿಂದಾಗಿ ಆಯುರ್ವೇದದ ಅಗತ್ಯತೆ ಕೆಲವು ವರ್ಷಗಳಿಂದ ಹೆಚ್ಚಿನ ರೀತಿಯಲ್ಲಿ ಜನರಿಗೆ ಮನವರಿಕೆ ಯಾಗಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯಪಟ್ಟಿದ್ದಾರೆ.

ನೀಮಾ ಕೊಡಗು ಘಟಕ, ಕರ್ನಾಟಕ ಸರ್ಕಾರ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಯುಷ್ ಇಲಾಖೆ ಆರೋಗ್ಯ ಮತ್ತು ಕುಟಂಬ ಕಲ್ಯಾಣ ಇಲಾಖೆ, ರೆಡ್ ಕ್ರಾಸ್ ಸಂಸ್ಥೆ, ಮಡಿಕೇರಿ ರೋಟರಿ ವುಡ್ಸ್, ಕೊಡಗು ಹವ್ಯಕ ವಲಯ, ಬಿ.ಜೆ.ಪಿ ಯುವ ಮೋರ್ಚಾ, ಸಿದ್ದಾಪುರ ಕೇಸರಿ ಯೂತ್ ಮೂವ್‌ಮೆಂಟ್, ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಹಾಗೂ ಕೊಡಗು ಪತ್ರಕರ್ತರ ಸಂಘ (ರಿ) ನ ಸಂಯುಕ್ತಾಶ್ರಯದಲ್ಲಿ ನಗರದ ಕೆಳಗಿನ ಗೌಡ ಸಮಾಜದಲ್ಲಿ ಆಯುರ್ವೇದ ದಿನಾಚರಣೆ ಆಯೋಜಿಸಲ್ಪಟ್ಟಿತ್ತು.

ನಗರದ ಕೆಳಗಿನ ಗೌಡ ಸಮಾಜದಲ್ಲಿ ಆಯುರ್ವೇದ ದಿನಾಚರಣೆ ಅಂಗವಾಗಿ ಧನ್ವಂತರಿ ಯಾಗದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಭಾ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಅಲೋಪಥಿ ಔಷಧಿಯೊಂದಿಗೆ ಆಯುರ್ವೇದವನ್ನು ನಾವು ಅಳವಡಿಸಿಕೊಂಡಲ್ಲಿ ಆರೋಗ್ಯವಂತ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಹಾಗೂ ಕೊಡಗು ಪತ್ರಕರ್ತರ ಸಂಘ (ರಿ) ನ ಸಂಯುಕ್ತಾಶ್ರಯದಲ್ಲಿ ನಗರದ ಕೆಳಗಿನ ಗೌಡ ಸಮಾಜದಲ್ಲಿ ಆಯುರ್ವೇದ ದಿನಾಚರಣೆ ಆಯೋಜಿಸಲ್ಪಟ್ಟಿತ್ತು.

ನಗರದ ಕೆಳಗಿನ ಗೌಡ ಸಮಾಜದಲ್ಲಿ ಆಯುರ್ವೇದ ದಿನಾಚರಣೆ ಅಂಗವಾಗಿ ಧನ್ವಂತರಿ ಯಾಗದ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಭಾ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಅಲೋಪಥಿ ಔಷಧಿಯೊಂದಿಗೆ ಆಯುರ್ವೇದವನ್ನು ನಾವು ಅಳವಡಿಸಿಕೊಂಡಲ್ಲಿ ಆರೋಗ್ಯವಂತ ಪಟ್ಟರಲ್ಲದೇ, ನಾಟಿ ವೈದರ ಸಮಾಜಮುಖಿ ಕಾರ್ಯವನ್ನು ಶ್ಲಾಘಿಸಿದರು.

ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ ಸುಳ್ಯದ ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ್ ಮಾತನಾಡಿ ರೋಗಿಗಳಿಗೆ ಕೌಟುಂಬಿಕ ಆರೋಗ್ಯದ ಬಗ್ಗೆ ವೈದ್ಯರು ಮಾಹಿತಿ ನೀಡುವ ಮೂಲಕ ಹೆಚ್ಚಿನ ಕಾಳಜಿ ತೊರಬೇಕೆಂದರು. ಹಿರಿಯರ ಕಾಲದಲ್ಲಿ ಆಯುರ್ವೇದ ವನ್ನು ದಿನನಿತ್ಯ ಬಳಕೆಯಲ್ಲಿ ಅಳವಡಿಸಿಕೊಂಡಿದ್ದರು. ಮನೆಯಲ್ಲೇ ಆಯುರ್ವೇದ ಔಷಧಿಯನ್ನು ಸ್ವತಃ ಸಿದ್ದಪಡಿಸಿಕೊಂಡು ರೋಗ ಉಪಶಮನ ಮಾಡಿಕೊಳ್ಳುತ್ತಿದ್ದರು.

ಕೌಟುಂಬಿಕ, ಪ್ರಾಕೃತಿಕ, ದೈಹಿಕ, ಮಾನಸಿP ಆರೋಗ್ಯವು ಆಯುರ್ವೇದದ ಪ್ರಮುಖ ಅಂಶವಾಗಿದೆ. ಕೈ ತೋಟದಿಂದ ಅಡುಗೆ ಮನೆಯವರೆಗೆ ದಿನನಿತ್ಯದ ಪರಿಪಾಠದಲ್ಲಿ

(ಮೊದಲ ಪುಟದಿಂದ) ಆಯುರ್ವೇದ ಅಡಗಿದೆ ಎಂದರು.

ಮಡಿಕೇರಿ ನಗರಸಭಾ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಮಾತನಾಡಿ, ಆಯುರ್ವೇದ ದಿನಾಚರಣೆ ಮೂಲಕ ಆಯುರ್ವೇ ದದ ಆದಿ ದೇವನಾದ ಶ್ರೀ ಧನ್ವಂತರಿಯ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗಿದೆ. ಧನ್ವಂತರಿ ನಾಮವು ನಮ್ಮ ಮನಸ್ಸಿನ ಆರೋಗ್ಯವನ್ನು ಸ್ವಾಸ್ಥö್ಯವಾಗಿಡುವಂತೆ ಮಾಡುತ್ತದೆ. ನಮ್ಮ ಹಿರಿಯರು ನೆಗಡಿ, ಕೆಮ್ಮು ಮುಂತಾದವುಗಳಿಗೆ ಮನೆಯಲ್ಲೇ ಆಯುರ್ವೇದ ಔಷಧಿಯನ್ನು ಸಿದ್ದಪಡಿಸಿ ಉಪಶಮನ ಮಾಡಿಕೊಳ್ಳುತ್ತಿದ್ದರು ಎಂದರು.

ಸಮಾರಂಭದಲ್ಲಿ ನೀಮಾ ಕೊಡಗು ಸಂಸ್ಥೆಯ ಅಧ್ಯಕ್ಷ ಡಾ. ಎ.ಆರ್. ರಾಜಾರಾಂ, ನೀಮಾ ಸಂಸ್ಥೆಯ ಪದಾಧಿಕಾರಿಗಳು , ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ರೇಣುಕಾದೇವಿ, ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾಧ್ಯಕ್ಷ ಬಿ.ಕೆ. ರವೀಂದ್ರ ರೈ, ಕಾರ್ಯದರ್ಶಿ ಮುರುಳಿ, ರೋಟರಿ ವುಡ್ಸ್ ಕಾರ್ಯದರ್ಶಿ ಕೆ.ವಸಂತ್ ಕುಮಾರ್, ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಅಧ್ಯಕ್ಷ ಅಂಬೆಕಲ್ ಜೀವನ್, ಕೊಡಗು ಪತ್ರಕರ್ತರ ಸಂಘದ ಕ್ಷೇಮಾಭಿವೃದ್ಧಿ ಸಮಿತಿಯ ಅಧ್ಯಕ್ಷ ಹೆಚ್. ಆರ್. ಹರೀಶ್‌ಕುಮಾರ್, ಸಿದ್ದಾಪುರ ಕೇಸರಿ ಯೂತ್ ಮೂವ್‌ಮೆಂಟ್‌ನ ಅಧ್ಯಕ್ಷ ಪ್ರವೀಣ್ ಉಪಸ್ಥಿತರಿದ್ದರು. ಡಾ.ಶುಭಾ ಕೆ.ಜಿ. ಪ್ರಾರ್ಥಿಸಿದರು. ಡಾ. ಸುಬ್ರಮಣ್ಯ ರಾವ್ ವಂದಿಸಿದರು.

ವಿವಿಧ ಆರೋಗ್ಯ ಸಮಸ್ಯೆಗಳಿಗೆ ನುರಿತ ಆಯುರ್ವೇದ ತಜ್ಞರಿಂದ ತಪಾಸಣೆ ಮತ್ತು ಸಲಹೆ ನೀಡಲಾ ಯಿತು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದು ಕೊಂಡರು. ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ದೇಶದ ೭೫ ಜಾಗಗಳಲ್ಲಿ ನಡೆಯುವಂತೆ ಕೊಡಗಿನಲ್ಲಿಯೂ ರಕ್ತದಾನ ಶಿಬಿರವನ್ನು ಏರ್ಪಡಿಸಲಾ ಗಿತ್ತು. ಆಯುರ್ವೇದದ ಮಹತ್ವದ ಬಗ್ಗೆ ವಿವಿಧ ತಜ್ಞರಿಂದ ಉಪನ್ಯಾಸ ಜರುಗಿತು. ವಿಶೇಷ ಸಂಚಿಕೆಯನ್ನೂ ಬಿಡುಗಡೆಗೊಳಿಸಲಾಯಿತು.