ತಾ. ೨೫ರ ಮಂಗಳವಾರದAದು ಭಾಗಶಃ ಸೂರ್ಯಗ್ರಹಣ ಸಂಭವಿಸಲಿದ್ದು, ವಿಶ್ವದ ಕೆಲವು ದೇಶಗಳಲ್ಲದೆ ಭಾರತದಲ್ಲೂ ಗೋಚರಿಸಲಿದೆ. ಈ ಬಾರಿಯ ಸೂರ್ಯಗ್ರಹಣವು ಸೂರ್ಯಾಸ್ತ ವೇಳೆ ಸಂಭವಿಸುತ್ತಿರುವುದರಿAದ ಇದನ್ನು ಗ್ರಸ್ತಾಸ್ತ ಸೂರ್ಯಗ್ರಹಣ ಎಂದು ಕರೆಯಲಾಗುತ್ತದೆ. ಅಂದು ಸಂಜೆ ೪.೫೨ಕ್ಕೆ ಗ್ರಹಣ ಸ್ಪರ್ಶ ಕಾಲ ಪ್ರಾರಂಭವಾಗಲಿದೆ - ಅಂದರೆ ಭೂಮಿ ಹಾಗೂ ಸೂರ್ಯನ ನಡುವೆ ಚಂದ್ರನು ಹಾದುಹೋಗಲು ಪ್ರಾರಂಭಿಸುತ್ತಾನೆ. ಗ್ರಹಣ ಮಧ್ಯಕಾಲ ೫:೫೧ ಕ್ಕೆ ಸಂಭವಿಸಲಿದ್ದು, ಈ ಸಮಯದಲ್ಲಿ ಚಿತ್ರದಲ್ಲಿರುವಂತೆ ಗ್ರಹಣ ಗೋಚರಿಸಲಿದೆ. ಮೋಕ್ಷಕಾಲ - ಅಂದರೆ ಗ್ರಹಣ ಮುಗಿಯುವ ಕಾಲ ೬:೩೯ಕ್ಕೆ ಸಂಭವಿಸಲಿದೆಯಾದರೂ ಭಾರತದ ಅಧಿಕೃತ ಸಮಯ ಪ್ರಕಾರ ತಾ.೨೫ ರಂದು ೬:೦೬ಕ್ಕೆ ಸೂರ್ಯಾಸ್ತ ವಾಗುವುದರಿಂದ (ಭಾರತದ ಪಶ್ಚಿಮ ಭಾಗಗಳಲ್ಲಿ, ಗುಜರಾತ್ನಂತಹ ರಾಜ್ಯಗಳಲ್ಲಿ ಸೂರ್ಯಾಸ್ತವಾಗಲು ಇನ್ನೂ ಕೆಲ ಸಮಯ ಬೇಕಾಗುತ್ತದೆ) ಗ್ರಹಣವು ಅಲ್ಪಾವಧಿಯಲ್ಲಿಯೇ ಕಳೆದುಹೋಗಲಿದೆ.
ಈ ವರ್ಷದ ಕೊನೆಯ ಸೂರ್ಯಗ್ರಹಣ ಇದಾಗಿದೆ. ೨೭ ವರ್ಷಗಳ ನಂತರ, ಕಾಕತಾಳೀಯ ವೆಂಬAತೆ ದೀಪಾವಳಿಯ ನಡುವಿನ ಅಮಾವಾಸ್ಯೆಯ ದಿನ ಸೂರ್ಯಗ್ರಹಣ ಸಂಭವಿಸಲಿದೆ. ತಾ.೨೪ ನರಕ ಚತುರ್ದಶಿ, ತಾ. ೨೬ ಬಲಿಪಾಡ್ಯಮಿ. ಈ ನಡುವಿನ ತಾ. ೨೫ ರ ಅಮಾವಾಸ್ಯೆಯ ಸಂಜೆ ಸೂರ್ಯನಿಗೆ ಕೇತು ಗ್ರಹಣವಾಗುತ್ತದೆ. ಈ ದಿನ ಸುಮಾರು ೪ ಗ್ರಹಗಳು ಅಂದರೆ, ಚಂದ್ರ, ಸೂರ್ಯ, ಶುಕ್ರ ಮತ್ತು ಕೇತು ತುಲಾ ರಾಶಿ ಒಟ್ಟಿಗೆ ಇರಲಿದೆ. ಇದು ಎಲ್ಲಾ ರಾಶಿಚಕ್ರ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ.
ಭಾರತದ ಪೂರ್ವ ರಾಜ್ಯಗಳಲ್ಲಿ ಗ್ರಹಣ ಮಧ್ಯಕಾಲದ ಸಂದರ್ಭ ಸೂಯಾಸ್ತವಾಗಲಿರುವುದರಿಂದ ಇಲ್ಲಿ ಗ್ರಹಣ ವೀಕ್ಷಣೆ ಅಸಾಧ್ಯ. ಉಳಿದಂತೆ ಉತ್ತರ ಭಾರತ ಹಾಗೂ ಪಶ್ಚಿಮ ಭಾರತಗಳಲ್ಲಿ ಗ್ರಹಣವನ್ನು ಸುಲಭವಾಗಿ ವೀಕ್ಷಿಸಬಹುದಾಗಿದೆ. ಕೊಡಗು ಸೇರಿದಂತೆ ಭಾರತದ ಇತರ ದಕ್ಷಿಣ ಭಾಗಗಳಲ್ಲಿ ಸ್ಪಷ್ಟ ಗೋಚರ ಸಾಧ್ಯವಾಗದಿದ್ದರೂ ಸೂಕ್ಷö್ಮವಾಗಿ ಗಮನಿಸಿದರೆ ವೀಕ್ಷಣೆ ಸಾಧ್ಯವಾಗಲಿದೆ.
(ಮೊದಲ ಪುಟದಿಂದ)
ಸ್ವಾತಿ ನಕ್ಷತ್ರದಲ್ಲಿ ಗ್ರಹಣ
ಸೂರ್ಯನಿಗೆ ಕೇತು ಗ್ರಹಣವು ಸ್ವಾತಿ ನಕ್ಷತ್ರದಲ್ಲಿ ಸಂಭವಿಸಲಿದೆ. ಸ್ವಾತಿ, ಚಿತ್ರಾ, ವಿಶಾಖ, ಆರ್ದ್ರ, ಶತಭಿಷ ನಕ್ಷತ್ರದವರಿಗೆ ದೋಷವಿದೆ. ಅಲ್ಲದೆ, ತುಲಾ, ಮೀನ, ವೃಶ್ಚಿಕ, ಕರ್ಕಾಟಕ ರಾಶಿಯವರಿಗೂ ದೋಷವಿದೆ. ಈ ನಕ್ಷತ್ರ- ರಾಶಿಯವರು ಗ್ರಹಣದ ಬಳಿಕ ಸ್ನಾನಾನಂತರ ತಮ್ಮ ಮನೆಗಳಲ್ಲಿ ದೀಪ ಬೆಳಗಿ ತಮ್ಮ ಇಷ್ಟ ದೈವವನ್ನು ಪ್ರಾರ್ಥಿಸಿದರೆ ಒಳಿತಾಗುತ್ತದೆ. ಅವಕಾಶ ಮಾಡಿಕೊಂಡು ಸನಿಹದ ದೇಗುಲಗಳಿಗೆ ತೆರಳಿ ಪ್ರಾರ್ಥನೆ, ಅರ್ಚಕರಿಂದ ಪೂಜಾದಿಗಳನ್ನು ನೆರವೇರಿಸಿಕೊಳ್ಳಬಹುದು. ಅಂದು ಸಂಜೆ ಸಾಧ್ಯವಾಗದಿದ್ದರೆ ಮರು ದಿನ ಅಂದರೆ ಬುಧವಾರ ಬಲಿಪಾಡ್ಯಮಿ ಹಬ್ಬದ ದಿನವೂ ಈ ಕಾರ್ಯವನ್ನು ನೆರವೇರಿಸಬಹುದು.
ಸಾಮಾನ್ಯವಾಗಿ ಗ್ರಹಣ ಕಾಲದಲ್ಲಿ ಉದರವು ಖಾಲಿಯಿದ್ದರೆ ಆರೋಗ್ಯದ ದೃಷ್ಟಿಯಿಂದಲೂ ಒಳಿತು, ಧಾರ್ಮಿಕ ಮಾರ್ಗದರ್ಶನದ ಅನ್ವಯವೂ ಒಳಿತು. ಈ ಹಿನ್ನೆಲೆಯಲ್ಲಿ, ಮಂಗಳವಾರ ಮ. ೧೨ ಗಂಟೆೆ ಒಳಗೆ ಲಘು ಉಪಹಾರ ಸೇವನೆ ಉತ್ತಮ. ಬಳಿಕ ಗ್ರಹಣದ ಮೋಕ್ಷ ಕಾಲವಾದ ಅಂದು ಸಂಜೆÀ ೬.೩೯ರ ಬಳಿಕ ಸ್ನಾನ ಮಾಡಿ ದೈವೀ ಪ್ರಾರ್ಥನಾನಂತರ ಯಾವದೇ ಆಹಾರ ಸೇವಿಸಿದರೆ ಉತ್ತರೋತ್ತರ ಅಭಿವೃದ್ಧಿ, ಮಾನಸಿಕ ನೆಮ್ಮದಿ ಲಭ್ಯ.
ಗ್ರಹಣದ ಸಮಯದಲ್ಲಿ ಯಾವುದೇ ಆಹಾರ ಸೇವಿಸಬಾರದು. ಅಲ್ಲದೆ, ಗ್ರಹಣದ ಪರಿಣಾಮವನ್ನು ತಡೆಗಟ್ಟಲು ದಬೆÉð ಹುಲ್ಲು ಅಥವಾ ತುಳಸಿ ಎಲೆಗಳನ್ನು ತಿನ್ನಲು ಸಿದ್ಧಪಡಿಸಿದ ಆಹಾರ ಮತ್ತು ನೀರಿನಲ್ಲಿ ಹಾಕಲಾಗುತ್ತದೆ. ಹಣ್ಣು ಹಂಪಲು, ಕುಂಕುಮ ಇತ್ಯಾದಿ ಪೂಜಾದಿ ವಸ್ತುಗಳ ಮೇಲೂ ದರ್ಭೆ ಅಥವಾ ತುಳಸಿ ದಳವನ್ನು ಹಾಕಬಹುದು. ಗ್ರಹಣ ಮುಗಿದ ನಂತರ ಮೈಯಲ್ಲಿ ಧರಿಸಿದ್ದ ಬಟ್ಟ್ಟೆಯನ್ನು ಒಗೆಯಲು ಹಾಕಿ ಸ್ನಾನ ಮಾಡಿ ಒಗೆದÀ ಬಟ್ಟೆಯನ್ನು ಬದಲಾಯಿಸಿಕೊಂಡರೆ ಉತ್ತಮ. ಗ್ರಹಣ ಸಂದರ್ಭದಲ್ಲಿ ಉತ್ತಮ ವಿಚಾರಗಳ ಚಿಂತನೆ, ಧ್ಯಾನ ಇತ್ಯಾದಿ ಮಾಡಿದರೆ ಸಿದ್ಧಿಸುತ್ತದೆ ಎನ್ನುವ ನಂಬಿಕೆಯಿದೆ.
ಗ್ರಹಣಕಾಲದಲ್ಲಿ ಏಕೆ ನೇರವಾಗಿ ಸೂರ್ಯನನ್ನು ನೋಡಬಾರದು..?
ಗ್ರಹಣವಲ್ಲದ ಸಮಯದಲ್ಲೂ ಸೂರ್ಯನನ್ನು ನೇರವಾಗಿ ನೋಡುವುದು ಕಣ್ಣಿಗೆ ಹಾನಿಕರ. ಸೂರ್ಯನನ್ನು ನೋಡಿದಾಕ್ಷಣ ನಮ್ಮ ಕಣ್ಣಿನಲ್ಲಿರುವ ಅಕ್ಷಿಪಟಲವು (ಠಿuಠಿiಟ) ಕಡಿಮೆ ಬೆಳಕು ಕಣ್ಣಿಗೆ ಬೀಳುವಂತೆ ತನ್ನ ಗಾತ್ರದಲ್ಲಿ ಬದಲಾವಣೆ ಮಾಡಿ ಸರಿಹೊಂದಿಸಿಕೊಳ್ಳುತ್ತದೆ. ಇದೇ ಅಕ್ಷಿಪಟಲ ರಾತ್ರಿ ವೇಳೆ ಸುತ್ತಮುತ್ತಲಿನಲ್ಲಿ ಕಡಿಮೆ ಬೆಳಕು ಇರುವ ಸಂದರ್ಭ ತನ್ನ ಗಾತ್ರವನ್ನು ಹೆಚ್ಚಿಸಿ ನಮ್ಮ ಸುತ್ತಮುತ್ತಲಿನಿಂದ ಹೆಚ್ಚು ಬೆಳಕನ್ನು ಗ್ರಹಿಸಲು ಪ್ರಯತ್ನಿಸಿ ವೀಕ್ಷಣೆಗೆ ಸಹಕರಿಸುತ್ತದೆ.
ಸೂರ್ಯಗ್ರಹಣ ಸಂಭವಿಸುವಾಗ ಚಂದ್ರ, ಸೂರ್ಯನಿಗೆ ಅಡ್ಡ ಬರುವುದರಿಂದ ಸೂರ್ಯನ ಬೆಳಕಿನ ಪ್ರಮಾಣವು ಕೊಂಚ ಕಡಿಮೆಯಾಗುತ್ತಾದರೂ, ಈ ಕೊಂಚ ಬೆಳಕೂ ನಮ್ಮ ಕಣ್ಣಿಗೆ ಹಾನಿಕರ. ಆದರೆ ನಮ್ಮ ಕಣ್ಣಿನ ಅಕ್ಷಿಪಟಲವು ಬೆಳಕು ಕಡಿಮೆ ಇದೆ ಎಂಬ ಕಾರಣ ತನ್ನ ಗಾತ್ರವನ್ನು ಬದಲಾಯಿಸಿ ಕಡಿಮೆ ಬೆಳಕು ಗ್ರಹಿಸುವ ಯಾವುದೇ ಪ್ರಯತ್ನ ನಡೆಸದೆ ಗೊಂದಲದಲ್ಲಿ ಸಿಲುಕುತ್ತದೆ.
ಇಂತಹ ಸಂದರ್ಭದಲ್ಲಿ ನಮ್ಮ ಕಣ್ಣಿಗೆ ಅತಿಹೆಚ್ಚು ಬೆಳಕು ನುಸುಳಿ ಅಂಧತ್ವ ಸಂಭವಿಸುವ ಸನ್ನಿವೇಶಗಳು ಹೆಚ್ಚು. ಆದ್ದರಿಂದ ಗ್ರಹಣ ವೀಕ್ಷಿಸುವಾಗ ‘ಸೋಲಾರ್ ಗ್ಲಾಸಸ್’ ಕಡ್ಡಾಯವಾಗಿ ಬಳಸಿ ಕಣ್ಣಿಗೆ ಆಗಬಹುದಾದ ಹಾನಿಯನ್ನು ತಪ್ಪಿಸಬಹುದಾಗಿದೆ.
-ಪಿ.ಜಿ.ಆರ್