ಮಡಿಕೇರಿ, ಅ.೨೩: ಗ್ರಾಮೀಣ ಜನತೆಗೆ ಉತ್ತಮ ಚಿಕಿತ್ಸೆ ನೀಡುವಲ್ಲಿ ಅನೇಕ ದಶಕಗಳಿಂದ ನಿಟ್ಟೆ ವಿಶ್ವವಿದ್ಯಾನಿಲಯದ ಎ.ಬಿ. ಶೆಟ್ಟಿ ಸ್ಮಾರಕ ಆಸ್ಪತ್ರೆಗಳು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದು, ಬಡರೋಗಿ ಗಳಿಗೆ ಬಹುತೇಕ ಚಿಕಿತ್ಸೆಯನ್ನು ಉಚಿತವಾಗಿ ಕಲ್ಪಿಸಲಾಗುತ್ತಿದೆ ಎಂದು ಎ.ಬಿ ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜಿನ ದಂತ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ಚೇತನ ಹೆಗಡೆ ಹೇಳಿದರು.
ನಗರದ ಅಶ್ವಿನಿ ಆಸ್ಪತ್ರೆಯಲ್ಲಿ ನಿಟ್ಟೆ ವಿವಿ ಆಶ್ರಯದಲ್ಲಿ ಮಂಗಳೂರಿನ ಎಬಿ ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜಿನ ವತಿಯಿಂದ ಆಯೋಜಿತ ವಾಗಿದ್ದ ಉಚಿತ ದಂತ ಜೋಡಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಡಾ. ಚೇತನ ಹೆಗಡೆ, ಹಿರಿಯ ನಾಗರಿಕರು ವಯೋಸಹಜತೆಯಿಂದ ಹಲ್ಲುಗಳನ್ನು ಕಳೆದುಕೊಳ್ಳುತ್ತಾರೆ. ಈ ಸಂದಭ ಕೃತಕ ದಂತ ಅಳವಡಿಕೆಗೆ ಐದಾರು ಬಾರಿ ಆಸ್ಪತ್ರೆಗೆ ಬರಲು ಕಷ್ಟಸಾಧ್ಯವಾದ ಪರಿಸ್ಥಿತಿಯಲ್ಲಿ ಹಿರಿಯ ನಾಗರಿಕರಿರು ತ್ತಾರೆ. ಇವರನ್ನು ಗಮನಿಸಿ ಎ.ಬಿ ದಂತ ಮಹಾವಿದ್ಯಾಲಯದಿಂದ ಉಚಿತವಾಗಿ ದಂತಜೋಡಣಾ ಶಿಬಿರವನ್ನು ದೇಶದಲ್ಲಿಯೇ ಮೊದಲ ಬಾರಿಗೆ ೧೯೮೯ರಲ್ಲಿ ಪ್ರಾರಂಭಿಸಿತ್ತು. ಇಂದಿನವರೆಗೂ ಲಕ್ಷಾಂತರ ಮಂದಿ ದೇಶವ್ಯಾಪಿ ಶಿಬಿರದ ಪ್ರಯೋಜನ ಪಡೆದಿದ್ದಾರೆ ಎಂದು ಹೆಮ್ಮೆಯಿಂದ ಮಾಹಿತಿ ನೀಡಿದರು. ದುಬಾರಿ ವೆಚ್ಚದ ದಂತ ಚಿಕಿತ್ಸೆಗಳು ಆರ್ಥಿಕವಾಗಿ ಕಷ್ಟದಲ್ಲಿರುವವರಿಗೆ ಎ.ಬಿ. ಆಸ್ಪತ್ರೆ ಯಲ್ಲಿ ಉಚಿತವಾಗಿ ದೊರಕುತ್ತದೆ ಎಂದೂ ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ರೋಟರಿ ಜಿಲ್ಲಾ ಪಬ್ಲಿಕ್ ಇಮೇಜ್ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ., ರೋಟರಿಯು ಆರೋಗ್ಯ ಸಿರಿ ಯೋಜನೆ ಮೂಲಕ ರೋಟರಿ ಜಿಲ್ಲೆಯಲ್ಲಿ ಆರೋಗ್ಯ ಸಂಬAಧಿತ ಅನೇಕ ಮಹತ್ವದ ಯೋಜನೆ
(ಮೊದಲ ಪುಟದಿಂದ) ಜಾರಿಗೊಳಿಸುತ್ತಿದೆ. ರೋಟರಿಯಿಂದಾಗಿ ವಿಶ್ವದಲ್ಲಿಯೇ ಪೋಲಿಯೋ ಸೋಂಕು ಶೇ. ೯೯ ರಷ್ಟು ನಿರ್ಮೂಲನೆಯಾಗಿದ್ದು ಪಾಕಿಸ್ತಾನ ಮತ್ತು ಅಫಘಾನಿಸ್ತಾನ ಹೊರತುಪಡಿಸಿ ಬೇರೆ ದೇಶಗಳು ಪೋಲಿಯೋ ಮುಕ್ತವಾಗಿದೆ. ಪೋಲಿಯೋ ಜಗತ್ತಿನಿಂದಲೇ ಕಣ್ಮರೆಯಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗುವ ದಿನಗಳು ಸನಿಹದಲ್ಲಿದೆ. ಇದಕ್ಕೆ ರೋಟರಿ ಎಂಬ ಜಾಗತಿಕ ಸೇವಾ ಸಂಸ್ಥೆಯ ಕೊಡುಗೆ ಮಹತ್ತರವಾದದ್ದು ಎಂದರು. ಕೊಡಗಿನಲ್ಲಿ ಅಶ್ವಿನಿ ಆಸ್ಪತ್ರೆಗೆ ಹಲವಾರು ದಶಕಗಳ ಉತ್ತಮ ಆರೋಗ್ಯ ಸೇವೆಯ ಇತಿಹಾಸವಿದೆ. ನೇತ್ರ ಶಿಬಿರಕ್ಕೆ ಖ್ಯಾತವಾಗಿದ್ದ ಅಶ್ವಿನಿ ಇದೀಗ ಡಾ. ಅನುಶ್ರೀ ಅನಂತಶಯನ ಪ್ರಯತ್ನದಿಂದ ದಂತ ತಪಾಸಣಾ ಶಿಬಿರಕ್ಕೂ ಹೆಸರಾಗಿರುವುದು (ಮೊದಲ ಪುಟದಿಂದ) ಜಾರಿಗೊಳಿಸುತ್ತಿದೆ. ರೋಟರಿಯಿಂದಾಗಿ ವಿಶ್ವದಲ್ಲಿಯೇ ಪೋಲಿಯೋ ಸೋಂಕು ಶೇ. ೯೯ ರಷ್ಟು ನಿರ್ಮೂಲನೆಯಾಗಿದ್ದು ಪಾಕಿಸ್ತಾನ ಮತ್ತು ಅಫಘಾನಿಸ್ತಾನ ಹೊರತುಪಡಿಸಿ ಬೇರೆ ದೇಶಗಳು ಪೋಲಿಯೋ ಮುಕ್ತವಾಗಿದೆ. ಪೋಲಿಯೋ ಜಗತ್ತಿನಿಂದಲೇ ಕಣ್ಮರೆಯಾಗಿ ಇತಿಹಾಸದ ಪುಟಗಳಲ್ಲಿ ದಾಖಲಾಗುವ ದಿನಗಳು ಸನಿಹದಲ್ಲಿದೆ. ಇದಕ್ಕೆ ರೋಟರಿ ಎಂಬ ಜಾಗತಿಕ ಸೇವಾ ಸಂಸ್ಥೆಯ ಕೊಡುಗೆ ಮಹತ್ತರವಾದದ್ದು ಎಂದರು. ಕೊಡಗಿನಲ್ಲಿ ಅಶ್ವಿನಿ ಆಸ್ಪತ್ರೆಗೆ ಹಲವಾರು ದಶಕಗಳ ಉತ್ತಮ ಆರೋಗ್ಯ ಸೇವೆಯ ಇತಿಹಾಸವಿದೆ. ನೇತ್ರ ಶಿಬಿರಕ್ಕೆ ಖ್ಯಾತವಾಗಿದ್ದ ಅಶ್ವಿನಿ ಇದೀಗ ಡಾ. ಅನುಶ್ರೀ ಅನಂತಶಯನ ಪ್ರಯತ್ನದಿಂದ ದಂತ ತಪಾಸಣಾ ಶಿಬಿರಕ್ಕೂ ಹೆಸರಾಗಿರುವುದು ಮಾತನಾಡಿ, ೧೯೯೪ ರಲ್ಲಿ ೪೩ ಶಿಬಿರಾರ್ಥಿಗಳ ಮೂಲಕ ಅಶ್ವಿನಿ ಆಸ್ಪತ್ರೆಯಲ್ಲಿ ಮೊದಲ ಆರೋಗ್ಯ ತಪಾಸಣಾ ಶಿಬಿರ ಆಯೋಜಿತ ವಾಗಿತ್ತು ಎಂದು ಸ್ಮರಿಸಿಕೊಂಡರು. ಶಕ್ತಿ ಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ, ಶಿಬಿರಕ್ಕೆ ಸಹಯೋಗ ನೀಡಿದ ರೋಟರಿ ಮಡಿಕೇರಿ ವುಡ್ಸ್ನ ಕಾರ್ಯದರ್ಶಿ ಕೆ. ವಸಂತ್ ಕುಮಾರ್ ವೇದಿಕೆಯಲ್ಲಿದ್ದರು.
ಅಶ್ವಿನಿ ಆಸ್ಪತ್ರೆಯ ಸಲಹೆಗಾರರಾದ ಛಾಯಾ ನಂಜಪ್ಪ, ರೋಟರಿ ವುಡ್ಸ್ ಗೌರವ ಸಲಹೆಗಾರ ಬಿ.ಜಿ. ಅನಂತಶಯನ, ಅಶ್ವಿನಿ ಆಸ್ಪತ್ರೆಯ ಟ್ರಸ್ಟಿ ಮೋಹನ್ ದಾಸ್ , ರೋಟರಿ ವುಡ್ಸ್ ಸದಸ್ಯರು ಪಾಲ್ಗೊಂಡಿದ್ದರು. ರೋಟರಿ ವುಡ್ಸ್ ಉಪಾಧ್ಯಕ್ಷೆ ಪದ್ಮಗಿರಿ ಸ್ವಾಗತಿಸಿ, ಅಶ್ವಿನಿ ಆಸ್ಪತ್ರೆಯ ದಂತವೈದ್ಯೆ ಡಾ.ಅನುಶ್ರೀ ಅನಂತಶಯನ ನಿರೂಪಿಸಿ ವಂದಿಸಿದರು. ಪ್ರಮೀಳಾ ಶೆಟ್ಟಿ ಪ್ರಾರ್ಥಿಸಿದರು. ಶಿಬಿರದಲ್ಲಿ ೨೦ ಮಂದಿಗೆ ಕೃತಕ ದಂತ ಪಂಕ್ತಿ ಅಳವಡಿಸಲಾಯಿತು.