ಮಡಿಕೇರಿ, ಅ. ೨೩: ಓಣಂ ಪ್ರಯುಕ್ತ ಮಡಿಕೇರಿ ಹಿಂದೂ ಮಲೆಯಾಳಿ ಸಂಘ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ವಿವಿಧ ಕ್ರೀಡಾಕೂಟ ಗಳು ನಡೆದವು. ಮಲೆಯಾಳಿಗರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಕ್ರಿಕೆಟ್ ಪಂದ್ಯಾಟದಲ್ಲಿ ‘ವಾಮನನ್’ ತಂಡ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ನಾಕೌಟ್ ಮಾದರಿಯಲ್ಲಿ ನಡೆದ ೫ ಓವರ್ ಪಂದ್ಯದಲ್ಲಿ ೬ ತಂಡಗಳು ಪಾಲ್ಗೊಂಡಿದ್ದವು. ಫೈನಲ್ನಲ್ಲಿ ಟಾಸ್ ಸೋತ ‘ಮಲೆಯಾಳಿ ಸ್ಟೆçöÊಕರ್ಸ್’ ತಂಡ ನಿಗದಿತ ೫ ಓವರ್ನಲ್ಲಿ ೧ ವಿಕೆಟ್ ಮಡಿಕೇರಿ, ಅ. ೨೩: ಓಣಂ ಪ್ರಯುಕ್ತ ಮಡಿಕೇರಿ ಹಿಂದೂ ಮಲೆಯಾಳಿ ಸಂಘ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ವಿವಿಧ ಕ್ರೀಡಾಕೂಟ ಗಳು ನಡೆದವು. ಮಲೆಯಾಳಿಗರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಕ್ರಿಕೆಟ್ ಪಂದ್ಯಾಟದಲ್ಲಿ ‘ವಾಮನನ್’ ತಂಡ ಚಾಂಪಿಯನ್ ಪ್ರಶಸ್ತಿಯನ್ನು ಪಡೆದುಕೊಂಡಿತ್ತು. ನಾಕೌಟ್ ಮಾದರಿಯಲ್ಲಿ ನಡೆದ ೫ ಓವರ್ ಪಂದ್ಯದಲ್ಲಿ ೬ ತಂಡಗಳು ಪಾಲ್ಗೊಂಡಿದ್ದವು. ಫೈನಲ್ನಲ್ಲಿ ಟಾಸ್ ಸೋತ ‘ಮಲೆಯಾಳಿ ಸ್ಟೆçöÊಕರ್ಸ್’ ತಂಡ ನಿಗದಿತ ೫ ಓವರ್ನಲ್ಲಿ ೧ ವಿಕೆಟ್ ಇದಕ್ಕೂ ಮುನ್ನ ನಡೆದ ಪ್ರದರ್ಶನ ಪಂದ್ಯದಲ್ಲಿ ಕೊಡಗು ಪತ್ರಕರ್ತರ ಸಂಘದ ವಿರುದ್ಧ ದಿನೇಶ್ ನಾಯಕತ್ವದ ಅತಿಥೇಯ ತಂಡ ಗೆಲುವು ಸಾಧಿಸಿತು. ಸಮಾಜ ಬಾಂಧವರಿಗೆ ಹಗ್ಗಜಗ್ಗಾಟ, ಗೋಣಿಚೀಲದ ಓಟ, ಮ್ಯೂಸಿಕಲ್ ಚೇರ್, ಮಡಿಕೆ ಒಡೆಯುವುದು, ಕಾಲುಕಟ್ಟಿ ಓಟ, ವೇಗದ ನಡಿಗೆ ನಡೆಯಿತು. ಮಹಿಳೆಯರಿಗೆ ನಿಂಬೆ ಚಮಚ ಓಟ, ಹಗ್ಗಜಗ್ಗಾಟ, ಸೂಜಿ ನೂಲಿನ ಓಟ, ಬಲೂನ್ ಬ್ಲಾಸ್ಟ್, ಬಾಂಬ್ ಇನ್ ದಿ ಸಿಟಿ ಸ್ಪರ್ಧೆ ನಡೆದರೆ, ಮಕ್ಕಳಿಗೆ ಕಾಳು ಹೆಕ್ಕುವುದು, ಚಿತ್ರಕಲೆ ಸ್ಪರ್ಧೆ-ಪೂಕಳಂ, ಗೋಣಿಚೀಲ
(ಮೊದಲ ಪುಟದಿಂದ) ಓಟ ಸ್ಪರ್ಧೆ ನಡೆಯಿತು. ನವೆಂಬರ್ ೧ ರಂದು ನಗರದ ಕಾವೇರಿ ಹಾಲ್ ಸಭಾಂಗಣದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಗುವುದು. ಅಲ್ಲದೇ ಅಂದು, ಪೂಕಳಂ(ಹೂವಿನ ರಂಗೋಲಿ) ಸ್ಪರ್ಧೆ ಬೆಳಗ್ಗೆ ೭ರಿಂದ ೯ ಗಂಟೆಯ ವರೆಗೆ ಏರ್ಪಡಿಸಲಾಗಿದೆ. ಆಸಕ್ತರು ೯೯೦೦೮೮೯೧೨೪ ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು. ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೆಸರು ನೊಂದಾಯಿಸಿಲು ೭೨೫೯೬೪೩೦೩೪ ಸಂಪರ್ಕಿಸಬಹುದು. ಅಲ್ಲದೇ, ೨೦೨೦, ೨೦೨೧, ೨೦೨೨ ಸಾಲಿನ ೧೦ನೇ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಗುವುದು (ನೋಂದಾವಣಿ-೯೯೦೦೩೯೨೩೩೨). ಜೊತೆಗೆ ಮಾಜಿ ಸೈನಿಕರನ್ನು ಸನ್ಮಾನಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಎಸ್. ರಮೇಶ್ ತಿಳಿಸಿದರು.
ಕ್ರೀಡಾಕೂಟಕ್ಕೆ ಹಟ್ಟಿಹೊಳೆಯ ಕಾಫಿ ಬೆಳೆಗಾರ ಗೌತಮ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಕೆ.ಎಸ್.ರಮೇಶ್, ಕಾರ್ಯದರ್ಶಿ ಧರ್ಮೇಂದ್ರ ಯೂತ್ವಿಂಗ್ನ ಅಧ್ಯಕ್ಷ ಎಂ.ಎಸ್.ದಿನೇಶ್, ಮಹಿಳಾ ಘಟಕದ ಅಧ್ಯಕ್ಷೆ ಲತ ರಾಜನ್, ಓಣಾಘೋಷಂ-ಓಣA ಸದ್ಯ ಕಾರ್ಯಕ್ರಮದ ಅಧ್ಯಕ್ಷ ವಾಸುದೇವಾ, ಪ್ರಮುಖರಾದ ಪ್ರಮೋದ್, ಅಶೋಕ್, ಗೋಪಿ ಇತರರಿದ್ದರು.