ಸೋಮವಾರಪೇಟೆ,ಅ.೨೩: ಶಾಂತಳ್ಳಿ ಹೋಬಳಿ ವ್ಯಾಪ್ತಿಗೆ ಸಂಬAಧಿಸಿದAತೆ ತಾ. ೨೮ರಂದು ಶಾಂತಳ್ಳಿ ಕುಮಾರಲಿಂಗೇಶ್ವರ ಸಮುದಾಯ ಭವನದಲ್ಲಿ ಪೌತಿ ಖಾತೆ ಆಂದೋಲನ ಹಮ್ಮಿಕೊಳ್ಳಲಾಗಿದ್ದು, ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಕಂದಾಯ ನಿರೀಕ್ಷಕ ದಾಮೋದರ್ ತಿಳಿಸಿದ್ದಾರೆ.
ತಾ. ೨೮ರಂದು ಬೆಳಿಗ್ಗೆ ೧೧ ಗಂಟೆಯಿAದ ೧ ಗಂಟೆಯವರೆಗೆ ಉಪ ತಹಶಿಲ್ದಾರ್ ನೇತೃತ್ವದಲ್ಲಿ ಆಂದೋಲನ ನಡೆಯಲಿದ್ದು, ಶಾಂತಳ್ಳಿ ವೃತ್ತಕ್ಕೆ ಸಂಬAಧಪಟ್ಟ ಗ್ರಾಮಗಳಾದ ಶಾಂತಳ್ಳಿ, ತಲ್ತರೆಶೆಟ್ಟಳ್ಳಿ, ಅಭಿಮಠ ಮತ್ತು ಹರಗ ಗ್ರಾಮಸ್ಥರು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ದಾಮೋದರ್ ಮನವಿ ಮಾಡಿದ್ದಾರೆ.