ಮಡಿಕೇರಿ, ಅ. ೨೩: ‘ಬೀತಿಯ ಜಗತ್ತಿಗೆ ಪ್ರೀತಿಯ ಪ್ರವಾದಿ' ಎಂಬ ಶೀರ್ಷಿಕೆಯಡಿ ಕೊಡಗು ಜಿಲ್ಲಾ ಎಸ್ .ವೈ.ಎಸ್ ಹಾಗೂ ಎಸ್.ಎಸ್.ಎಫ್ ಸಂಘಟನೆಗಳ ವತಿಯಿಂದ ತಾ. ೨೫ ರಂದು ಅಪರಾಹ್ನ ೩ ಗಂಟೆಗೆ ಮಿಲಾದ್ ಸಂದೇಶ ಜಾಥಾ ನಡೆಯಲಿದೆ ಎಂದು ಎಸ್.ವೈ.ಎಸ್ ಜಿಲ್ಲಾ ಕಾರ್ಯದರ್ಶಿ ವಿ.ಪಿ ಮೊಯ್ದೀನ್ ಪೊನ್ನತ್ಮೊಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರವಾದಿ ಮುಹಮ್ಮದ್ ರವರ ಸಂದೇಶ ಜಗತ್ತಿಗೆ ತಿಳಿಸುವ ಉದ್ದೇಶದಿಂದ ಕೊಡಗು ಜಿಲ್ಲಾ ಎಸ್.ವೈ.ಎಸ್ ಹಾಗೂ ಎಸ್.ಎಸ್.ಎಫ್ ವತಿಯಿಂದ ಮಡಿಕೇರಿ ಗದ್ದಿಗೆಯಿಂದ, ಗಾಂಧಿ ಮೈದಾನದವರೆಗೆ ಪ್ರವಾದಿ ಸಂದೇಶ ಜಾಥಾ ನಡೆಯಲಿದೆ.
ಮಧ್ಯಾಹ್ನ ೩ ಗಂಟೆಗೆ ಗದ್ದಿಗೆಯಲ್ಲಿ ಸೈಯದ್ ಇಲ್ಯಾಸ್ ತಂಙಳ್ ಪ್ರಾರ್ಥನೆ ನಿರ್ವಹಿಸಿ , ಕೊಡಗು ಜಿಲ್ಲಾ ಖಾಝೀ ಶಾದುಲಿ ಫೈಝಿ ರವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ನ್ಯಾಯವಾದಿ ಕುಞ್ಞ ಅಬ್ದುಲ್ಲ ಉದ್ಘಾಟನೆ ಮಾಡಲಿದ್ದು, ಹನೀಫ್ ಸಖಾಫಿ ಕೊಂಡAಗೇರಿ ಹಾಗೂ ಶಾಫಿ ಸಅದಿ ಸೋಮವಾರಪೇಟೆ, ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಅಶ್ರಫ್ ಅಹ್ಸನಿ, ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಮುಹಮ್ಮದ್ ಹಾಜಿ ಕುಂಜಿಲ, ಪಿ. ಎಮ್ ಲತೀಫ್ ಸುಂಟಿಕೊಪ್ಪ, ಮುಸ್ತಫಾ ಸಖಾಫಿ, ಸೇರಿ ಜಿಲ್ಲೆಯ ಮುಸ್ಲಿಂ ನಾಯಕರೂ ವಿದ್ವಾಂಸರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.