ಗೋಣಿಕೊಪ್ಪ ವರದಿ, ಅ. ೨೨: ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜ, ಟಿ. ಶೆಟ್ಟಿಗೇರಿ ಗೌರಿ-ಗಣೇಶ ಸೇವಾ ಸಮಿತಿ, ಸಂಭ್ರಮ ಪೊಮ್ಮಕ್ಕಡ ಕ್ರೀಡೆ, ಸಾಂಸ್ಕೃತಿಕ ಸಂಸ್ಥೆ, ಕೊಡವ ತಕ್ಕ್ ಎಳ್ತ್ಕಾರಡ ಕೂಟ, ಶ್ರೀಮಂಗಲ ಕೊಡವ ಸಮಾಜ ಪೊಮ್ಮಕ್ಕಡ ಕೂಟ ಸಹಯೋಗದಲ್ಲಿ ಕಾವೇರಿ ಚಂಗ್ರಾAದಿ ಪತ್ತಾಲೋದಿ ಕಾರ್ಯಕ್ರಮವದಲ್ಲಿ ಕೊಡವ ಸಂಗೀತ ರಸಮಂಜರಿ ನಡೆಯಿತು.

ಕೊಡವ ನೈಟ್ಸ್ ಸಿಂಪೋನಿ ತಂಡವು ಕೊಡವ ಹಾಡು ಪ್ರಸ್ತುತ ಪಡಿಸಿತು. ಉಳುವಂಗಡ ಲೋಹಿತ್ ಭೀಮಯ್ಯ, ಪುತ್ತಾಮನೆ ವಿದ್ಯಾ ಜಗದೀಶ್, ಮೋಹಿತ್ ಭೀಮಯ್ಯ ಸೇರಿದಂತೆ ಇನ್ನಿತರ ಗಾಯಕರು ಕೊಡವ ಹಾಡುಗಳಿಗೆ ಧನಿಯಾದರು. ವಿ.ಟಿ. ಶ್ರೀನಿವಾಸ್ ಕೀಬೋರ್ಡ್ಸ್, ಚಂದ್ರು ತಬಲ ನುಡಿಸಿದರು.

ತಾವಳಗೇರಿ ಮೂಂದ್‌ನಾಡ್ ಕೊಡವ ಸಮಾಜ ಅಧ್ಯಕ್ಷ ಚೊಟ್ಟೆಯಂಡಮಾಡ ಬೋಸು ವಿಶ್ವನಾಥ್, ನಾಡ್‌ತಕ್ಕ ಕೈಬಿಲಿರ ಹರೀಶ್ ಅಪ್ಪಯ್ಯ, ಕಾರ್ಯದರ್ಶಿ ಮನ್ನೇರ ರಮೇಶ್, ಸಾಂಸ್ಕೃತಿಕ ಮತ್ತು ಕ್ರೀಡಾ ಕಾರ್ಯದರ್ಶಿ ಕಟ್ಟೇರ ಈಶ್ವರ, ನಿರ್ದೇಶಕ ಕೋಟೃಮಾಡ ಸುಮಂತ್ ಮಾದಪ್ಪ, ಶ್ರೀಮಂಗಲ ಕೊಡವ ಸಮಾಜ ಪೊಮ್ಮಕ್ಕಡ ಕೂಟ ಅಧ್ಯಕ್ಷೆ ನೆಲ್ಲೀರ ನೀನಾ ಪ್ರಮುಖರು ಇದ್ದರು.