ಚೆಟ್ಟಳ್ಳಿ, ಅ. ೨೨: ಹಲವು ಕಾಡುಪ್ರಾಣಿÂಗಳ ಉಪಟಳದಿಂದ ವರ್ಷಕ್ಕೆ ಸಿಗುವ ಫಸಲಿಗೆ ನಿತ್ಯವೂ ತೊಂದರೆಯೇ ಹಲವು ರೋಗಗಳಿಗೆ ತುತ್ತಾಗಿ ಸೊರಗುತ್ತಿರುವ ಕರಿಮೆಣಸು ಬಳ್ಳಿಗಳಿಗೆ ಮುಳ್ಳು ಹಂದಿಗಳ ಉಪಟಳದಿಂದ ಬೆಳೆಗಾರನಿಗೆ ತಲೆನೋವಾಗಿ ಪರಿಣಮಿಸಿದೆ. ಪ್ಲಾಸ್ಟಿಕ್ ಚೀಲಗಳನ್ನು ಬುಡಕ್ಕೆ ಹೊದಿಸುವ ಮೂಲಕ ಮುಳ್ಳು ಹಂದಿಯಿAದ ರಕ್ಷಿಸುವ ಪ್ರಯತ್ನವಾಗುತ್ತಿದೆ.

ಬೆಳೆಗಾರನ ಹಲವು ವರ್ಷಗಳ ಶ್ರಮದ ಫಲವಾಗಿ ವರ್ಷದ ಫಸಲಿನ ನಿರೀಕ್ಷೆಯಲ್ಲಿದ್ದಾಗ ಕರಿಮೆಣಸು ಬಳ್ಳಿಗಳು ಬುಡದಿಂದಲೇ ಒಣಗುತ್ತಿದ್ದಂತೆ ಪರಿಶೀಲಿಸಿದಾಗ ಸಣ್ಣಗಿನ ಗುಂಡಿ ಅಗೆದು ಬುಡವನ್ನು ತುಂಡರಿಸಿದAತೆ ಕಾಣುತ್ತದೆ. ಮೈಯೆಲ್ಲ ಮುಳ್ಳು ಹೊಂದಿರುವ ಸಣ್ಣ ಪ್ರಾಣಿಗಳ ಪ್ರಭೇದಕ್ಕೆ ಸೇರುವ ಮುಳ್ಳಂದಿಗಳು ಬುಡವನ್ನು ಅಗೆದು ಬಳ್ಳಿಯನ್ನು ತುಂಡರಿಸುತ್ತಿವೆ.

ಬಳ್ಳಿಯ ಬುಡಕ್ಕೆ ಪ್ಲಾಸ್ಟಿಕ್ ಚೀಲದ ಹೊದಿಕೆ..

ಮುಳ್ಳಂದಿಯಿAದ ಬೇಸತ್ತ ಬೆಳೆಗಾರ ವಿವಿಧ ರಾಸಾಯನಿಕಗಳನ್ನು ಸಿಂಪಡಿಸಿ, ಕೆಲವೆಡೆ ನಿಯಂತ್ರಣಗೊAಡರೂ ಮತ್ತೆ ಕೆಲವೆಡೆ ಯಾವುದೇ ಪ್ರಯೋಜನವಾಗಿಲ್ಲ. ಸೋಮವಾರಪೇಟೆ ತಾಲೂಕು ಮಾದಾಪುರ ಸಮೀಪದ ಬಿಳಿಗೇರಿ ಗ್ರಾಮದ ಹಲವು ತೋಟಗಳಲ್ಲಿ ಈಗಾಗಲೇ ಫಸಲು ಬಿಟ್ಟಿರುವ ಕರಿಮೆಣಸು ಬಳ್ಳಿಗಳನ್ನು ಮುಳ್ಳು ಹಂದಿಗಳು ಕತ್ತರಿಸಿವೆ. ಉಳಿದ ಬಳ್ಳಿಗಳ ರಕ್ಷಣೆಗಾಗಿ ಪ್ಲಾಸ್ಟಿಕ್ ಚೀಲಗಳನ್ನು ಕರಿಮೆಣಸು ಬಳ್ಳಿಗಳ ಬುಡಕ್ಕೆ ಹೊದಿಸಿ ಮುಳ್ಳಂದಿಯಿAದ ಬಳ್ಳಿಗಳ ರಕ್ಷಣೆ ಮಾಡಲು ಹೊರಟಿದ್ದಾರೆ. ಮಾರುಕಟ್ಟೆಗಳಲ್ಲಿ ಮುಳ್ಳುಹಂದಿಗಳ ನಿಯಂತ್ರಣಕ್ಕೆ ಹಲವು ರಾಸಾಯನಿಕಗಳು ದೊರೆಯುತ್ತವೆಯಾದರೂ ಫಲಕಾರಿಯಾಗುವ ಬಗ್ಗೆ ಇಲಾಖೆಯಲ್ಲಿ ಯಾವುದೇ ಮಾಹಿತಿ ಇಲ್ಲ. - ಪುತ್ತರಿರ ಕರುಣ್ ಕಾಳಯ್ಯ