ಮಡಿಕೇರಿ, ಅ. 21: ಕೊಡಗು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್ ಸಿಂಗ್ ಮೀನಾ ಅವರನ್ನು ಸರಕಾರ ವರ್ಗಾವಣೆ ಮಾಡಿದೆ. ಅವರನ್ನು ಕೆಪಿಎಸ್‍ಸಿ ಪರೀಕ್ಷಾ ಮಂಡಳಿ ಕಂಟ್ರೋಲರ್ ಆಗಿ ನಿಯೋಜನೆ ಮಾಡಲಾಗಿದೆ.

ಭಂವರ್ ಸಿಂಗ್ ಅವರ ಸ್ಥಾನಕ್ಕೆ ಬಳ್ಳಾರಿ ಉಪವಿಭಾಗಾಧಿಕಾರಿ ಯಾಗಿದ್ದ ಡಾ. ಎಸ್. ಆಕಾಶ್ ಅವರನ್ನು ನಿಯೋಜನೆ ಮಾಡಲಾಗಿದೆ. ಕೊಡಗು ಜಿಲ್ಲಾಧಿಕಾರಿ ಯಾಗಿರುವ

ಡಾ. ಬಿ.ಸಿ. ಸತೀಶ ಅವರು ಕಾಲು ನೋವಿನಿಂದ ಬಳಲುತ್ತಿರು ವುದರಿಂದ ಪ್ರಬಾರ ಜಿಲ್ಲಾಧಿಕಾರಿಯಾಗಿಯೂ ಭಂವರ್‍ಸಿಂಗ್ ಮೀನಾ ಅವರು ಕಾರ್ಯ ನಿರ್ವಹಣೆ ಮಾಡುತ್ತಿದ್ದರು.